ವಿದ್ಯುತ್ ಸ್ಪರ್ಶದಿಂದ ಆನೆ ಸಾವು
ಚಾಮರಾಜನಗರ

ವಿದ್ಯುತ್ ಸ್ಪರ್ಶದಿಂದ ಆನೆ ಸಾವು

June 21, 2018

ಗುಂಡ್ಲುಪೇಟೆ:  ಆಹಾರವನ್ನು ಅರಸಿ ಬಂದ ಹೆಣ್ಣಾನೆ ಯೊಂದು ವಿದ್ಯುತ್ ಸ್ಪರ್ಶಿಸಿ ಸಾವಿ ಗೀಡಾಗಿರುವ ದುರ್ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೊಳ ಪಡುವ ಹೆಡಿಯಾಲ ಅರಣ್ಯ ಪ್ರದೇಶ ದಲ್ಲಿ ಬುಧವಾರ ನಡೆದಿದೆ.

ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿ ಗೊಳಪಡುವ ಹೆಡಿಯಾಲ ಉಪವಿಭಾ ಗದ ಕಾಡಂಚಿನ ಗ್ರಾಮದ ಚಿಕ್ಕಬರಗಿ ಗ್ರಾಮದ ಶಿವಾಲಮ್ಮ ಎಂಬುವರ ಜಮೀನಿ ನಲ್ಲಿ ಈ ಘಟನೆ ನಡೆದಿದ್ದು, ಇವರ ಜಮೀನಿನಲ್ಲಿ ಹತ್ತಿ ಬೆಳೆಯಲಾಗಿತ್ತು. ಜಮೀನಿನ ಸುತ್ತಲೂ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಆಹಾರವನ್ನರಸಿ ಜಮೀನಿಗೆ ಬಂದ 60 ವರ್ಷ ವಯಸ್ಸಿನ ಹೆಣ್ಣಾನೆ ವಿದ್ಯುತ್ ಸ್ಪರ್ಶಕ್ಕೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಹೆಡಿಯಾಲ ಉಪಭಾಗದ ಎಸಿಎಫ್ ಕೆ.ಪರಮೇಶ್ ಮತ್ತು ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಪಶುವೈದ್ಯ ಡಾ.ನಾಗರಾಜು ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಸಮಿತಿಯ ಸದಸ್ಯ ರಘುರಾಂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಣ್ಣಾನೆಯ ಮರಣೋತ್ತರ ಪರೀಕ್ಷೆಯ ನಂತರ ಸ್ಥಳದಲ್ಲೇ ಕಳೇಬರದ ಅಂತ್ಯ ಸಂಸ್ಕಾರ ಮಾಡಲಾಯಿತು. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Translate »