ಗಾಂಜಾ ಸಾಗಾಣೆ; ಆರೋಪಿ ಬಂಧನ
ಚಾಮರಾಜನಗರ

ಗಾಂಜಾ ಸಾಗಾಣೆ; ಆರೋಪಿ ಬಂಧನ

June 21, 2018

ಹನೂರು:  ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹನೂರು ಪೊಲೀಸರು ಬಂಧಿಸಿದ್ದಾರೆ. ಹನೂರು ತಾಲೂಕಿನ ಅರ್ಧನಾರಿಪುರ ಗ್ರಾಮದ ರಂಗಸ್ವಾಮಿ ಬಂಧಿತ ಆರೋಪಿ. ಅರ್ಧನಾರಿಪುರ ಗ್ರಾಮದ ಬಳಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆ ಸಿಪಿಐ ಮೋಹಿತ್ ಸಹದೇವ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ 500 ಗ್ರಾಂ ನಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ಮುಖ್ಯಪೇದೆ ಸಿದ್ದೇಶ್, ರಾಜು, ಬಿಳಿಗೌಡ, ಚಂದ್ರಶೇಖರ್ ಮತ್ತು ವೀರಭದ್ರಸ್ವಾಮಿ ಭಾಗವಹಿಸಿದ್ದರು.

Translate »