ವಾರಾಂತ್ಯ ಕಫ್ರ್ಯೂ; ಚಾಮರಾಜನಗರ ಜಿಲ್ಲೆ ಸ್ತಬ್ಧ
ಚಾಮರಾಜನಗರ

ವಾರಾಂತ್ಯ ಕಫ್ರ್ಯೂ; ಚಾಮರಾಜನಗರ ಜಿಲ್ಲೆ ಸ್ತಬ್ಧ

April 25, 2021

ಬೆಳಗ್ಗೆ 10ರ ನಂತರ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತ ರಸ್ತೆಗಿಳಿಯದ ಖಾಸಗಿ ಬಸ್, ಪ್ರಯಾಣಿಕರಿಲ್ಲದೆ ಸಂಚರಿಸಿದ ಬೆರಳೆಣಿಕೆಯ ಸಾರಿಗೆ ಬಸ್
ಆಸ್ಪತ್ರೆ, ಕ್ಲಿನಿಕ್, ಮೆಡಿಕಲ್ ಶಾಪ್ ಎಂದಿನಂತೆ ಕಾರ್ಯ ಬಿಕೋ ಎನ್ನುತ್ತಿದ್ದ ಪ್ರಮುಖ ರಸ್ತೆ, ವೃತ್ತಗಳು ಗ್ರಾಮೀಣ ಪ್ರದೇಶದಲ್ಲೂ ಕಫ್ರ್ಯೂಗೆ ಬೆಂಬಲ
ಚಾಮರಾಜನಗರ, ಏ.24(ಎಸ್‍ಎಸ್) -ಕೋವಿಡ್-19 ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯದ ಕಫ್ರ್ಯೂಗೆ ಶನಿವಾರ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕಫ್ರ್ಯೂ ಹಿನ್ನೆಲೆ ಇಡೀ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು.

ಏ.23ರ ಶುಕ್ರವಾರ ರಾತ್ರಿ 9 ಗಂಟೆ ಯಿಂದ 26ರ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವಾರಾಂತ್ಯದ ಕಫ್ರ್ಯೂ ಜಾರಿಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನಲ್ಲಿ ಜನರು ಮನೆಯಿಂದ ಹೊರಬಾರದೆ ಕಫ್ರ್ಯೂ ಬೆಂಬಲಿಸಿದರು.

ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗೆ ಶನಿವಾರ ಬೆಳಗ್ಗೆ 6 ಗಂಟೆಯಿಂದ 10ಗಂಟೆಯವರೆಗೆ ಅವ ಕಾಶ ನೀಡಲಾಗಿತ್ತು. ಈ ವೇಳೆ ಕೆಲವು ದಿನಸಿ ಅಂಗಡಿಗಳು, ಹಣ್ಣಿನ ಅಂಗಡಿಗಳು ಬಾಗಿಲು ತೆರೆದಿದ್ದರೂ ನಿರೀಕ್ಷಿತ ಪ್ರಮಾಣದ ಜನರು ಇಲ್ಲದ ಕಾರಣ ವ್ಯಾಪಾರ ಆಗಲಿಲ್ಲ. ಹಾಲಿನ ಕೇಂದ್ರ ತೆರೆದು ವ್ಯಾಪಾರ ನಡೆಸಿದವು. ಆಟೋಗಳ ಸಂಚಾರ ವಿರಳವಾಗಿತ್ತು. ಅಲ್ಲೊಂದು ಇಲ್ಲೊಂದು ಎಂಬಂತೆ ಕೆಎಸ್ ಆರ್‍ಟಿಸಿ ಬಸ್‍ಗಳ ಸಂಚರಿಸಿದವು. ಆದರೆ, ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು. ಖಾಸಗಿ ಬಸ್‍ಗಳು ತನ್ನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದವು. ಹೀಗಾಗಿ ಪ್ರಯಾಣಿಕರು ಪರದಾಡುವಂತಾಯಿತು. ಜನರು ಸಂಚಾರವೂ ಅಷ್ಟಾಗಿ ಕಂಡುಬರಲಿಲ್ಲ.

ಬೆಳಗ್ಗೆ 10ಗಂಟೆಯ ನಂತರ ದಿನಸಿ ಅಂಗಡಿ, ಹಣ್ಣಿನ ಅಂಗಡಿ ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿತು. ಅಲ್ಲಲ್ಲಿ ತೆರೆದಿದ್ದ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದರು. ಹೀಗಾಗಿ, ಜನನಿಬಿಡ ಪ್ರದೇಶಗಳಾದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಜೋಡಿ ರಸ್ತೆ, ಡಿವಿ ಯೇಷನ್ ರಸ್ತೆ, ಸಂತೇಮರಹಳ್ಳಿ ವೃತ್ತ, ನಂಜನಗೂಡು ವೃತ್ತ, ಗುಂಡ್ಲುಪೇಟೆ ವೃತ್ತ, ಸತ್ತಿ ವೃತ್ತ ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಬಿಕೋ ಎನ್ನುತ್ತಿದ್ದವು. ಆಸ್ಪತ್ರೆ ಗಳು, ಕ್ಲಿನಿಕ್‍ಗಳು ಹಾಗೂ ಔಷಧಿ ಅಂಗಡಿ ಗಳೂ ತೆರೆದಿದ್ದವು. ಆದರೆ ರೋಗಿಗಳ ಸಂಖ್ಯೆ ಕಡಿಮೆ ಇದ್ದದ್ದು ಕಂಡು ಬಂತು.

ದಂಡ ವಿಧಿಸಿದ ಪೊಲೀಸರು: ವಾರಾಂ ತ್ಯದ ಕಫ್ರ್ಯೂ ಇದ್ದರೂ ಅನಾವಶ್ಯಕವಾಗಿ ಬೈಕ್‍ನಲ್ಲಿ ಓಡಾಡುತ್ತಿದ್ದವರಿಗೆ ಪೊಲೀ ಸರು ನಗರದಲ್ಲಿ ದಂಡ ವಿಧಿಸಿದರು. ಡಿವೈಎಸ್‍ಪಿ ಪ್ರಿಯಾದರ್ಶಿನಿ ಸಾಣೆಕೊಪ್ಪ ಅವರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಾಸ್ಕ್ ಧರಿಸದೇ ಅನಾವಶಕ್ಯ ವಾಗಿ ಓಡಾಡುತ್ತಿದ್ದ ಪಾದಚಾರಿಗಳು ಹಾಗೂ ಬೈಕ್ ಸವಾರರಿಗೆ ಪರಿಸ್ಥಿತಿ ಯನ್ನು ಮನವರಿಕೆ ಮಾಡಿಕೊಟ್ಟರು. ಮತ್ತೆ ಕೆಲವರಿಗೆ ದಂಡ ವಿಧಿಸಿದರು. ಮತ್ತೆ ರಸ್ತೆ ಯಲ್ಲಿ ಕಂಡರೆ ಬೈಕ್‍ನ್ನು ವಶಪಡಿಸಿ ಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾ ಯೋಜನಾ ನಿರ್ದೇಶಕ ಸುರೇಶ್, ನಗರಸಭೆ ಆಯುಕ್ತ ಕರಿಬಸವಯ್ಯ, ಪಟ್ಟಣ ಠಾಣೆ ಇನ್‍ಸ್ಪೆಕ್ಟರ್ ಮಹೇಶ್ ನಗರ ಪ್ರದ ಕ್ಷಿಣೆ ನಡೆಸಿದರು. ಅಲ್ಲಲ್ಲಿ ಓಡಾಡುತ್ತಿದ್ದವರಿಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿ ಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಅವರೂ ಸಹ ನಗರದ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಿ ಗುಂಡ್ಲುಪೇಟೆಗೆ ತೆರಳಿದರು.

ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿನಲ್ಲಿ ಮಾಸ್ಕ್ ಧರಿ ಸದೇ ಓಡಾಡುವವರಿಂದ ಸುಮಾರು 14 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಕಳೆದ ಮೂರು ದಿನ ಗಳಲ್ಲಿ ಕೋವಿಡ್ ನಿಯಮ ಉಲ್ಲಂ ಘಿಸಿದ ಕಲ್ಯಾಣ ಮಂಟಪ, ಮದ್ಯದಂಗಡಿ ಸೇರಿದಂತೆ 54 ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ವಾರಾಂ ತ್ಯದ ಕಫ್ರ್ಯೂಗೆ ಜಿಲ್ಲೆಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.- ದಿವ್ಯ ಸಾರಾ ಥಾಮಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

ಸಮರ್ಪಕ ಚಿಕಿತ್ಸೆ ಇಲ್ಲ, ಕಳಪೆ ಆಹಾರ ವಿತರಣೆ ಆರೋಪ
ಕೊರೊನಾ ಸೋಂಕಿತರಿಂದ ಪ್ರತಿಭಟನೆ
ಚಾಮರಾಜನಗರ, ಏ.24(ಎಸ್‍ಎಸ್)- ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಹಾಗೂ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಸಂತೇ ಮರಹಳ್ಳಿ ಕೋವಿಡ್ ಕೇರ್ ಸೆಂಟರ್‍ನಲ್ಲಿ ಕೊರೊನಾ ಸೋಂಕಿತರು ಪ್ರತಿಭಟನೆ ನಡೆಸಿದರು. ಕೊರೊನಾ ಸೋಂಕಿತರು ಆಸ್ಪತ್ರೆ ಮುಂದೆ ಜಮಾಯಿಸಿ ಸರ್ಕಾರ, ಜಿಲ್ಲಾಡ ಳಿತ ಹಾಗೂ ಆರೋಗ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ದರು. ತಮಗೆ ನೀಡಿದ ಆಹಾರ ಕಳಪೆಯಾಗಿದೆ ಎಂದು ಆರೋಪಿಸಿ ಆಹಾರವನ್ನು ಪ್ರದರ್ಶಿಸಿದರು. ವೈದ್ಯರು ಸಮರ್ಪಕವಾಗಿ ಚಿಕಿತ್ಸೆ ನೀಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ಆಗಮಿಸಿ ಚಿಕಿತ್ಸೆ ನೀಡದ ಕಾರಣ ಸೋಂಕು ಗುಣಮುಖವಾಗುತ್ತಿಲ್ಲ ಎಂದು ದೂರಿದರು.

 

 

Translate »