ಬಸವ ತತ್ವ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಟ
ಚಾಮರಾಜನಗರ

ಬಸವ ತತ್ವ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಟ

June 20, 2018

ಗುಂಡ್ಲುಪೇಟೆ:  ಮಾನವೀಯ ಮೌಲ್ಯ ಹಾಗೂ ಸಮಾನತೆಯನ್ನು ಸಾರಿದ ಬಸವ ತತ್ವ ವಿಶ್ವ ದಲ್ಲಿಯೇ ಅತ್ಯಂತ ಶ್ರೇಷ್ಠವಾಗಿದ್ದು, ಇದರ ಅನುಕರಣೆಯಿಂದ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಸೋಮಹಳ್ಳಿ ವೀರಸಿಂಹಾಸನ ಶಿಲಾಮಠಾಧ್ಯಕ್ಷರಾದ ಶ್ರೀ ಸಿದ್ದಮಲ್ಲಪ್ಪ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶಿವಾ ನುಭವ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಮಂತ್ರಿಯಾಗಿ ದ್ದರೂ ಸಹಾ ಅಧಿಕಾರ ದುರುಪಯೋಗ ಮಾಡಿಕೊಳ್ಳದೆ, ಸರ್ಕಾರದ ಬೊಕ್ಕಸದ ಹಣವನ್ನು ಬಳಸದೆಯೇ ಕಾಯಕದ ಮೂಲಕ ಸ್ವಯಾರ್ಜಿತವಾಗಿ ಗಳಿಸಿದ ಹಣದಿಂದ ಧಾರ್ಮಿಕ, ಸಾಮಾಜಿಕ ಹಾಗೂ ಸಮಾನತೆಗೆ ಶ್ರಮಿಸಿದ ಬಸವಣ್ಣ ಎಲ್ಲ ರಿಗೂ ಆದರ್ಶಪ್ರಾಯರಾಗಿದ್ದಾರೆ. ಇವರ ತತ್ವಾನುಕರಣೆಯಿಂದ ವಿಶ್ವವೇ ಶಾಂತಿಯ ನೆಲೆಬೀಡಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಎಲ್ಲರೂ ವಚನಗಳ ಸಾರವನ್ನು ಅರ್ಥೈಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಶ್ರೀಚನ್ನಬಸವ ಸ್ವಾಮೀಜಿ ಮಾತನಾಡಿ, 12ನೇ ಶತಮಾನ ದಿಂದಲೂ ಶರಣರು ಸಮಾಜದ ಅಸಮಾನತೆಗಳನ್ನು ತಿದ್ದುವ ಹಾಗೂ ಅನ್ನದಾಸೋಹ ನಡೆಸಿ ಕಾಯಕದ ಮಹತ್ವವನ್ನು ಸಾರಿದ್ದಾರೆ. ತಮ್ಮ ಜೀವನಾನುಭವವನ್ನು ವಚನ ಸಾಹಿತ್ಯದ ಮೂಲಕ ವ್ಯಕ್ತಪಡಿಸಿ, ಇಂದೂ ಸಹಾ ಸಮಾಜದ ಅಭಿವೃದ್ಧಿಗೆ ಹಾಗೂ ಸರ್ಕಾರಕ್ಕೆ ಪ್ರೇರಣೆ ನೀಡುವ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಎಲ್ಲರೂ ಇವುಗಳ ಪಾಲನೆ ಮಾಡುವಂತಾಗ ಬೇಕು ಎಂದರು. ಈ ಸಂದರ್ಭದಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್, ಮಾಜಿ ಶಾಸಕ ಸಿ.ಗುರುಸ್ವಾಮಿ, ಮಾಜಿ ಎಂಎಲ್‍ಸಿ ಪೆÇ್ರ.ಕೆ.ಆರ್. ಮಲ್ಲಿಕಾರ್ಜುನಪ್ಪ, ರೇಚಂಬಳ್ಳೀ ಮಠಾಧ್ಯಕ್ಷರಾದ ಶ್ರೀ ಮಹದೇವ ಸ್ವಾಮೀಜಿ, ಮೂಡುಗೂರು ರಕ್ತ ಮಠದ ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಗ್ರಾಮಸ್ಥರು ಇದ್ದರು.

Translate »