ಚಾಮರಾಜನಗರ

ಯಳಂದೂರು ಬಳಿ ಹೆಬ್ಬಾವು ಪತ್ತೆ
ಚಾಮರಾಜನಗರ

ಯಳಂದೂರು ಬಳಿ ಹೆಬ್ಬಾವು ಪತ್ತೆ

June 22, 2018

ಯಳಂದೂರು: ಬಿಳಿಗಿರಿರಂಗನಾಥಸ್ವಾಮಿ ಹುಲಿರಕ್ಷಿತಾ ಮೀಸಲು ಅರಣ್ಯದಂಚಿನಲ್ಲಿರುವ ಜಾವನೆ (ಜಾಕ್ಲಿನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್) ಫಾರಂನಲ್ಲಿ ಭಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು ಸ್ನೇಕ್ ಮಹೇಶ್ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಯಳಂದೂರು ತಾಲೂಕಿನ ದಾಸನಹುಂಡಿ ಗ್ರಾಮದ ವ್ಯಾಪ್ತಿಗೆ ಬರುವ ಜಾವನೆ ಫಾರಂನಲ್ಲಿ ಇಂದು ಬೆಳಿಗ್ಗೆ ಈ ಹೆಬ್ಬಾವು ಕಾಣ ಸಿಕೊಂಡಿದ್ದು, ಸಾರ್ವಜನಿಕರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿ ಎಸಿಎಫ್ ನಾಗರಾಜು ಸಿಬ್ಬಂದಿಗ ಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಂತೇಮರಹಳ್ಳಿ ಉರಗ ತಜ್ಞ ಮಹೇಶ್ ಅವರನ್ನು ಕರೆಸಿ ಹೆಬ್ಬಾವು ಹಿಡಿಸಿ…

ಯೋಗದಿಂದ ರೋಗ ಮುಕ್ತ: ಶಾಸಕ ನಿರಂಜನಕುಮಾರ್
ಚಾಮರಾಜನಗರ

ಯೋಗದಿಂದ ರೋಗ ಮುಕ್ತ: ಶಾಸಕ ನಿರಂಜನಕುಮಾರ್

June 21, 2018

ಗುಂಡ್ಲುಪೇಟೆ:  ಯೋಗಾಭ್ಯಾಸ ಮತ್ತು ಧ್ಯಾನ ಮಾಡುವು ದರಿಂದ ಮಾನಸಿಕ ಸುಸ್ಥಿರತೆ ಹಾಗೂ ಉತ್ತಮ ಆರೋಗ್ಯವನ್ನು ಹೊಂದಬಹು ದಾಗಿದೆ ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ಹೇಳಿದರು. ಪಟ್ಟಣದ ಮದ್ದಾನೇಶ್ವರ ಪ್ರೌಢಶಾಲೆಯ ಆವರಣದಲ್ಲಿರುವ ಮಹಾಮನೆ ಯೋಗ ಕೇಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಶ್ರೀ ಮದ್ದಾ ನೇಶ್ವರ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದರು. ಇಂದಿನ ಆಹಾರ ಪದ್ಧತಿ ಹಾಗೂ ಜೀವನ ವಿಧಾನಗಳಿಂದ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯ ಸಂಬಂಧಿತ…

ಸುವರ್ಣಾವತಿ ನಾಲೆ ಕಾಮಗಾರಿಗೆ ಚಾಲನೆ
ಚಾಮರಾಜನಗರ

ಸುವರ್ಣಾವತಿ ನಾಲೆ ಕಾಮಗಾರಿಗೆ ಚಾಲನೆ

June 21, 2018

ಚಾಮರಾಜನಗರ:  ಚಾಮ ರಾಜನಗರ ತಾಲೂಕಿನ ಪ್ರಮುಖ ಸುವರ್ಣಾವತಿಯ ಎಡದಂಡೆ ಹಾಗೂ ಬಲ ದಂಡೆ ನಾಲೆಯನ್ನು 3.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಿರುವ ಕಾಮಗಾರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಇಂದು ಚಾಲನೆ ನೀಡಿದರು. ತಾಲೂಕಿನ ಅಟ್ಟುಗೂಳಿಪುರ ಗ್ರಾಮ ಪಂಚಾಯಿತಿ ಕಚೇರಿಯ ಬಳಿ ಹಾದು ಹೋಗಲಿರುವ ಸುವರ್ಣಾವತಿ ಎಡದಂಡೆ ನಾಲೆ ಹಾಗೂ ಬಲದಂಡೆ ನಾಲೆ ಕಾಮ ಗಾರಿಗೆ ಸಚಿವ ಸಿ.ಪುಟ್ಟರಂಗಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು. ಇದೇ ವೇಳೆ ಮಾತನಾಡಿದ ಸಚಿವರು, ಸುವರ್ಣಾವತಿ ಎಡದಂಡೆ ನಾಲೆ…

ವಿದ್ಯುತ್ ಸ್ಪರ್ಶದಿಂದ ಆನೆ ಸಾವು
ಚಾಮರಾಜನಗರ

ವಿದ್ಯುತ್ ಸ್ಪರ್ಶದಿಂದ ಆನೆ ಸಾವು

June 21, 2018

ಗುಂಡ್ಲುಪೇಟೆ:  ಆಹಾರವನ್ನು ಅರಸಿ ಬಂದ ಹೆಣ್ಣಾನೆ ಯೊಂದು ವಿದ್ಯುತ್ ಸ್ಪರ್ಶಿಸಿ ಸಾವಿ ಗೀಡಾಗಿರುವ ದುರ್ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೊಳ ಪಡುವ ಹೆಡಿಯಾಲ ಅರಣ್ಯ ಪ್ರದೇಶ ದಲ್ಲಿ ಬುಧವಾರ ನಡೆದಿದೆ. ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿ ಗೊಳಪಡುವ ಹೆಡಿಯಾಲ ಉಪವಿಭಾ ಗದ ಕಾಡಂಚಿನ ಗ್ರಾಮದ ಚಿಕ್ಕಬರಗಿ ಗ್ರಾಮದ ಶಿವಾಲಮ್ಮ ಎಂಬುವರ ಜಮೀನಿ ನಲ್ಲಿ ಈ ಘಟನೆ ನಡೆದಿದ್ದು, ಇವರ ಜಮೀನಿನಲ್ಲಿ ಹತ್ತಿ ಬೆಳೆಯಲಾಗಿತ್ತು. ಜಮೀನಿನ ಸುತ್ತಲೂ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಆಹಾರವನ್ನರಸಿ ಜಮೀನಿಗೆ…

ಗರಗನಹಳ್ಳಿ ಬಳಿ ಕರಡಿ ಪ್ರತ್ಯಕ್ಷ
ಚಾಮರಾಜನಗರ

ಗರಗನಹಳ್ಳಿ ಬಳಿ ಕರಡಿ ಪ್ರತ್ಯಕ್ಷ

June 21, 2018

ಗುಂಡ್ಲುಪೇಟೆ: ತಾಲೂಕಿನ ಗರಗನಹಳ್ಳಿ ಸಮೀಪ ಕರಡಿಯೊಂದು ಪ್ರತ್ಯಕ್ಷವಾಗಿ ಸಾರ್ವಜನಿಕರನ್ನು ಭೀತಿಗೊಳಿಸಿರುವ ಘಟನೆ ನಡೆದಿದೆ.ಬೆಂಗಳೂರು-ನೀಲಗಿರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗರಗನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಕೆಲ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಘಟನೆ ವಿವರ: ಗ್ರಾಮದ ವಾಸಿ ಮಹದೇವಪ್ಪ ಎಂಬುವರ ಜಮೀನಿನಲ್ಲಿ ಬುಧವಾರ ಮಧ್ಯಾಹ್ನ ಕರಡಿಯೊಂದು ಕಾಣಿಸಿಕೊಂಡು ಜಮೀನಿನ ಮಾಲೀಕ ಮಹದೇವಪ್ಪ ಅವರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದೆ. ಅಷ್ಟರಲ್ಲಿ ಕಿರುಚಿಕೊಂಡಾಗ ಸುತ್ತಮುತ್ತಲಿನ ಸಾರ್ವಜನಿಕರು ಬಂದು ಕರಡಿಯನ್ನು ಓಡಿಸಿದ್ದಾರೆ. ಅಲ್ಲಿಂದ ಓಡಿಹೋದ ಕರಡಿಯು ಪಕ್ಕದಲ್ಲಿರುವ ಬೇಲಿಯಲ್ಲಿ…

ಗಾಂಜಾ ಸಾಗಾಣೆ; ಆರೋಪಿ ಬಂಧನ
ಚಾಮರಾಜನಗರ

ಗಾಂಜಾ ಸಾಗಾಣೆ; ಆರೋಪಿ ಬಂಧನ

June 21, 2018

ಹನೂರು:  ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹನೂರು ಪೊಲೀಸರು ಬಂಧಿಸಿದ್ದಾರೆ. ಹನೂರು ತಾಲೂಕಿನ ಅರ್ಧನಾರಿಪುರ ಗ್ರಾಮದ ರಂಗಸ್ವಾಮಿ ಬಂಧಿತ ಆರೋಪಿ. ಅರ್ಧನಾರಿಪುರ ಗ್ರಾಮದ ಬಳಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆ ಸಿಪಿಐ ಮೋಹಿತ್ ಸಹದೇವ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ 500 ಗ್ರಾಂ ನಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ಮುಖ್ಯಪೇದೆ ಸಿದ್ದೇಶ್, ರಾಜು, ಬಿಳಿಗೌಡ, ಚಂದ್ರಶೇಖರ್ ಮತ್ತು ವೀರಭದ್ರಸ್ವಾಮಿ ಭಾಗವಹಿಸಿದ್ದರು.

ಯೋಗ ಜಾಗೃತಿಗೆ ನಡೆದ ಜಾಥಾ
ಚಾಮರಾಜನಗರ

ಯೋಗ ಜಾಗೃತಿಗೆ ನಡೆದ ಜಾಥಾ

June 21, 2018

ಚಾಮರಾಜನಗರ:  ಜಿಲ್ಲಾ ಡಳಿತ, ಜಿಪಂ ವತಿಯಿಂದ ಹಮ್ಮಿಕೊಂಡಿ ರುವ ಅಂತರಾಷ್ಟ್ರೀಯ ಯೋಗ ದಿನಾ ಚರಣೆ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ಇಂದು ಜಾಥಾ ಹಾಗೂ ಉಪನ್ಯಾಸ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಶಾ ಲಾಕ್ಷಿ ಅವರು ಯೋಗ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ನ್ಯಾಯಾಲಯ ಆವರಣ ದಿಂದ ಜಾಥಾ ಹೊರಟು ಜಿಲ್ಲಾಡಳಿತ ಭವ ನದ ಆವರಣದಲ್ಲಿ ಸಮಾವೇಶಗೊಂಡಿತು. ತದನಂತರ ಜಿಲ್ಲಾಡಳಿತ ಭವನದಲ್ಲಿ…

ಸಾವಯವ ಗೊಬ್ಬರದಿಂದ ಉತ್ತಮ ಬೆಳೆ
ಚಾಮರಾಜನಗರ

ಸಾವಯವ ಗೊಬ್ಬರದಿಂದ ಉತ್ತಮ ಬೆಳೆ

June 21, 2018

ಯಳಂದೂರು: ರೈತರು ತಾವೇ ಗೊಬ್ಬರ ತಯಾರಿಸಿಕೊಂಡು ಬೆಳೆಗಳನ್ನು ಬೆಳೆಯು ವುರಿಂದ ಉತ್ತಮ ಆದಾಯವನ್ನು ಪಡೆ ಯಬಹುದು ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಎಚ್.ಯೋಗೇಶ್ ಸಲಹೆ ನೀಡಿದರು. ಅವರು ಬುಧವಾರ ಪಟ್ಟಣದ ಕೃಷಿ ಇಲಾಖೆಯ ಕಚೇರಿಯ ಆವರಣದಲ್ಲಿ ಹಮ್ಮಿ ಕೊಂಡಿದ್ದ ಕೃಷಿ ಅಭಿಯಾನ ಕಾರ್ಯಕ್ರಮ ದಲ್ಲಿ ಮಾತನಾಡಿದರು. ನಮ್ಮ ಭೂಮಿ ಕೇವಲ ನಮ್ಮ ಹಿರಿಯರು ಕೊಟ್ಟ ಸ್ವತ್ತಲ್ಲ. ಇದು ನಾವು ನಮ್ಮ ಮುಂದಿನ ಪೀಳಿಗೆಗೆ ನೀಡುವ ಉಡುಗೊರೆಯಾಗಬೇಕು. ಚಾಮರಾಜನಗರ ಜಿಲ್ಲೆ ಸುಧಾರಿತ ಕೃಷಿ ಪದ್ಧತಿಯ ಅಳ ವಡಿಕೆಯಲ್ಲಿ…

ಪ.ಜಾ, ಪ.ಪಂ ವ್ಯಕ್ತಿಗಳ ಮೇಲಿನ ದೌರ್ಜನ್ಯ ದೂರು ಸಲ್ಲಿಕೆಗೆ ಅವಕಾಶ ವಿಸ್ತರಣೆ
ಚಾಮರಾಜನಗರ

ಪ.ಜಾ, ಪ.ಪಂ ವ್ಯಕ್ತಿಗಳ ಮೇಲಿನ ದೌರ್ಜನ್ಯ ದೂರು ಸಲ್ಲಿಕೆಗೆ ಅವಕಾಶ ವಿಸ್ತರಣೆ

June 21, 2018

ಚಾಮರಾಜನಗರ:  ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಮೇಲೆ ಸರ್ಕಾರಿ ನೌಕರರು ದೌರ್ಜನ್ಯ ಎಸಗಿದ ಹಾಗೂ ಸರ್ಕಾರಿ ನೌಕರರ ನಿರ್ಲಕ್ಷ್ಯದಿಂದ ದೌರ್ಜನ್ಯಕ್ಕೆ ಒಳಗಾದ ದೂರುಗಳಿದ್ದಲ್ಲಿ ನವದೆಹಲಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಜೂನ್ 30ರವರೆಗೂ ಸ್ವೀಕರಿಸಲಿದೆ. ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಸಮಸ್ಯೆ, ಕುಂದುಕೊರತೆಗಳ ನಿವಾರಣಾ ಸಭೆಯನ್ನು ಜುಲೈ 26 ಹಾಗೂ 27ರಂದು ಬೆಂಗಳೂರಿನಲ್ಲಿ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತೀರ್ಮಾನಿಸಿದೆ. ಹೀಗಾಗಿ ದೂರುಗಳಿದ್ದಲ್ಲಿ ರಿಜಿಸ್ಟ್ರಾರ್, ರಾಷ್ಟ್ರೀಯ ಮಾನವ…

ಬಸವ ತತ್ವ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಟ
ಚಾಮರಾಜನಗರ

ಬಸವ ತತ್ವ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಟ

June 20, 2018

ಗುಂಡ್ಲುಪೇಟೆ:  ಮಾನವೀಯ ಮೌಲ್ಯ ಹಾಗೂ ಸಮಾನತೆಯನ್ನು ಸಾರಿದ ಬಸವ ತತ್ವ ವಿಶ್ವ ದಲ್ಲಿಯೇ ಅತ್ಯಂತ ಶ್ರೇಷ್ಠವಾಗಿದ್ದು, ಇದರ ಅನುಕರಣೆಯಿಂದ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಸೋಮಹಳ್ಳಿ ವೀರಸಿಂಹಾಸನ ಶಿಲಾಮಠಾಧ್ಯಕ್ಷರಾದ ಶ್ರೀ ಸಿದ್ದಮಲ್ಲಪ್ಪ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶಿವಾ ನುಭವ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಮಂತ್ರಿಯಾಗಿ ದ್ದರೂ ಸಹಾ ಅಧಿಕಾರ ದುರುಪಯೋಗ ಮಾಡಿಕೊಳ್ಳದೆ, ಸರ್ಕಾರದ ಬೊಕ್ಕಸದ ಹಣವನ್ನು ಬಳಸದೆಯೇ ಕಾಯಕದ ಮೂಲಕ ಸ್ವಯಾರ್ಜಿತವಾಗಿ ಗಳಿಸಿದ ಹಣದಿಂದ ಧಾರ್ಮಿಕ,…

1 120 121 122 123 124 141
Translate »