ಜಿಲ್ಲಾದ್ಯಂತ ‘ಯೋಗ’ ಧ್ಯಾನ ಸಂಗಮ
ಹಾಸನ

ಜಿಲ್ಲಾದ್ಯಂತ ‘ಯೋಗ’ ಧ್ಯಾನ ಸಂಗಮ

June 22, 2018
  •  ಸಂಭ್ರಮದ 4ನೇ ಅಂತಾರಾಷ್ಟ್ರೀಯ ಯೋಗ ದಿನ
  •  ಸಾಮೂಹಿಕ ಧ್ಯಾನ, ವಿವಿಧ ಯೋಗಾಸನಗಳ ಪ್ರದರ್ಶನ

ಯೋಗಾಭ್ಯಾಸಕ್ಕೆ ವಯಸ್ಸಿನ ಪರಿಮಿತಿ ಇಲ್ಲ: ಶಾಸಕ ಪ್ರೀತಂ ಜೆ.ಗೌಡ
ಹಾಸನ: ಜಿಲ್ಲಾದ್ಯಂತ ಗುರುವಾರ 4ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆಯ ಮಂಜಿನ ನಡುವೆ ಸೂರ್ಯನ ಕಿರಣಗಳು ಮೂಡುತ್ತಿದ್ದಂತೆ ಯೋಗ ಪ್ರದರ್ಶನ ಮತ್ತು ಯೋಗ ಕುರಿತದ್ದೇ ಚರ್ಚೆ. ಜಿಲ್ಲಾ ಕ್ರೀಡಾಂಗಣ, ಶಾಲಾ ಮೈದಾನದಲ್ಲಿ ಶ್ವೇತವಸ್ತ್ರ ಧರಿಸಿದ ಪಟುಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.

ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಜನಪ್ರತಿ ನಿಧಿಗಳು, ಅಧಿಕಾರಿಗಳು, ಯೋಗ ತರಬೇತಿ ಸಂಸ್ಥೆಗಳು ಹಾಗೂ ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಮೂಹಿಕ ಯೋಗ ಮಾಡುವ ಮೂಲಕ ಗಮನ ಸೆಳೆದರು.

ಸಾಮೂಹಿಕ ಪ್ರಾರ್ಥನೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾ ಯಿತಿ, ಆಯುಷ್ ಇಲಾಖೆ ಹಾಗೂ ಯೋಗ ಸಂಸ್ಥೆಗಳ ಸಹಯೋಗದಡಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಹಾಗೂ ನಾಗರಿಕರು ಪ್ರಾರ್ಥನೆಯೊಂದಿಗೆ ಸಾಮೂಹಿಕ ಯೋಗ ಪ್ರದರ್ಶನ ನಡೆಸಿದರು.

ಚಲನಾಕ್ರಿಯೆ ಬಳಿಕ ತಾಡಾಸನ, ವೃಕ್ಷಾ ಸನ, ಪಾದಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಊದ್ರ್ವ ನಮನಾಸನ, ಊದ್ರ್ವ ಮುಖ ಶ್ವಾನಾಸನ, ಅಧೋಮುಖ ಶ್ವಾನಾಸನ, ಉತ್ತಾನಾಸನ, ಅಷ್ಟಾಂಗ ನಮ ಸ್ಕಾರ, ಏಕಪಾದ ಪ್ರಸರಣಾಸನ, ದ್ವಿಪಾದ ಪ್ರಸರಣಾಸನ, ಭದ್ರಾಸನ, ಅರ್ಧ ಉಷ್ಟ್ರಾಸನ ಭಂಗಿ, ನಮಸ್ಕಾರ ಸ್ಥಿತಿ ಹಾಗೂ ಶವಾಸನ ಭಂಗಿಯ ಆಸನಗಳನ್ನು ನೆರೆದಿದ್ದ ನೂರಾರು ಮಂದಿ ಯೋಗಗುರುಗಳ ಮಾರ್ಗ ದರ್ಶನದಲ್ಲಿ ಪ್ರದರ್ಶಿಸಿದರು.

ಈ ವೇಳೆ ಶಾಸಕ ಪ್ರೀತಂ ಜೆ.ಗೌಡ ಮಾತ ನಾಡಿ, ಯಾವುದೇ ವಯಸ್ಸಿನ ಪರಿಮಿತಿ ಯಿಲ್ಲದೆ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯವಂತರಾಗಿ ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಮುಂದಾ ಗೋಣ. ಕೇವಲ ಆಸನ, ಪ್ರಾಣಾಯಾಮ ಮಾಡಿದರೆ ಯೋಗವಾಗುವುದಿಲ್ಲ ಆಧ್ಯಾತ್ಮಿಕ ವಾಗಿ ಪರಮಾತ್ಮ ಮತ್ತು ಜೀವಾತ್ಮಗಳು ಯೋಗದಿಂದ ದೇಹ ಮತ್ತು ಮನಸ್ಸು ಒಂದಾಗುತ್ತವೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಇಂದಿನ ಆಹಾರ ಪದ್ಧತಿಯಿಂದ ಆರೋಗ್ಯದಲ್ಲಿ ಬಹಳ ವ್ಯತ್ಯಾಸ ಕಂಡುಬರುತ್ತಿದೆ. ಆರೋಗ್ಯದ ದೃಷ್ಟಿಯಿಂದ ಯೋಗಾಭ್ಯಾಸ ಮಾಡಬೇಕು ಎಂದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾದೇವರಾಜ್ ಅವರು ಮಾತನಾಡಿ ಯೋಗಾ ಧ್ಯಾನ ಮಾಡುವ ಮೂಲಕ ರೋಗ ಮುಕ್ತರಾಗಬಹುದು. ಭಾರತೀಯ ಸಂಸ್ಕøತಿ ಉತ್ಕøಷ್ಟವಾಗಿದ್ದು, ಅದನ್ನು ಅಳವಡಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದೇವೆ. ವಿದೇಶಿಯರು ಭಾರತೀಯ ಸಂಸ್ಕøತಿ ಯನ್ನು ಅಳವಡಿಸಿಕೊಳ್ಳುವಲ್ಲಿ ಮುಂದಾ ಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ, ಉಪ ವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್, ಜಿಲ್ಲಾ ಪಂಚಾ ಯಿತಿ ಉಪ ಕಾರ್ಯದರ್ಶಿ ನಾಗರಾಜ್, ಎಸ್‍ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಎನ್.ರಾವ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜೇಗೌಡ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್‍ಮೂರ್ತಿ ಪಾಲ್ಗೊಂಡಿದ್ದರು.

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ, ಆಯುಷ್ ವಿಭಾಗ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಿಮ್ಸ್ ಅವರ ಸಹಯೋಗದಡಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಧರ್ಮಸ್ಥಳ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನರಾವ್ ಮಾತನಾಡಿ, ಎಲ್ಲಾ ರೋಗಗಳಿಗೂ ಪರಿಹಾರ ನೀಡುವ ಯೋಗಾಭ್ಯಾಸವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯ ಪೂರ್ಣವಾಗಿರಲು ಸಹಾಯ ವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇ ಶಕ ಡಾ.ಬಿ.ಸಿ.ರವಿಕುಮಾರ್ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಯೋಗದ ಅವಶ್ಯಕತೆ ಹೆಚ್ಚಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಒತ್ತಡದ ಸನ್ನಿವೇಶಗಳು ಹೆಚ್ಚುತ್ತಿರುವು ದರಿಂದ ಪ್ರತಿಯೊಬ್ಬರು ಯೋಗ ತರಬೇತಿ ಪಡೆಯಬೇಕು. ನಿಯಮಿತವಾಗಿ ಯೋಗಾ ಭ್ಯಾಸ ನಡೆಸಿ ಒತ್ತಡ ರಹಿತ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಕೃಷಿ ಮಹಾ ವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ರಮೇಶ್, ಅಷ್ಟಾಂಗಯೋಗ ಕೇಂದ್ರ ಯೋಗ ಶಿಕ್ಷಕಿ ಕುಮುದಾ ಅಣ್ಣಯ್ಯ, ಹಿಮ್ಸ್ ಆಸ್ಪತ್ರೆಯ ಗೃಹ ವೈದ್ಯ ಡಾ.ದಿವೇಂದರ್ ರಮೇಶ್ ಅವರು ಯೋಗ ತರಬೇತಿ ಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಎನ್.ಚಿದಾನಂದ, ವೈದ್ಯಾಧಿ ಕಾರಿಗಳಾದ ಡಾ.ವಿ.ಆರ್.ಕೃಷ್ಣಮೂರ್ತಿ, ಡಾ.ಡಿ.ಜಿ.ಪ್ರಸನ್ನಕುಮಾರ್, ಸಹಾಯಕ ಪ್ರಾಧ್ಯಾಪಕ ಡಾ.ಗುರುಬಸವರಾಜು, ಯೋಗ ಶಿಕ್ಷಕ ಸುರೇಶ್ ಗುರೂಜಿ, ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ನಿಚಿತಾಕುಮಾರಿ, ಆಯುಷ್ ವಿಭಾಗದ ವೈದ್ಯೆ ಡಾ.ತೇಜಸ್ವಿನಿ, ಕ್ರೀಡಾ ಮತ್ತು ದೈಹಿಕ ಶಿಕ್ಷಣ ವಿಭಾಗದ ಲತೀಶ್ ಹಾಜರಿದ್ದರು.

ಬೇಲೂರು: ಪಟ್ಟಣದಲ್ಲಿ ಪುರಸಭೆ, ಪತಂಜಲಿ ಯೋಗ ಕೇಂದ್ರದ ಸಹಯೋಗ ದೊಂದಿಗೆ ಚನ್ನಕೇಶವಸ್ವಾಮಿ ದೇವಸ್ಥಾನದ ಮುಂಭಾಗ ಪತಂಜಲಿ ಯೋಗ ಕೇಂದ್ರ ಸದಸ್ಯರಿಂದ ಹಾಗೂ ಯತಿರಾಜ ಮಠ, ದೇವಾಲಯದ ದಾಸೋಹ ಸಭಾಂಗಣ ದಲ್ಲಿ ವಿವಿಧ ಶಾಲೆ ವಿದ್ಯಾರ್ಥಿಗಳಿಂದ ಪ್ರತ್ಯೇಕ ವಾಗಿ ಯೋಗ ಪ್ರದರ್ಶನ ನಡೆಯಿತು.

ಪುರಸಭೆ ಅಧ್ಯಕ್ಷೆ ಭಾರತಿ ಅರುಣ್ ಕುಮಾರ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ವಿಶ್ವ ಯೋಗ ದಿನ ಆಚರಿಸಲಾಗುತ್ತಿದೆ. ಯೋಗಾಭ್ಯಾಸ ಮಾಡು ವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗದಿಂದ ಮಾನಸಿಕ ಹಾಗೂ ದೈಹಿಕವಾಗಿ ಸಧೃಡ ರಾಗುವ ಮೂಲಕ ಉತ್ತಮ ಆರೋಗ್ಯ ವನ್ನು ಪಡೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಉಪಾ ಧ್ಯಕ್ಷ ಕುಮಾರಸ್ವಾಮಿ, ಮುಖ್ಯಾಧಿಕಾರಿ ಮಂಜುನಾಥ್, ಮಾಜಿ ಅಧ್ಯಕ್ಷ ಶ್ರೀನಿಧಿ, ಯೋಗ ಕೇಂದ್ರದ ಸುಭಾಷ್, ಮುರಳಿ, ವಿಶ್ವನಾಥ್‍ಶರ್ಮ, ಹಿತೇಶ್ ಸಚ್ಚಾನಿಯ, ಶ್ರೀನಿವಾಸ್, ರವಿಕುಮಾರ್, ಅನಿತಾ ಇದ್ದರು.
ಅರಸೀಕೆರೆ: ನಗರದ ವಿವಿಧೆಡೆ ವಿಶ್ವ ಯೋಗ ದಿನಾಚರಣೆಯನ್ನು ಸಾಮೂಹಿಕ ಯೋU ಪ್ರದರ್ಶನ ಮಾಡುವ ಮೂಲಕ ಆಚರಿಸಲಾಯಿತು.

ನಗರದ ಹಳೇ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ರೋಟರಿ ಸಂಸ್ಥೆ, ಇನ್ನರ್ ವ್ಹೀಲ್, ಲಯನ್ಸ್ ಕ್ಲಬ್, ಸ್ಕೌಟ್ಸ್ ಅಂಡ್ ಗೈಡ್ಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾ ಶ್ರಯದಲ್ಲಿ ವಿಶ್ವ ಯೋಗ ದಿನ ಆಚರಿಸ ಲಾಯಿತು. ಕಾರ್ಯಕ್ರಮದಲ್ಲಿ ಅಂತಾ ರಾಷ್ಟ್ರೀಯ ಯೋಗಪಟು ಮಹಂತೇಶ್ವರ ಗುರೂಜಿ ಅವರು ಸಾವಿರಕ್ಕೂ ಹೆಚ್ಚು ಯೋಗಪಟುಗಳಿಗೆ ಯೋಗದ ವಿವಿಧ ಆಸನದ ತರಬೇತಿ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಗಂಗಾಧರ್, ನಗರಸಭೆ ಆಯುಕ್ತ ಪರ ಮೇಶ್ವರಪ್ಪ, ಉಪಾಧ್ಯಕ್ಷ ಪಾರ್ಥಸಾರಥಿ, ರೋಟರಿ ಸಂಸ್ಥೆ ಅಧ್ಯಕ್ಷ ದಿವಾಕರ, ಕಾರ್ಯ ದರ್ಶಿ ಸುರೇಶ್, ಮಾಜಿ ಅಧ್ಯಕ್ಷ ಯೋಗೇಶ್ ಆಚಾರ್, ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷೆ ಲಕ್ಷ್ಮಿ ತಿಮ್ಮರಾಜು, ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ವೈ.ಖಾನ್ ಇದ್ದರು.
ವಿವೇಕಾನಂದ ಶಿಕ್ಷಣ ಕಾಲೇಜು: ಕಾಲೇಜಿನ ಆವರಣದಲ್ಲಿ ಮಲೆ ಮಲ್ಲೇಶ್ವರ ಯೋಗ ಕೇಂದ್ರ, ವಿವೇಕಾನಂದ ಯೋಗ ಕೇಂದ್ರ, ಪಿರಮಿಡ್ ಧ್ಯಾನ ಕೇಂದ್ರ, ಶ್ರೀ ಯಾದವ ಧ್ಯಾನ ಕೇಂದ್ರ, ಅಗಸ್ತ್ಯ ಯೋಗ ಕೇಂದ್ರ, ರಾಷ್ಟ್ರೀಯ ಯೋಗ ಕೇಂದ್ರಗಳ ಸಂಯು ಕ್ತಾಶ್ರಯದಲ್ಲಿ ಯೋಗಾಭ್ಯಾಸ ನಡೆಸಿ ಕೊಡ ಲಾಯಿತು. ಶಿಕ್ಷಕರಾದ ಬಸವರಾಜು, ಕಾಮೇಶ್ವರಿ ಭಟ್, ಕವಿತಾ, ಕೃಷ್ಣ, ಹೇಮಂತ್, ಡಾ. ರಜತ್, ಉಮೇಶ್, ಆರತಿ ಇದ್ದರು.

ಶ್ರವಣಬೆಳಗೊಳ: ಶ್ರವಣಬೆಳಗೊಳದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನ ಆಚರಿಸಲಾಯಿತು. ಮುಖ್ಯ ಶಿಕ್ಷಕ ರಾಮೇಗೌಡ ಮಾತನಾಡಿ, ಯಾವ ದೇಶವು ಸದೃಢ ಯುವಕರನ್ನು ಹೊಂದಿ ರುತ್ತದೆಯೋ ಅದು ನಿಜವಾದ ಶ್ರೀಮಂತ ದೇಶ, ಇದಕ್ಕೆ ಯೋಗವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಉಪನ್ಯಾಸಕಿ ವನಜಾಕ್ಷಿ ಮಾತನಾಡಿ, ಪ್ರತಿನಿತ್ಯ ಒಂದು ಗಂಟೆ ಯೋಗಾಭ್ಯಾಸ ಮಾಡಬೇಕು. ಇದರಿಂದ ದೇಹ ಮತ್ತು ಮನಸ್ಸು ಸದೃಢಗೊಳ್ಳುತ್ತದೆ ಎಂದರು.ಪ್ರಾಂಶುಪಾಲ ಮೋಹನ್, ಕಾಲೇಜು ಉಪನ್ಯಾಸಕರು, ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Translate »