ಅಜಾದ್ ಹಿಂದೂ ಸೇನೆಯಿಂದ ನಿರ್ಗತಿಕರಿಗೆ ಊಟದ ವ್ಯವಸ್ಥೆ
ಚಾಮರಾಜನಗರ

ಅಜಾದ್ ಹಿಂದೂ ಸೇನೆಯಿಂದ ನಿರ್ಗತಿಕರಿಗೆ ಊಟದ ವ್ಯವಸ್ಥೆ

April 1, 2020

ಚಾಮರಾಜನಗರ, ಮಾ.31- ನಗರದ ಸಿಡಿಎಸ್ ಭವನದಲ್ಲಿ ನಗರಸಭೆ ವತಿಯಿಂದ ತೆರೆದಿರುವ ವಸತಿ ರಹಿತರು ಮತ್ತು ನಿರ್ಗತಿಕರ ಆಶ್ರಯ ಕೇಂದ್ರದಲ್ಲಿರುವ ನಿರ್ಗತಿಕರಿಗೆ ಅಜಾದ್ ಹಿಂದೂ ಸೇನೆ ವತಿಯಿಂದ ಒಂದು ದಿನ ತಿಂಡಿ, ಊಟ ವ್ಯವಸ್ಥೆ ಮಾಡಲಾಯಿತು.

ಇಡೀ ವಿಶ್ವಾದ್ಯಂತ ಕೊರೊನಾ ವೈರಸ್ ಹರಡಿದ್ದು, ಸಾವಿರಾರು ಮಂದಿ ಮೃತಪಟ್ಟಿ ದ್ದಾರೆ. ಭಾರತದೇಶದಲ್ಲೂ ಅನೇಕ ಜೀವ ಪಡೆದಿದ್ದು, ರಾಜ್ಯದಲ್ಲೂ 3 ಮಂದಿ ಬಲಿ ತೆಗೆದುಕೊಂಡಿದೆ. ಕೊರೊನಾ ವೈರಸ್ ತಡೆ ಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಲಾಕ್‍ಡೌನ್ ಜಾರಿ ಮಾಡಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊರೊನಾ ವೈರಸ್ ತಡಗಟ್ಟುಲು ಅಗತ್ಯ ಕ್ರಮಗಳ ಕೈಗೊಂಡಿದ್ದಾರೆ. ಆದರಿಂದ ಏ.14 ರ ತನಕ ಯಾರೂ ಮನೆಯಿಂದ ಹೊರಗಡೆ ಬಾರದೆ ರಾಜ್ಯ, ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಲು ಸಹಕರಿಸುವಂತೆ ಅಜಾದ್ ಹಿಂದೂ ಸೇನೆಯ ಜಿಲ್ಲಾಧ್ಯಕ್ಷ ಎಂ.ಎಸ್. ಪೃಥ್ವಿರಾಜ್ ಮನವಿ ಮಾಡಿದರು.

ದೇಶ, ರಾಜ್ಯ ಲಾಕ್‍ಡೌನ್ ಹಿನ್ನಲೆ ಯಲ್ಲಿ ನಗರಸಭೆ ವತಿಯಿಂದ ವಸತಿ ರಹಿತರು ಮತ್ತು ನಿರ್ಗತಿಕರ ಆಶ್ರಯ ಕೇಂದ್ರ ಸ್ಥಾಪನೆ ಮಾಡಿರುವುದು ಆಶಾದಾ ಯಕ ಬೆಳವಣಿಗೆಯಾಗಿದೆ. ನಮ್ಮ ಸೇನೆಯ ವತಿಯಿಂದ ನಿರ್ಗತಿಕರಿಗೆ ಒಂದು ದಿನ ಊಟ, ತಿಂಡಿ ಸೇವೆ ಮಾಡಲಾಗಿದೆ ಎಂದರು.

ಕೇಂದ್ರ, ರಾಜ್ಯ ಸರ್ಕಾರ ಜಾರಿ ಮಾಡಿ ರುವ ಲಾಕ್‍ಡೌನ್‍ನ್ನು ಜಿಲ್ಲಾಡಳಿತ ಉತ್ತಮ ರೀತಿಯಲ್ಲಿ ಪಾಲನೆ ಮಾಡಿದ್ದು, ಅದರಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪೌರ ಕಾರ್ಮಿಕರು ಉತ್ತಮ ರೀತಿ ಕಾರ್ಯನಿರ್ವಹಿಸುತ್ತಾದೆ. ಜನತೆಯೂ ಉತ್ತಮ ಬೆಂಬಲ ನೀಡಿ ಜಿಲ್ಲೆಯಲ್ಲಿ ಕೊರೊನಾ ತಡೆಗಟ್ಟುವಲ್ಲಿ ಯಶ್ವಸಿಯಾಗಿ ದ್ದಾರೆ. ಆದರಿಂದ ತಮಗೆಲ್ಲರಿಗೂ ಈ ಮೂಲಕ ಅಭಿನಂದನೆ ಸಲ್ಲಿಸಲಾಗವುದು ಎಂದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಶಿವರಾಜ್, ಮಾಜಿ ಅಧ್ಯಕ್ಷ ಸಿ.ಎಸ್.ಸುರೇಶ್‍ನಾಯಕ, ಮಾಜಿ ಸದಸ್ಯ ರಾಜೇಶ್‍ನಾಯಕ, ಯುವ ಮುಖಂಡರಾದ ಶಿವುವಿರಾಟ್, ನಂಜುಂಡನಾಯಕ, ಚಂದು, ಶಿವು, ಸ್ವಾಮಿ, ಕಿರಣ್, ರಘು, ಶ್ರೀನಿವಾಸ ನಾಯಕ ಇತರರು ಹಾಜರಿದ್ದರು.

Translate »