ಸುವರ್ಣಾವತಿ ನಾಲೆ ಕಾಮಗಾರಿಗೆ ಚಾಲನೆ
ಚಾಮರಾಜನಗರ

ಸುವರ್ಣಾವತಿ ನಾಲೆ ಕಾಮಗಾರಿಗೆ ಚಾಲನೆ

June 21, 2018

ಚಾಮರಾಜನಗರ:  ಚಾಮ ರಾಜನಗರ ತಾಲೂಕಿನ ಪ್ರಮುಖ ಸುವರ್ಣಾವತಿಯ ಎಡದಂಡೆ ಹಾಗೂ ಬಲ ದಂಡೆ ನಾಲೆಯನ್ನು 3.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಿರುವ ಕಾಮಗಾರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಇಂದು ಚಾಲನೆ ನೀಡಿದರು.

ತಾಲೂಕಿನ ಅಟ್ಟುಗೂಳಿಪುರ ಗ್ರಾಮ ಪಂಚಾಯಿತಿ ಕಚೇರಿಯ ಬಳಿ ಹಾದು ಹೋಗಲಿರುವ ಸುವರ್ಣಾವತಿ ಎಡದಂಡೆ ನಾಲೆ ಹಾಗೂ ಬಲದಂಡೆ ನಾಲೆ ಕಾಮ ಗಾರಿಗೆ ಸಚಿವ ಸಿ.ಪುಟ್ಟರಂಗಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.

ಇದೇ ವೇಳೆ ಮಾತನಾಡಿದ ಸಚಿವರು, ಸುವರ್ಣಾವತಿ ಎಡದಂಡೆ ನಾಲೆ 0.0 ಕಿ.ಮೀ. ಯಿಂದ 4.855 ಕಿ.ಮೀ.ವರೆಗೆ ಮತ್ತು ಬಲ ದಂಡೆ ನಾಲೆ ಸರಪಳಿಯು 14.10 ಕಿ.ಮೀ. ನಿಂದ ಸರಪಳಿ 18.550 ಕಿ.ಮೀ. ವರೆಗೆ ನಿರ್ಮಾಣವಾಗಲಿದೆ. ಸೈಡ್ ಹಾಗೂ ಬೆಡ್ ಗಳಿಗೆ ಸಿಸಿ ಲೈನಿಂಗ್ ತೂಬು, ಸೋಪಾನ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳ ಲಾಗುತ್ತದೆ ಎಂದರು.

ಕಾಮಗಾರಿಯನ್ನು 5 ತಿಂಗಳೊಳಗೆ ಪೂರ್ಣ ಗೊಳಿಸಲು ಗಡುವು ನಿಗದಿ ಮಾಡಲಾಗಿದೆ. ಈ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ನಡೆಸಬೇಕೆಂದು ಸೂಚಿಸಲಾಗಿದೆ. ಪ್ರಸ್ತುತ ಕಾಮಗಾರಿ ಪೂರ್ಣಗೊಂಡರೆ 17 ಗ್ರಾಮ ಗಳಿಗೆ ಅನುಕೂಲವಾಗಲಿದೆ ಎಂದು ಸಚಿ ವರು ತಿಳಿಸಿದರು. ಈಗಾಗಲೇ 20 ಕೋಟಿ ರೂ. ವೆಚ್ಚದಲ್ಲಿ ನಾಲೆ ಕಾಮಗಾರಿಗಳು ತಮ್ಮ ಕ್ಷೇತ್ರದಲ್ಲಿ ನಡೆದಿವೆ.

ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಯಿಸಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ನೆರವು ಕಲ್ಪಿಸಲಾಗಿದೆ. ನೀರು ಬಳಕೆದಾರರ ಸಹಕಾರ ಸಂಘಗಳು ನಾಲೆ ನಿರ್ಮಾಣದಿಂದ ಲಭಿಸುವ ನೀರಾವರಿ ಸೌಲಭ್ಯಗಳ ಬಳಕೆಗೆ ಸಹಕರಿಸಬೇಕೆಂದು ಸಚಿವರು ತಿಳಿಸಿದರು.

ಸುವರ್ಣಾವತಿ ಉದ್ಯಾನವನ ಅಭಿ ವೃದ್ಧಿಗೂ ಆದ್ಯತೆ ನೀಡಲಾಗುತ್ತದೆ. ಪ್ರವಾ ಸೋದ್ಯಮ ಸ್ಥಳಗಳನ್ನಾಗಿ ಆಕ ರ್ಷಿಸುವ ನಿಟ್ಟಿನಲ್ಲಿ ಇದರ ಪ್ರಗತಿಗೆ ಕಾರ್ಯೋ ನ್ಮುಖರಾಗಲು ಚಿಂತನೆ ನಡೆಸಲಾಗು ವುದು. ಪ್ರವಾಸೋದ್ಯಮ ಇಲಾಖೆ ಯೊಂದಿಗೆ ಚರ್ಚಿಸಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಗಮನ ಕೊಡಲಾಗುವುದು ಎಂದು ಸಚಿವರು ನುಡಿದರು.

ಜಿಪಂ ಸದಸ್ಯರಾದ ಶಶಿಕಲಾ ಸೋಮ ಲಿಂಗಪ್ಪ, ಕಾವೇರಿ ನೀರಾ ವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಮರಿಸ್ವಾಮಿ, ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ರಾಜೇಂದ್ರ ಪ್ರಸಾದ್, ಸಹಾಯಕ ಎಂಜಿನಿ ಯರ್ ಮಂಜುನಾಥ್, ಮಹೇಶ್, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Translate »