ಕೊಳ್ಳೇಗಾಲ ಗಡಿಯಲ್ಲಿ ಚೆಕ್‍ಪೆÇೀಸ್ಟ್ ಪ್ರಾರಂಭ, ತೀವ್ರ ಕಟ್ಟೆಚ್ಚರ
ಚಾಮರಾಜನಗರ

ಕೊಳ್ಳೇಗಾಲ ಗಡಿಯಲ್ಲಿ ಚೆಕ್‍ಪೆÇೀಸ್ಟ್ ಪ್ರಾರಂಭ, ತೀವ್ರ ಕಟ್ಟೆಚ್ಚರ

April 25, 2021

ಕೊಳ್ಳೇಗಾಲ,ಏ.24(ಎನ್.ನಾಗೇಂದ್ರ)- ಕೊರೊನಾ ಮೊದ ಲನೇ ಅಲೆಯಲ್ಲಿ ಚಾಮರಾಜನಗರ ಬರೋಬ್ಬರಿ 3 ತಿಂಗಳಲ್ಲಿ ಒಂದೇ ಒಂದು ಪ್ರಕರಣ ಕಾಣಿಸಿಕೊಳ್ಳದೇ ಹಸಿರು ವಲಯ ದಲ್ಲಿತ್ತು. ಆದರೆ, 2ನೇ ಅಲೆಯಲ್ಲಿ ನಿತ್ಯ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನೆÀ್ನಲೆ ಜಿಲ್ಲಾಡಳಿತ ತೀವ್ರ ಕಟ್ಟೆಚ್ಚರ ವಹಿಸಿದ್ದು ಗಡಿ ತಾಲೂಕಿನಲ್ಲಿ ಚೆಕ್ ಪೆÇೀಸ್ಟ್ ಪ್ರಾರಂಭಿಸುವ ಮೂಲಕ ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಿದೆ.

ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವು ದರಿಂದ ರಾಜ್ಯಾದ್ಯಂತ ವಾರಾಂತ್ಯದ ಕಫ್ರ್ಯೂ ಜಾರಿಯಲ್ಲಿರುವ ಹಿನೆÀ್ನಲೆ ತಾಲೂಕಿನ ಗಡಿಯಲ್ಲಿ ಚೆಕ್‍ಪೆÇೀಸ್ಟ್ ತೆರೆಯಲಾಗಿದ್ದು ತೀವ್ರ ಬಂದೋಬಸ್ತ್ ಏರ್ಪಡಿಸಲಾಗಿದೆ. ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೆÇೀಸ್ಟ್ ಹಾಗೂ ಮೈಸೂರು ಮಾರ್ಗದ ಟಗರಪುರ ರಸ್ತೆಯಲ್ಲಿ ಚೆಕ್‍ಪೆÇೀಸ್ಟ್ ತೆರೆಯಲಾಗಿದ್ದು, ಜಿಲ್ಲಾಡಳಿತ ಆದೇಶದ ಮೇರೆಗೆ ಚೆಕ್‍ಪೆÇೀಸ್ಟ್‍ಗೆ ತುರ್ತು ಸೇವೆಗಳ ವಾಹನಗಳ ಹೊರತುಪಡಿಸಿ ಸುಖಾಸುಮ್ಮನೆ ಓಡಾಡುವರ ವಾಹನಗಳಿಗೆ ಕಡಿವಾಣ ಬೀಳಲಿದೆ.

ಪ್ರತಿ ಚೆಕ್ ಪೆÇೀಸ್ಟ್‍ನಲ್ಲಿ ಓರ್ವ ಎಎಸ್‍ಐ ಸೇರಿದಂತೆ 4 ಮಂದಿ ಪೆÇಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಏ.23ರ ರಾತ್ರಿ 9ಗಂಟೆಯಿಂದ ಏ. 26ರ ಬೆಳಗ್ಗೆವರೆಗೂ ಚೆಕ್ ಪೆÇೀಸ್ಟ್ ಕಾರ್ಯ ನಿರ್ವಹಿಸಲಿದ್ದು, 2 ಪಾಳಿಯಲ್ಲಿ ದಿನದ 24 ಗಂಟೆಗಳ ಕಾಲವೂ ಪೆÇಲೀಸರು ಕಾರ್ಯನಿರ್ವಹಿಸಲಿದ್ದಾರೆ. ಅಗತ್ಯ ಸೇವೆಗಳ ಗೂಡ್ಸ್ ವಾಹನಗಳು, ಆಂಬ್ಯುಲೆನ್ಸ್, ಆರೋಗ್ಯ ತುರ್ತು ವಾಹನಗಳಿಗೆ ನಿರ್ಬಂಧ ವಿರುವುದಿಲ್ಲ. ವಾಹನಗಳಲ್ಲಿ ಕಡ್ಡಾಯ ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರವನ್ನು ಸಂಚಾರಿಗಳು ಪಾಲಿಸಬೇಕಿದೆ.

ನಿಯಮ ಉಲಂಘಿಸಿದವರಿಗೆ ದಂಡದ ಬಿಸಿಯನ್ನು ಪೆÇಲೀಸರು ಮುಟ್ಟಿಸಲಿದ್ದಾರೆ. ಸುಖಾಸುಮ್ಮನೆ ಓಡಾಡುವ ವಾಹನಗಳಿಗೆ ನಿರ್ಬಂಧ ವಿಧಿಸಿದ್ದು ಅಂತವರ ಮೇಲೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಸಹಾ ಈಗಾಗಲೇ ನೀಡಲಾಗಿದೆ.

Translate »