ಜಿಪಂ ಅಧ್ಯಕ್ಷೆ ಶಿವಮ್ಮ ರಾಜೀನಾಮೆ ವಾಪಸ್?
ಚಾಮರಾಜನಗರ

ಜಿಪಂ ಅಧ್ಯಕ್ಷೆ ಶಿವಮ್ಮ ರಾಜೀನಾಮೆ ವಾಪಸ್?

January 11, 2020

ಚಾಮರಾಜನಗರ, ಜ.10(ಎಸ್‍ಎಸ್)- ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಿವಮ್ಮ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀ ನಾಮೆಯನ್ನು ಶುಕ್ರವಾರ ವಾಪಸ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯ ದರ್ಶಿಗೆ ಡಿಸೆಂಬರ್ 30 ರಂದು ಶಿವಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಅಂಗೀ ಕಾರಕ್ಕೆ 15 ದಿನಗಳ ಕಾಲಾವಕಾಶವಿತ್ತು. ಈ ಅವಧಿಯೊಳಗೆ ರಾಜೀನಾಮೆಯನ್ನು ವಾಪಸ್ ಪಡೆಯಲು ಅವಕಾಶವಿತ್ತು. ಹೀಗಾಗಿ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ ಎಂದು ಉನ್ನತ ಮೂಲಗಳು ‘ಮೈಸೂರು ಮಿತ್ರ’ನಿಗೆ ಖಚಿತ ಪಡಿಸಿವೆ.

ಜಿಪಂನಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹು ಮತ ಇದೆ. ಆ ಪಕ್ಷದ ಅಧಿಕಾರ ಹಂಚಿಕೆ ಆಂತರಿಕ ಒಪ್ಪಂದದಂತೆ ಶಿವಮ್ಮ ಅವರ ಅಧಿಕಾರಾವಧಿ ಅಕ್ಟೋಬರ್‍ಗೆ ಕೊನೆ ಗೊಂಡಿದೆ. ವರಿಷ್ಠರು ರಾಜೀನಾಮೆ ಸಲ್ಲಿಸುವಂತೆ ಒತ್ತಡ ಹೇರಿದ್ದರಿಂದ ಡಿ.30 ರಂದು ರಾಜೀನಾಮೆ ಸಲ್ಲಿಸಿದ್ದರು. ಈಗ ರಾಜೀನಾಮೆ ವಾಪಸ್ ಪಡೆದಿರುವುದು ಕಾಂಗ್ರೆಸ್ ವರಿಷ್ಠರ ಕೋಪಕ್ಕೆ ಕಾರಣ ವಾಗಿದೆ. ಶಿವಮ್ಮ ಪ್ರಯಾಣಿಸುತ್ತಿದ್ದ ಸರ್ಕಾರಿ ಕಾರು ಚಿತ್ರದುರ್ಗ ಜಿಲ್ಲೆಯಲ್ಲಿ ಅಪಘಾತವಾಗಿತ್ತು. ಇದಕ್ಕೆ ತಗಲುವ ವೆಚ್ಚವನ್ನು ಶಿವಮ್ಮ ಅವರಿಂದಲೇ ಭರಿಸುವಂತೆ ಸರ್ಕಾರ ಆದೇಶಿಸಿತ್ತು. ಅವರಿಗೆ ನೀಡುವ ಸಂಬಳ ಹಾಗೂ ಇತರ ಭತ್ಯೆಗಳಲ್ಲಿ ಹಣವನ್ನು ಕಟಾವು ಮಾಡುವಂತೆ ಸರ್ಕಾರ ಆದೇಶದಲ್ಲಿ ತಿಳಿಸಿತ್ತು. ಹೀಗಾಗಿ ಶಿವಮ್ಮ ಅವರಿಗೆ ಏಳೆಂಟು ತಿಂಗಳಿನಿಂದ ಸಂಬಳ ಸೇರಿ ದಂತೆ ಇನ್ನಿತರ ಭತ್ಯೆಗಳನ್ನು ನೀಡಿರಲಿಲ್ಲ ಎನ್ನಲಾಗಿದೆ. ಇದನ್ನು ಕೊಡಿಸುವಂತೆ ಪಕ್ಷದ ವರಿಷ್ಠರಲ್ಲಿ ಹಾಗೂ ಪಕ್ಷದ ಜಿಪಂ ಸದಸ್ಯರಲ್ಲಿ ಶಿವಮ್ಮ ಮನವಿ ಮಾಡಿದ್ದರು. ಇದಕ್ಕೆ ವರಿಷ್ಠರು ಹಾಗೂ ಸದಸ್ಯರು ಸ್ಪಂದಿಸದಿದ್ದರಿಂದ ಅಸಮಾ ಧಾನಗೊಂಡು ಶಿವಮ್ಮ ರಾಜೀನಾಮೆ ಯನ್ನು ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಿವಮ್ಮ ಅವ ರನ್ನು ಸಂಪರ್ಕಿಸಲೆತ್ನಿಸಿದಾಗ ಅವರ ಮೊಬೈಲ್ ಸ್ವಿಚ್‍ಆಫ್ ಆಗಿತ್ತು.

Translate »