ಚಾಮರಾಜನಗರ

ಬೇಗೂರಿನಲ್ಲಿ ಫುಟ್‍ಪಾತ್ ಅಂಗಡಿಗಳ ತೆರವು
ಚಾಮರಾಜನಗರ

ಬೇಗೂರಿನಲ್ಲಿ ಫುಟ್‍ಪಾತ್ ಅಂಗಡಿಗಳ ತೆರವು

April 3, 2020

ಬೇಗೂರು, ಏ.2(ಕಿರಣ್‍ಬೇಗೂರು)- ಗ್ರಾಮದ ರಸ್ತೆ ಚರಂಡಿ ಮತ್ತು ರಾಷ್ಟ್ರೀಯ ಹೆದ್ದಾರಿ(766)ಯ ಎರಡು ಬದಿಯ ಫುಟ್‍ಬಾತ್ ಅಂಗಡಿಗಳು ಮತ್ತು ಫಾಸ್ಟ್ ಫುಡ್, ಪಾನಿಪುರಿ ಅಂಗಡಿ ಗಳನ್ನು ತೆರವುಗೊಳಿಸಿದ್ದು, ಬೇಗೂರು ಗ್ರಾಮ ಸಂಪೂರ್ಣ ವಾಗಿ ಸ್ವಚ್ಛಗೊಳ್ಳುತ್ತಿದೆ. ಬೇಗೂರು ಗ್ರಾಮ ಪಂಚಾ ಯಿತಿ ವತಿಯಿಂದ ಕಳೆದ 3, 4 ದಿನಗಳಿಂದ ಗ್ರಾಮದ 1 ಬ್ಲಾಕ್ ಮತ್ತು ಹೊಸ ಬಡಾವಣೆಯ ಚರಂಡಿ ಹೂಳು ತೆಗೆದು ಸ್ವಚ್ಛಗೊಳಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಫಾಸ್ಟ್‍ಫುಡ್‍ಗಳು ಅತಿಯಾಗಿದ್ದು ಪಾದಚಾರಿಗಳು ಸಂಚರಿಸಲು ಮತ್ತು ವಾಹನಗಳ ನಿಲುಗಡೆಗೆ ತೊಂದರೆಯಾಗುತಿತ್ತು….

ಕೊಳ್ಳೇಗಾಲದಲ್ಲಿ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ರೌಂಡ್‍ಅಪ್
ಚಾಮರಾಜನಗರ

ಕೊಳ್ಳೇಗಾಲದಲ್ಲಿ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ರೌಂಡ್‍ಅಪ್

April 2, 2020

ಎಪಿಎಂಸಿ, ಉಪವಿಭಾಗ ಆಸ್ಪತ್ರೆ, ಇಂದಿರಾ ಕ್ಯಾಂಟಿನ್ ಪರಿಶೀಲನೆ ಕೊಳ್ಳೇಗಾಲ, ಏ.1(ಎನ್ ನಾಗೇಂದ್ರ)- ಕೃಷಿ ಉತ್ಪನ್ನ ಮಾರುಕಟ್ಟೆ (ತರಕಾರಿ ಮಾರುಕಟ್ಟೆ) ಪ್ರಾಂಗಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಸಚಿವರ ಜೊತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಕೊಳ್ಳೇಗಾಲ ಶಾಸಕ ಎನ್ ಮಹೇಶ್, ಹನೂರು ಶಾಸಕ ಆರ್ ನರೇಂದ್ರ, ಎಸ್ಪಿ ಆನಂದ್ ಕುಮಾರ್, ತಹಸೀಲ್ದಾರ್ ಕುನಾಲ್, ಎಪಿಎಂಸಿ ಕಾರ್ಯದರ್ಶಿ ನಾಗೇಶ್, ಡಿವೈಎಸ್ಪಿ ನವೀನ್ ಕುಮಾರ್, ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸೈ…

ಹನೂರು ಬಳಿ ಮಹಾರಾಷ್ಟ್ರದ ಆದಿವಾಸಿಗಳ ಭೇಟಿ ಮಾಡಿದ ಸಚಿವ ಸುರೇಶ್‍ಕುಮಾರ್
ಚಾಮರಾಜನಗರ

ಹನೂರು ಬಳಿ ಮಹಾರಾಷ್ಟ್ರದ ಆದಿವಾಸಿಗಳ ಭೇಟಿ ಮಾಡಿದ ಸಚಿವ ಸುರೇಶ್‍ಕುಮಾರ್

April 2, 2020

ಕೊಳ್ಳೇಗಾಲ, ಏ.1- ಮಹಾರಾಷ್ಟ್ರದ ರಾಯಘಡ್ ಪ್ರದೇಶದಿಂದ ವಲಸೆ ಬಂದು ಹನೂರು ಕ್ಷೇತ್ರ ವ್ಯಾಪ್ತಿಯ ಗೌಡಳ್ಳಿ ಗ್ರಾಮದ ಹೊರವಲಯದಲ್ಲಿ ವಾಸ್ತವ್ಯ ಹೂಡಿರುವ ಆದಿವಾಸಿ ಕುಟುಂಬಗಳನ್ನು ಜಿಲ್ಲಾಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ಬುಧವಾರ ಭೇಟಿ ಮಾಡಿ, ಅವರ ಸಮಸ್ಯೆ ಆಲಿಸಿದರು. ನಂತರ ಈ ಕುರಿತು ಕೊಳ್ಳೇಗಾಲದಲ್ಲಿ ಸುದ್ದಿಗಾರರಿಗೆ ವಿವರ ನೀಡಿದ ಅವರು, ಮಹಾ ರಾಷ್ಟ್ರದ ರಾಯಘಡ್ ಪ್ರದೇಶದಿಂದ ಗುತ್ತಿಗೆ ದಾರರು ಅವರನ್ನು ಜಾಲಿ ಮರದಿಂದ ಇದ್ದಿಲು ತಯಾರಿಸುವ ಕೆಲಸಕ್ಕೆ ಕರೆತಂದಿದ್ದಾರೆ, ಅವರು ಜಿಲ್ಲೆಯ ವಿವಿಧ 5 ಕಡೆ ಕೆಲಸ ನಿರ್ವಹಿಸುತ್ತಿದ್ದಾರೆ….

ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ 12 ಮಂದಿ ಭಾಗಿ
ಚಾಮರಾಜನಗರ

ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ 12 ಮಂದಿ ಭಾಗಿ

April 2, 2020

ಚಾಮರಾಜನಗರ, ಏ.1(ಎಸ್‍ಎಸ್)-ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ 12 ಮಂದಿ ಭಾಗವಹಿಸಿದ್ದರು. ಜಿಲ್ಲೆಯ ಕೊಳ್ಳೇಗಾಲ ಮತ್ತು ಹನೂರಿಗೆ ಬುಧವಾರ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಈ ವಿಷಯವನ್ನು ಬಹಿರಂಗಪಡಿಸಿದರು. ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಗ್ ಜಮಾತ್ ಕೇಂದ್ರ ಕಚೇರಿಯಲ್ಲಿ ಮಾರ್ಚ್ 13ರಿಂದ 15ರವರೆಗೆ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ ನಾಲ್ಕು ಮಂದಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಮೊದಲಿಗೆ ದೊರೆಯಿತು. ಇವರಲ್ಲಿ ಮೂವರನ್ನು ಪತ್ತೆ ಹಚ್ಚಿ ನಗರದ ಕೋವಿಡ್-19 ವಿಶೇಷ ನಿಗಾ…

ಲಾಕ್‍ಡೌನ್; ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ
ಚಾಮರಾಜನಗರ

ಲಾಕ್‍ಡೌನ್; ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ

April 2, 2020

ಚಾಮರಾಜನಗರ, ಏ.1(ಎಸ್‍ಎಸ್)-ಭಾರತವೇ ಲಾಕ್‍ಡೌನ್ ಆಗಿರುವ ಕಾರಣ ಜಿಲ್ಲೆಯಲ್ಲಿ ಆಹಾರ ಪದಾರ್ಥ ಗಳ ಬೆಲೆ ಗಗನಕ್ಕೇರಿದೆ. ಇದು ಜನ ಸಾಮಾನ್ಯರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕೊರೊನಾ ವೈರಸ್ (ಕೋವಿಡ್-19) ಹರಡುವುದನ್ನು ತಪ್ಪಿಸಲು ಮಾರ್ಚ್ 25ರಿಂದ 21 ದಿನಗಳ ಕಾಲ ಇಡೀ ಭಾರತವನ್ನು ಲಾಕ್‍ಡೌನ್ ಘೋಷಿಸ ಲಾಗಿದೆ. ಜಿಲ್ಲೆಯಲ್ಲಿ ಆಹಾರ ಪದಾರ್ಥ ಗಳನ್ನು (ದಿನಸಿ ಅಂಗಡಿ) ಮಾರಾಟ ಮಾಡಲು ಬೆಳಿಗ್ಗೆ 6ರಿಂದ 10 ಗಂಟೆ, ಸಂಜೆ 5 ರಿಂದ 7 ಗಂಟೆ ವೇಳೆಯನ್ನು ನಿಗದಿಗೊಳಿಸಿದೆ. ಆದರೆ ಅಂಗಡಿಗಳಿಗೆ…

ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಅಭಾವ ಇಲ್ಲ: ಡಿಸಿ ಡಾ. ಎಂ.ಆರ್. ರವಿ
ಚಾಮರಾಜನಗರ

ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಅಭಾವ ಇಲ್ಲ: ಡಿಸಿ ಡಾ. ಎಂ.ಆರ್. ರವಿ

April 1, 2020

ಚಾಮರಾಜನಗರ, ಮಾ.31- ಜಿಲ್ಲೆಯಲ್ಲಿ ಅಗತ್ಯ ವಸ್ತುಗಳಿಗೆ ಯಾವುದೇ ಅಭಾವ ಇಲ್ಲ. ಏಪ್ರಿಲ್ ಮತ್ತು ಮೇ ತಿಂಗಳ ಪಡಿತರ ವಿತರಣೆಗಾಗಿ ಅಗತ್ಯವಾದ ದಾಸ್ತಾನು ಮಾಡಲಾಗುತ್ತಿದೆ ಎಂದು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲೆಯಲ್ಲಿ ದಿಗ್ಭಂಧನ (ಲಾಕ್‍ಡೌನ್) ವಿದ್ದರೂ ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆ ಇಲ್ಲ. ದಿನಸಿ ಪದಾರ್ಥಗಳು ಪ್ರಸ್ತುತ ದಾಸ್ತಾನು ಇದೆ. ಮೈಸೂರು, ಬೆಂಗಳೂರಿನಿಂದಲೂ ದಿನಸಿ ಸಾಮಗ್ರಿಗಳನ್ನು ತರಲು 10…

ಕ್ವಾರೆಂಟೇನ್ ಕೇಂದ್ರದಲ್ಲಿ ಮುಂದುವರೆದ ನಿಗಾ : ಓರ್ವನ ವರದಿ ನೆಗೆಟಿವ್
ಚಾಮರಾಜನಗರ

ಕ್ವಾರೆಂಟೇನ್ ಕೇಂದ್ರದಲ್ಲಿ ಮುಂದುವರೆದ ನಿಗಾ : ಓರ್ವನ ವರದಿ ನೆಗೆಟಿವ್

April 1, 2020

ಚಾಮರಾಜನಗರ, ಮಾ.31- ವಿದೇಶಗಳಿಂದ ಪ್ರಯಾಣಿಸಿ ಚಾಮರಾಜನಗರ ಜಿಲ್ಲೆಗೆ ಇದುವರೆಗೆ ಒಟ್ಟು 43 ಜನರು ಬಂದಿದ್ದು, ಇವರಲ್ಲಿ ಇಬ್ಬರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ ನಿಗಾವಣೆ ಮಾಡಲಾಗುತ್ತಿದೆ ಹಾಗೂ 6 ಜನರನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕ್ವಾರೆಂಟೈನ್ ಕೇಂದ್ರದಲ್ಲಿ ಪ್ರತ್ಯೇಕಿಸಿ ನಿಗಾವಣೆ ಮಾಡಲಾಗುತ್ತಿದೆ. ಈಗಾಗಲೇ 35 ಮಂದಿ 14 ದಿನಗಳ ಹೋಮ್ ಕ್ವಾರೆಂಟೈನ್ ಅವಧಿಯನ್ನು ಪೂರ್ಣಗೊಳಿಸಿರುತ್ತಾರೆ. ಶನಿವಾರ ಒಬ್ಬರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ಕಳುಹಿಸಿಕೊಡ ಲಾಗಿದ್ದು,…

ನಂಜನಗೂಡು ಕಾರ್ಖಾನೆಯ ನೌಕರರಿಗೆ ಕೊರೊನಾ ಸೋಂಕು ಜಿಲ್ಲೆಯ ಜನತೆಯಲ್ಲಿ ಹೆಚ್ಚಿದ ಆತಂಕ
ಚಾಮರಾಜನಗರ

ನಂಜನಗೂಡು ಕಾರ್ಖಾನೆಯ ನೌಕರರಿಗೆ ಕೊರೊನಾ ಸೋಂಕು ಜಿಲ್ಲೆಯ ಜನತೆಯಲ್ಲಿ ಹೆಚ್ಚಿದ ಆತಂಕ

April 1, 2020

ಚಾಮರಾಜನಗರ, ಮಾ.31(ಎಸ್‍ಎಸ್)- ಚಾಮರಾಜನಗರದ ನೆರೆಯ ನಂಜನಗೂಡು ಪಟ್ಟಣದ ಜುಬಿಲಿಯಂಟ್ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 12 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿರುವುದು ಜಿಲ್ಲೆಯ ಜನತೆಗೆ ಆತಂಕವನ್ನು ತಂದೊಡ್ಡಿದೆ. ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆಯಲ್ಲಿ ಜಿಲ್ಲೆಯ 47 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರೆಲ್ಲರನ್ನೂ ಈಗ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಆದರೂ ಸಹ ಜಿಲ್ಲೆಯ ಜನರಲ್ಲಿ ಆತಂಕವನ್ನು ಉಂಟು ಮಾಡಿದೆ. ಚಾಮರಾಜನಗರದಿಂದ ನಂಜನಗೂಡು 36 ಕಿ.ಮೀ. ದೂರ ಇದೆ. ಚಾಮರಾಜ ನಗರದಿಂದ ಮೈಸೂರಿಗೆ ತೆರಳುವವರ ಪೈಕಿ…

ಲಾಕ್‍ಡೌನ್ ಉಲ್ಲಂಘನೆ: 280 ಬೈಕ್‍ಗಳ ವಶ
ಚಾಮರಾಜನಗರ

ಲಾಕ್‍ಡೌನ್ ಉಲ್ಲಂಘನೆ: 280 ಬೈಕ್‍ಗಳ ವಶ

April 1, 2020

ಚಾಮರಾಜನಗರ, ಮಾ.31(ಎಸ್‍ಎಸ್)- ಲಾಕ್ ಡೌನ್ ಆದೇಶ ಉಲ್ಲಂಘಿಸಿ ಅನಗತ್ಯ ವಾಗಿ ಸಂಚರಿಸುತ್ತಿದ್ದ ಬೈಕ್ ಸವಾರರ ಸುಮಾರು 280 ಬೈಕ್‍ಗಳನ್ನು ಜಿಲ್ಲೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಬೈಕ್ ಸವಾರರು ತಿರುಗಾಡುತ್ತಿದ್ದುದು ಜಿಲ್ಲೆಯಲ್ಲಿ ಹೆಚ್ಚಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲೆಯ ಪೊಲೀಸರು, ಯಾವುದೇ ಸಕಾರಣ ಇಲ್ಲದೇ ರಸ್ತೆಗಿಳಿದ ಬೈಕ್‍ಗಳನ್ನು ವಶಕ್ಕೆ ಪಡೆಯುವುದನ್ನು ಸೋಮವಾರದಿಂದ ಆರಂಭಿಸಿದ್ದಾರೆ. ಮೊದಲ ದಿನವಾದ ಸೋಮವಾರವೇ ಜಿಲ್ಲೆಯಲ್ಲಿ 280 ಬೈಕ್‍ಗಳನ್ನು ವಶಕ್ಕೆ ಪಡೆಯ ಲಾಗಿದೆ ಎಂದು ಡಿವೈಎಸ್ಪಿ ಜಿ. ಮೋಹನ್ `ಮೈಸೂರು…

ಅಜಾದ್ ಹಿಂದೂ ಸೇನೆಯಿಂದ ನಿರ್ಗತಿಕರಿಗೆ ಊಟದ ವ್ಯವಸ್ಥೆ
ಚಾಮರಾಜನಗರ

ಅಜಾದ್ ಹಿಂದೂ ಸೇನೆಯಿಂದ ನಿರ್ಗತಿಕರಿಗೆ ಊಟದ ವ್ಯವಸ್ಥೆ

April 1, 2020

ಚಾಮರಾಜನಗರ, ಮಾ.31- ನಗರದ ಸಿಡಿಎಸ್ ಭವನದಲ್ಲಿ ನಗರಸಭೆ ವತಿಯಿಂದ ತೆರೆದಿರುವ ವಸತಿ ರಹಿತರು ಮತ್ತು ನಿರ್ಗತಿಕರ ಆಶ್ರಯ ಕೇಂದ್ರದಲ್ಲಿರುವ ನಿರ್ಗತಿಕರಿಗೆ ಅಜಾದ್ ಹಿಂದೂ ಸೇನೆ ವತಿಯಿಂದ ಒಂದು ದಿನ ತಿಂಡಿ, ಊಟ ವ್ಯವಸ್ಥೆ ಮಾಡಲಾಯಿತು. ಇಡೀ ವಿಶ್ವಾದ್ಯಂತ ಕೊರೊನಾ ವೈರಸ್ ಹರಡಿದ್ದು, ಸಾವಿರಾರು ಮಂದಿ ಮೃತಪಟ್ಟಿ ದ್ದಾರೆ. ಭಾರತದೇಶದಲ್ಲೂ ಅನೇಕ ಜೀವ ಪಡೆದಿದ್ದು, ರಾಜ್ಯದಲ್ಲೂ 3 ಮಂದಿ ಬಲಿ ತೆಗೆದುಕೊಂಡಿದೆ. ಕೊರೊನಾ ವೈರಸ್ ತಡೆ ಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಲಾಕ್‍ಡೌನ್ ಜಾರಿ ಮಾಡಿದ್ದು,…

1 17 18 19 20 21 141
Translate »