ನಂಜನಗೂಡು ಕಾರ್ಖಾನೆಯ ನೌಕರರಿಗೆ ಕೊರೊನಾ ಸೋಂಕು ಜಿಲ್ಲೆಯ ಜನತೆಯಲ್ಲಿ ಹೆಚ್ಚಿದ ಆತಂಕ
ಚಾಮರಾಜನಗರ

ನಂಜನಗೂಡು ಕಾರ್ಖಾನೆಯ ನೌಕರರಿಗೆ ಕೊರೊನಾ ಸೋಂಕು ಜಿಲ್ಲೆಯ ಜನತೆಯಲ್ಲಿ ಹೆಚ್ಚಿದ ಆತಂಕ

April 1, 2020

ಚಾಮರಾಜನಗರ, ಮಾ.31(ಎಸ್‍ಎಸ್)- ಚಾಮರಾಜನಗರದ ನೆರೆಯ ನಂಜನಗೂಡು ಪಟ್ಟಣದ ಜುಬಿಲಿಯಂಟ್ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 12 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿರುವುದು ಜಿಲ್ಲೆಯ ಜನತೆಗೆ ಆತಂಕವನ್ನು ತಂದೊಡ್ಡಿದೆ.

ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆಯಲ್ಲಿ ಜಿಲ್ಲೆಯ 47 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರೆಲ್ಲರನ್ನೂ ಈಗ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಆದರೂ ಸಹ ಜಿಲ್ಲೆಯ ಜನರಲ್ಲಿ ಆತಂಕವನ್ನು ಉಂಟು ಮಾಡಿದೆ.

ಚಾಮರಾಜನಗರದಿಂದ ನಂಜನಗೂಡು 36 ಕಿ.ಮೀ. ದೂರ ಇದೆ. ಚಾಮರಾಜ ನಗರದಿಂದ ಮೈಸೂರಿಗೆ ತೆರಳುವವರ ಪೈಕಿ ಹೆಚ್ಚು ಮಂದಿ ನಂಜನಗೂಡು ಮಾರ್ಗದಲ್ಲಿಯೇ ತೆರಳುತ್ತಾರೆ. ಇದಲ್ಲದೇ ಪ್ರತಿನಿತ್ಯ ನೂರಾರು ಜನರು ಜಿಲ್ಲೆಯಿಂದ ನಂಜನಗೂಡಿಗೆ, ನಂಜನಗೂಡಿನಿಂದ ಜಿಲ್ಲೆಗೆ ಆಗಮಿಸುತ್ತಾರೆ. ಹೀಗಾಗಿ ಕೊರೊನಾ ಸೋಂಕಿನ ಭಯ ಜಿಲ್ಲೆಯ ಜನತೆಯಲ್ಲಿ ಭೀತಿ ಹುಟ್ಟಿಸಿದೆ.

ಜಿಲೆಯಲ್ಲಿ ಕೊರೊನಾ ಸೋಂಕು ಯಾರೊಬ್ಬರಲ್ಲೂ ಕಾಣಿಸಿಕೊಂಡಿಲ್ಲ. ಇದು ಜಿಲ್ಲೆಯ ಜನತೆಯಲ್ಲಿ ಹಾಗೂ ಜಿಲ್ಲಾಡಳಿತಕ್ಕೆ ಸಮಾಧಾನ ತರಿಸಿದೆ. ಆದರೂ ಸಹ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳು ಹಾಗೂ ಅಧಿಕಾರಿ ವರ್ಗದವರು ಜಿಲ್ಲೆಗೆ ಕೊರೊನಾ ಸೋಂಕು ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೂ ಸಹ ಎಲ್ಲೋ ಒಂದು ಕಡೆ ಜಿಲ್ಲೆಯ ಜನತೆ ಯಲ್ಲಿ ಆತಂಕ ಮನೆ ಮಾಡಿರುವುದು ಸುಳ್ಳಲ್ಲ.

ಜುಬಿಲಿಯೆಂಟ್ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಿಲ್ಲೆಯ ಎಲ್ಲರ ಮೇಲೂ ಜಿಲ್ಲಾಡಳಿತ ನಿಗಾ ವಹಿಸಿದೆ. ಇದರಲ್ಲಿ ಓರ್ವರ ರಕ್ತದ ಮಾದರಿ ಹಾಗೂ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರೆಲ್ಲರ ಆರೋಗ್ಯ ಸ್ಥಿರವಾ ಗಿರಲಿ. ಎಲ್ಲರ ವರದಿಯೂ ನೆಗೆಟಿವ್ ಆಗಿರಲಿ ಎಂಬುದು ಜಿಲ್ಲೆಯ ಜನತೆ ಹಾಗೂ ಜಿಲ್ಲಾಡಳಿತದ ಆಶಯವಾಗಿದೆ.

Translate »