ಯಳಂದೂರು ಬಳಿ ಹೆಬ್ಬಾವು ಪತ್ತೆ
ಚಾಮರಾಜನಗರ

ಯಳಂದೂರು ಬಳಿ ಹೆಬ್ಬಾವು ಪತ್ತೆ

June 22, 2018

ಯಳಂದೂರು: ಬಿಳಿಗಿರಿರಂಗನಾಥಸ್ವಾಮಿ ಹುಲಿರಕ್ಷಿತಾ ಮೀಸಲು ಅರಣ್ಯದಂಚಿನಲ್ಲಿರುವ ಜಾವನೆ (ಜಾಕ್ಲಿನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್) ಫಾರಂನಲ್ಲಿ ಭಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು ಸ್ನೇಕ್ ಮಹೇಶ್ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಯಳಂದೂರು ತಾಲೂಕಿನ ದಾಸನಹುಂಡಿ ಗ್ರಾಮದ ವ್ಯಾಪ್ತಿಗೆ ಬರುವ ಜಾವನೆ ಫಾರಂನಲ್ಲಿ ಇಂದು ಬೆಳಿಗ್ಗೆ ಈ ಹೆಬ್ಬಾವು ಕಾಣ ಸಿಕೊಂಡಿದ್ದು, ಸಾರ್ವಜನಿಕರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿ ಎಸಿಎಫ್ ನಾಗರಾಜು ಸಿಬ್ಬಂದಿಗ ಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಂತೇಮರಹಳ್ಳಿ ಉರಗ ತಜ್ಞ ಮಹೇಶ್ ಅವರನ್ನು ಕರೆಸಿ ಹೆಬ್ಬಾವು ಹಿಡಿಸಿ ಬಿಳಿಗಿರಿರಂಗನಾಥಸ್ವಾಮಿ ಅರಣ್ಯಕ್ಕೆ ಬಿಡಲಾಗಿದೆ. ಈ ಹೆಬ್ಬಾವು ಸುಮಾರು 25 ಕೆ.ಜಿ.ಯಷ್ಟು ಭಾರವಾಗಿದೆ ಎಂದು ಮಹೇಶ್ ತಿಳಿಸಿದ್ದಾರೆ. ಅರಣ್ಯ ಸಿಬ್ಬಂದಿ ರಾಜಶೇಖರ್ ಸೇರಿದಂತೆ ಇತರರು ಹಾಜರಿದ್ದರು.

Translate »