ಚಾಮರಾಜನಗರ, ಜ.23- ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಕೈಗೊಂಡಿ ರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಮತ್ತು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಎಸ್. ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಇಂದು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಸಲಾಗುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ…
ಯಳಂದೂರು ತಾಪಂ ಅಧ್ಯಕ್ಷರ ಅವಿರೋಧ ಆಯ್ಕೆ
January 24, 2020ಯಳಂದೂರು, ಜ.23(ವಿ.ನಾಗರಾಜು)- ತಾಪಂ ಉಪಾಧ್ಯಕ್ಷರಾಗಿ ಭಾಗ್ಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದೆ ಉಪಾಧ್ಯಕ್ಷರಾಗಿದ್ದ ಮಲ್ಲಾಜಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಭಾಗ್ಯಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಆಗಿದೆ ಎಂದು ಚುನಾವಣಾ ಧಿಕಾರಿ ನಿಕಿತಾ ಚಿನ್ನಸ್ವಾಮಿ ತಿಳಿಸಿದರು. ಭಾಗ್ಯಮ್ಮ ಮಾತನಾಡಿ, ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವುದು ತುಂಬಾ ಖುಷಿ ತಂದಿದೆ. ಕಾಂಗ್ರೆಸ್ ಪಕ್ಷದ ವರಿಷ್ಠರ ಮೇರೆಗೆ ನನಗೆ ಉಪಾಧ್ಯಕ್ಷ ಸ್ಥಾನ ದೊರಕಿದ್ದು, ಪಕ್ಷಕ್ಕೆ ಮತ್ತು ತಾಲೂಕಿನ ಜನತೆಗೆ ಚಿರಋಣಿಯಾಗಿ ಸೇವೆ ಸಲ್ಲಿಸುತ್ತೇನೆ ಎಂದರು. ಶ್ರೀಮತಿ…
ಚಾ.ನಗರ ಜಿಲ್ಲೆ ಜನಪದರ ಶ್ರೀಮಂತ ನಾಡು
January 24, 2020ಹನೂರು, ಜ.23(ಸೋಮಶೇಖರ್)- ಚಾ.ನಗರ ಜಿಲ್ಲೆ ಜನಪದರ ಶ್ರೀಮಂತನಾಡು, ಅಕ್ಷರ ಜ್ಞಾನವೇ ಇಲ್ಲದವರು ಜನಪದರು, ಅವರು ಕಟ್ಟಿಕೊಟ್ಟ ಅತ್ಯಂತ ಪ್ರಾಚೀನ ಹಾಗೂ ಶ್ರೀಮಂತ ಭಾಷೆ ನಮ್ಮದಾಗಿದೆ. ವೈಭವಯುತ ರಾಜವಂಶ ರಾಜ್ಯವಾಳಿದ ಐತಿಹ್ಯ ನಮಗಿದೆ. ಮೊಟ್ಟ ಮಾದಲ ಮಹಾಕಾವ್ಯವನ್ನು ಕೊಡುಗೆ ಯಾಗಿ ಕೊಟ್ಟ ಪುಣ್ಯ ಜಿಲ್ಲೆ ಇದು. ನನಗೆ ಹೆಸರು ತಂದು ಕೊಟ್ಟಿದ್ದು ಈ ಜಿಲ್ಲೆಯ ಮಹದೇಶ್ವರರು ಎಂದು ಜಾನಪದ ತಜ್ಞ, ವಿದ್ವಾಂಸ ಡಾ. ರಾಜಶೇಖರ್ ಹೇಳಿದರು. ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಜಿಲ್ಲಾ ಮಟ್ಟದ 10ನೇ ಸಾಹಿತ್ಯ…
ವಿವೇಕಾನಂದರು ಆಧುನಿಕ ಭಾರತ ಯುವಜನರ ಪ್ರೇರಕಶಕ್ತಿ
January 13, 2020ಚಾಮರಾಜನಗರ, ಜ.12- ಏಳಿ ಏದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಸಂದೇಶದ ಮೂಲಕ ದೇಶದ ಯುವಜನತೆಯನ್ನು ಬಡಿ ದೆಬ್ಬಿಸಿದ ಸ್ವಾಮಿ ವಿವೇಕಾನಂದರು ಆಧುನಿಕ ಭಾರತದ ಯುವಜನರ ಪ್ರೇರಕಶಕ್ತಿಯಾಗಿದ್ದಾರೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು. ನಗರದ ಜೆ.ಎಚ್. ಪಟೇಲ್ ಸಭಾಂಗಣ ದಲ್ಲಿಂದು ರಾಷ್ಟ್ರೀಯ ಯುವ ದಿನದ ಅಂಗವಾಗಿ ಜಿಲ್ಲಾಡಳಿತ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ಯುವ ಸಬಲೀಕರಣ ಕೇಂದ್ರದ ಉದ್ಘಾಟನಾ ಸಮಾ ರಂಭದ ಅಧ್ಯಕ್ಷತೆ ವಹಿಸಿ ಅವರು…
ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಆರಿದ್ರಾದೇವಿ ಪೂಜೆ
January 13, 2020ಗುಂಡ್ಲುಪೇಟೆ, ಜ.11(ಸೋಮ್.ಜಿ)- ಪಟ್ಟಣದಲ್ಲಿರುವ ಪುರಾತನ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಆರಿದ್ರಾ ದೇವಿಯ ಪೂಜೆಯನ್ನು ವಿಜೃಂಭಣೆ ಯಿಂದ ನೆರವೇರಿಸಲಾಯಿತು. ಬನದ ಹುಣ್ಣಿಮೆಯ ದಿನದಂದು ನಡೆಯುವ ಆರಿದ್ರಾದೇವಿ ಪೂಜೆಗಾಗಿ ದೇವಾಲಯವನ್ನು ಶುದ್ಧೀಕರಿಸಿ ತಳಿರು ತೋರಣಗಳಿಂದ ಅಲಂಕಾರ ಮಾಡಲಾ ಗಿತ್ತು. ಗುರುವಾರ ರಾತ್ರಿ ಅಂಧಕಾಸುರನ ಸಂಹಾರ ಕಾರ್ಯಕ್ರಮದ ನಂತರ ಶುಕ್ರವಾರ ದಂದು ಮುಂಜಾನೆಯಿಂದಲೇ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ಮತ್ತು ಕಣ್ಣನ್ ನೇತೃತ್ವದಲ್ಲಿ ದೇವರಿಗೆ ಅಭಿ ಷೇಕ, ಪೂಜೆ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿತು. ಈ ವಿಶೇಷ ಪೂಜಾ…
ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಆಗ್ರಹಿಸಿ ಪೋಷಕರ ಪ್ರತಿಭಟನೆ
January 13, 2020ಚಾಮರಾಜನಗರ ಜ.12- ಚಾಮರಾಜನಗರ ಉಪ್ಪಾರಬೀದಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಹಿಂದುಳಿದ ವರ್ಗದ ಮಕ್ಕಳಾಗಿರುತ್ತಾರೆ. 2017ರಲ್ಲಿ ರಾಷ್ಟ್ರೀಯ ಹೆದ್ದಾರಿ 209ರ ಅಗಲೀಕರಣ ಮಾಡುವಾಗ ಶಾಲೆಯ ಕಾಂಪೌಂಡ್ ಕೆಡವಿ ಹಾಕಿರುತ್ತಾರೆ. ಇದುವರೆವಿಗೂ ಸುತ್ತುಗೋಡೆ ನಿರ್ಮಾಣವಾಗಿರುವುದಿಲ್ಲ. ಇದರ ಬಗ್ಗೆ ಜಿಲ್ಲಾಧಿ ಕಾರಿಗಳಿಗೆ, ಶಾಸಕರಿಗೆ, ಸಂಸದರಿಗೆ ಹಲವಾರು ಬಾರಿ ಮನವಿ ಮಾಡಲಾಗಿದ್ದರೂ ಇದುವರೆವಿಗೂ ನಿರ್ಮಾಣವಾಗಿಲ್ಲ. ಇದರಿಂದ ರಾತ್ರಿ ವೇಳೆಯಲ್ಲಿ ಕುಡುಕರು, ದನಕರುಗಳು ಒಳ ಪ್ರವೇಶಿಸುತ್ತಿದ್ದು, ಶಾಲಾ ಪರಿಸರ ಹಾಳಾಗುತ್ತಿದೆ. ಇದರಿಂದ ಮಕ್ಕಳ…
ಜಿಪಂ ಅಧ್ಯಕ್ಷೆ ಶಿವಮ್ಮ ರಾಜೀನಾಮೆ ವಾಪಸ್?
January 11, 2020ಚಾಮರಾಜನಗರ, ಜ.10(ಎಸ್‍ಎಸ್)- ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಿವಮ್ಮ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀ ನಾಮೆಯನ್ನು ಶುಕ್ರವಾರ ವಾಪಸ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯ ದರ್ಶಿಗೆ ಡಿಸೆಂಬರ್ 30 ರಂದು ಶಿವಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಅಂಗೀ ಕಾರಕ್ಕೆ 15 ದಿನಗಳ ಕಾಲಾವಕಾಶವಿತ್ತು. ಈ ಅವಧಿಯೊಳಗೆ ರಾಜೀನಾಮೆಯನ್ನು ವಾಪಸ್ ಪಡೆಯಲು ಅವಕಾಶವಿತ್ತು. ಹೀಗಾಗಿ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ ಎಂದು ಉನ್ನತ ಮೂಲಗಳು ‘ಮೈಸೂರು ಮಿತ್ರ’ನಿಗೆ ಖಚಿತ ಪಡಿಸಿವೆ. ಜಿಪಂನಲ್ಲಿ…
ಹಳ್ಳಿ-ಹಳ್ಳಿಗಳಲ್ಲಿ ಯುವ ಬ್ರಿಗೇಡ್‍ನಿಂದ ಸ್ವಾಮಿ ವಿವೇಕಾನಂದರ ವಿಚಾರಧಾರೆ ಜಾಗೃತಿ
January 11, 2020ಚಾಮರಾಜನಗರ, ಜ.10(ಎಸ್‍ಎಸ್)- ಯುವ ಬ್ರಿಗೇಡ್ ಸಂಘಟನೆಯು ಗ್ರಾಮ ಗ್ರಾಮಗಳಲ್ಲಿ ಪಾದಯಾತ್ರೆ ಮಾಡಿ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಹಂಚುತ್ತಾ ಹಳ್ಳಿಗಳೊಂದಿಗೆ ಬಾಂಧವ್ಯ ಬೆಸೆಯುವ ಪ್ರಯತ್ನಕ್ಕಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ 3 ದಿನಗಳ ಪಾದಯಾತ್ರೆ ಶುಕ್ರವಾರ ಆರಂಭವಾಯಿತು. ಚಾಮರಾಜನಗರ ತಾಲೂಕಿನ ಅಮಚ ವಾಡಿ ಗ್ರಾಮದಲ್ಲಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಯನ್ನು ಆರಂಭಿಸಲಾ ಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಸಾಗಿತು. ನಂತರ ಚನ್ನಪ್ಪನ ಪುರ ಗ್ರಾಮಕ್ಕೆ ತೆರಳಿತು. ಈ ವೇಳೆ ಗ್ರಾಮದ ಯುವಕ ಮಲ್ಲಿಕಾರ್ಜುನ ಎಂಬಾತ…
ಇಂದು ಹೆಚ್.ಎಸ್. ಮಹದೇವಪ್ರಸಾದ್ ಒಂದು ನೆನಪು
January 11, 2020ಚಾಮರಾಜನಗರ, ಜ.10(ಎಸ್‍ಎಸ್)- ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಜನವರಿ 11 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನ ದಲ್ಲಿ ಮಾಜಿ ಸಚಿವರಾದ ಹೆಚ್.ಎಸ್. ಮಹದೇವಪ್ರಸಾದ್ ಒಂದು ನೆನಪು ಕಾರ್ಯಕ್ರಮ ಆಯೋಜಿಸಲಾಗಿದೆ. ಮಾಜಿ ಸಚಿವ ಕೃಷ್ಣಭೈರೇಗೌಡ ಕಾರ್ಯ ಕ್ರಮವನ್ನು ಉದ್ಘಾಟಿಸುವರು. ಆರ್. ಧ್ರುವ ನಾರಾಯಣ್ ನೇತೃತ್ವ ವಹಿಸುವರು. ಸಿ. ಪುಟ್ಟರಂಗಶೆಟ್ಟಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವರು. ಗೀತಾಮಹದೇವಪ್ರಸಾದ್ ಅವರಿಗೆ ಆರ್. ನರೇಂದ್ರ ಗೌರವ ಸಮರ್ಪಿ ಸುವರು. ಪಿ. ಮರಿಸ್ವಾಮಿ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ…
13 ಮೆಟ್ರಿಕ್ ಟನ್ ಅಕ್ರಮ ಮರಳು ವಶ
January 11, 2020ಚಾಮರಾಜನಗರ, ಜ.10- ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿ ಪಾತ್ರಕ್ಕೆ ಹೊಂದಿಕೊಂಡಿರುವ ಧನಗೆರೆ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 13 ಮೆಟ್ರಿಕ್ ಟನ್ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿಗೆ ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಗಣಿ ಇಲಾಖೆ ಉಪನಿರ್ದೇಶಕಿ ಡಾ.ಲಕ್ಷಮ್ಮ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದಾಗ ಒಂದು ಕಡೆ 5 ಮೆಟ್ರಿಕ್ ಟನ್ ಮರಳು ಮತ್ತೊಂದು ಕಡೆ 8 ಮೆಟ್ರಿಕ್ ಟನ್…