ಲಾಕ್‍ಡೌನ್ ಉಲ್ಲಂಘನೆ: 280 ಬೈಕ್‍ಗಳ ವಶ
ಚಾಮರಾಜನಗರ

ಲಾಕ್‍ಡೌನ್ ಉಲ್ಲಂಘನೆ: 280 ಬೈಕ್‍ಗಳ ವಶ

April 1, 2020

ಚಾಮರಾಜನಗರ, ಮಾ.31(ಎಸ್‍ಎಸ್)- ಲಾಕ್ ಡೌನ್ ಆದೇಶ ಉಲ್ಲಂಘಿಸಿ ಅನಗತ್ಯ ವಾಗಿ ಸಂಚರಿಸುತ್ತಿದ್ದ ಬೈಕ್ ಸವಾರರ ಸುಮಾರು 280 ಬೈಕ್‍ಗಳನ್ನು ಜಿಲ್ಲೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಬೈಕ್ ಸವಾರರು ತಿರುಗಾಡುತ್ತಿದ್ದುದು ಜಿಲ್ಲೆಯಲ್ಲಿ ಹೆಚ್ಚಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲೆಯ ಪೊಲೀಸರು, ಯಾವುದೇ ಸಕಾರಣ ಇಲ್ಲದೇ ರಸ್ತೆಗಿಳಿದ ಬೈಕ್‍ಗಳನ್ನು ವಶಕ್ಕೆ ಪಡೆಯುವುದನ್ನು ಸೋಮವಾರದಿಂದ ಆರಂಭಿಸಿದ್ದಾರೆ. ಮೊದಲ ದಿನವಾದ ಸೋಮವಾರವೇ ಜಿಲ್ಲೆಯಲ್ಲಿ 280 ಬೈಕ್‍ಗಳನ್ನು ವಶಕ್ಕೆ ಪಡೆಯ ಲಾಗಿದೆ ಎಂದು ಡಿವೈಎಸ್ಪಿ ಜಿ. ಮೋಹನ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಲಾಕ್ ಡೌನ್ ಮುಗಿಯುವವರೆಗೂ ಕಾರ್ಯಾಚರಣೆಯನ್ನು ಮುಂದುವರೆಸ ಲಾಗುವುದು. ಯಾವುದೇ ತುರ್ತು ಕೆಲಸ ಇಲ್ಲದಿದ್ದರೂ ವಿನಾಕಾರಣ ಮನೆಯಿಂದ ಹೊರ ಬರುವ ವಾಹನಗಳನ್ನು ಜಪ್ತಿ ಮಾಡಲಾ ಗುವುದು ಎಂದು ಅವರು ತಿಳಿಸಿದರು.

Translate »