ಗುಂಡ್ಲುಪೇಟೆ, ಜ.5(ಸೋಮ್.ಜಿ)- ಕಬಿನಿ ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸಂಪೂರ್ಣ ವಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ಹೇಳಿದರು. ತಾಲೂಕಿನ ವಡ್ಡಗೆರೆ ಕೆರೆ ಭರ್ತಿಯಾಗಿ ರುವ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಹಳ ವರ್ಷಗಳಿಂದ ವಿಳಂಬವಾಗಿದ್ದ ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿ ಸುವ ಯೋಜನೆಯ ಜಾರಿ ಬಗ್ಗೆ ಹಲವ ರಿಗೆ ಅನುಮಾನವಿದ್ದುದು ಈ ಭಾಗದ ರೈತರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಹುತ್ತೂರಿನಿಂದ ವಡ್ಡಗೆರೆ ಕೆರೆಗೆ ನೀರು ತುಂಬಿಸುವ…
ಜ.11, ಹೆಚ್ಚೆಸ್ಸೆಂ ‘ಒಂದು ನೆನಪು’
January 6, 2020ಚಾಮರಾಜನಗರ, ಜ.5- ಮಾಜಿ ಸಚಿವ ದಿವಂಗತ ಎಚ್. ಎಸ್. ಮಹದೇವ ಪ್ರಸಾದ್ ಅವರ “ಒಂದು ನೆನಪು” ಕಾರ್ಯ ಕ್ರಮವನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಜ.11 ರಂದು ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳ ಲಾಗಿದೆ ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ್ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಎಚ್.ಎಚ್.ಮಹದೇವಪ್ರಸಾದ್ ಅವರ ನೆನಪು ಕಾರ್ಯಕ್ರಮದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಮಹದೇವಪ್ರಸಾದ್ ಅವರು ಜಿಲ್ಲೆಯ ಅಭಿವೃದ್ಧಿ ಹಾಗೂ ಗುಂಡ್ಲುಪೇಟೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಜಿಲ್ಲೆಯಲ್ಲಿ…
ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ದೀಪ ಧ್ಯಾನ ದಾನ ಕಾರ್ಯಕ್ರಮ
January 6, 2020ಚಾಮರಾಜನಗರ, ಜ.5- ಸ್ಥಳೀಯ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ದಿವ್ಯ ಅಲೌಕಿಕ ದಿನದರ್ಶಿಕೆ ಬಿಡುಗಡೆ ಹಾಗೂ ದೀಪ ಧ್ಯಾನ ದಾನ ಕಾರ್ಯ ಕ್ರಮವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದ ರಾಜಯೋಗ ವಿದ್ಯಾರ್ಥಿ ಗಳು ದೀಪ ಹಚ್ಚಿಕೊಂಡು ರಾಜ ಯೋಗಿನಿ ಬ್ರಹ್ಮಾಕುಮಾರಿ ದಾನೇ ಶ್ವರೀಜಿಯವರ ನೇತೃತ್ವದಲ್ಲಿ ತ್ರಾಟಕ ಯೋಗ ಧ್ಯಾನ ಮಾಡಿದರು. ಪರಸ್ಪರ ದಲ್ಲಿ ಒಬ್ಬರಿಗೊ ಬ್ಬರು ದೀಪವನ್ನು ಕೊಡುವ ಮತ್ತು ತೆಗೆದುಕೊಳ್ಳುವ ಮೂಲಕ ಅವರಲ್ಲಿರುವ ಪ್ರತಿಭೆ ಹಾಗೂ ವಿಶೇಷತೆ ಗುಣಗಳನ್ನು ನೋಡುವ ಅಭ್ಯಾಸ…
ಜಿಲ್ಲೆಯಲ್ಲಿ ‘2020’ಗೆ ಸಂಭ್ರಮದ ಸ್ವಾಗತ
January 2, 2020ಚಾಮರಾಜನಗರ, ಜ.1- ಜಿಲ್ಲಾದ್ಯಂತ ಜನರು 2020ನೇ ಹೊಸ ವರ್ಷವನ್ನು ಸಂಭ್ರಮ, ಸಡಗರ, ಭಕ್ತಿಯಿಂದ ಬರಮಾಡಿಕೊಂಡರು.ಮಂಗಳವಾರ ಮಧ್ಯರಾತ್ರಿ 12 ಗಂಟೆಯಾ ಗುತ್ತಿಂತೆ ಜಿಲ್ಲೆಯ ಜನರು ಪರಸ್ಪರ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವಿದ್ಯಾರ್ಥಿಗಳು ಮತ್ತು ಯುವ ಜನರು ತಮ್ಮ ಸ್ನೇಹಿತರಿಗೆ ಮತ್ತು ಆಪ್ತರಿಗೆ ಗ್ರಿಟಿಂಗ್ ಮೆಸೇಜï, ವೀಡಿಯೋ ಮೂಲಕ ಶುಭಾಶಯ ಕೋರಿದರು. ಇನ್ನು ಕೆಲವರು ಸಿಹಿ ಹಂಚಿ ಮತ್ತು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಮಹಿಳೆಯರು ಮತ್ತು ಯುವತಿಯರು ಮನೆಗಳ ಎದುರು ಬಣ್ಣದ ರಂಗೋಲಿ ಚಿತ್ತಾರ ಬಿಡಿಸಿ…
ಕರ್ತವ್ಯ ಮುಗಿಸಿ ತೆರಳುತ್ತಿದ್ದ ಪೇದೆ ಬೈಕ್‍ನಿಂದ ಬಿದ್ದು ಸಾವು
January 2, 2020ಕೊಳ್ಳೇಗಾಲ, ಜ.1(ನಾಗೇಂದ್ರ)- ಕರ್ತವ್ಯ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಬೈಕ್‍ನಲ್ಲಿ ಅಯತಪ್ಪಿ ಬಿದ್ದು ಪೆÇಲೀಸ್ ಪೇದೆಯೊ ಬ್ಬರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಜರುಗಿದೆ. ಗ್ರಾಮಾಂತರ ಪೆÇಲೀಸ್ ಠಾಣೆಯ ಪೇದೆ ಹಾಗೂ ಹನೂರು ಆರ್.ಎಸ್.ದೊಡ್ಡಿ ಬಡಾವಣೆಯ ಸಿದ್ದರಾಜು ಮೃತಪಟ್ಟ ಪೇದೆ. ಇವರು ಅಪರಾಧ ವಿಭಾಗದಲ್ಲಿ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡಿಸೆಂಬರ್ 31ರ ಹೊಸ ವರ್ಷದ ಗಸ್ತಿನ ಕರ್ತವ್ಯ ನಿರ್ವಹಿಸಿದ್ದರು. ಬುಧವಾರ ಬೆಳಗಿನ ಜಾವ ಮನೆಗೆ ಹಿಂತಿರುಗುವ ವೇಳೆ ಅಣಗಳ್ಳಿ ಸಮೀಪದಲ್ಲಿ ಬೈಕ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ…
ಆನೆಮಡು ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ಪ್ರತಿಭಟನೆ
January 2, 2020ಚಾಮರಾಜನಗರ, ಜ.1- ಆನೆಮಡುವಿನ ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿ ತಾಲೂಕಿನ ಉಡಿಗಾಲ, ವೀರನಪುರ, ಕಡುವಿನಕಟ್ಟೆಹುಂಡಿ ಗ್ರಾಮಸ್ಥರು ಚಾಮರಾಜನಗರ-ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಉಡಿಗಾಲ ಸಮೀಪ ಕೆರೆಗೆ ನೀರು ಹರಿಸುವ ಪೈಪ್‍ಲೈನ್ ಇರುವ ಚಾಮ ರಾಜನಗರ- ಗುಂಡ್ಲುಪೇಟೆ ಮುಖ್ಯರಸ್ತೆ ಯಲ್ಲಿ ಜಮಾಯಿಸಿದ ರೈತರು ಕೆಲಕಾಲ ರಸ್ತೆ ತಡೆ ನಡೆಸಿದರು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆ ದಾರರ ಜತೆ ಈಚೆಗೆ ಪೈಪ್‍ಲೈನ್ ಕಾಮ ಗಾರಿ ವೀಕ್ಷಣೆ ಮಾಡಿದ್ದ ಶಾಸಕ ಸಿ.ಪುಟ್ಟ ರಂಗಶೆಟ್ಟಿ ಹೊಸ ವರ್ಷದ ದಿನ ಪೈಪ್‍ಲೈನ್…
ಸಂತೇಮರಹಳ್ಳಿ-ಮೂಗೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
January 2, 2020ಚಾಮರಾಜನಗರ, ಜ.1- ತೀವ್ರ ಹದಗೆಟ್ಟಿರುವ ಸಂತೇಮರಹಳ್ಳಿ- ಮೂಗೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಯಳಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಮಾಜಿ ಸಂಸದರು ಮತ್ತು ಶಾಸಕರ ನೇತೃತ್ವದಲ್ಲಿ ಸಂತೇಮರಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಸಂತೇಮರಹಳ್ಳಿಯ ಪ್ರವಾಸಿ ಮಂದಿರದಿಂದ ಸಮೀಪದ ವೃತ್ತದ ತನಕ ಮಾಜಿ ಸಂಸದ ಆರ್.ಧ್ರುವನಾರಾಯಣ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸಂಚಾರ ತಡೆ ನಡೆಸಿ ರಾಜ್ಯ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಧ್ರುವನಾರಾಯಣ್ ಮಾತನಾಡಿ, 10 ಕಿ.ಮೀ….
ಗುಂಡ್ಲುಪೇಟೆಯಲ್ಲಿ ರೈತ ದಿನಾಚರಣೆ : ರೈತ, ಸೈನಿಕರ ನಿಸ್ವಾರ್ಥ ಸೇವೆಯಿಂದ ನಮಗೆ ನೆಮ್ಮದಿ
December 24, 2019ಗುಂಡ್ಲುಪೇಟೆ, ಡಿ.23(ಸೋಮ್.ಜಿ)- ರೈತರ ಸಮಗ್ರ ಅಭಿವೃದ್ಧಿ ನಮ್ಮ ಸರ್ಕಾರದ ಧ್ಯೇಯವಾಗಿದೆ. ರೈತ ಹಾಗೂ ಸೈನಿಕ ದೇಶದ ಎರಡು ಕಣ್ಣುಗಳಿದ್ದಂತೆ. ಅವರ ನಿಸ್ವಾರ್ಥ ಸೇವೆಯಿಂದ ನಾವು ಸುಖ ವಾಗಿದ್ದೇವೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ಪಟ್ಟಣದ ಗುರುಭವನದಲ್ಲಿ ಕೃಷಿ ಇಲಾಖೆ ಮತ್ತು ರೈತ ಸಂಘದ ವತಿಯಿಂದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ದೇಶದ ಬೆನ್ನೆಲುಬು ರೈತ. ಈತ ಮುನಿಸಿಕೊಂಡರೆ ಯಾರಿಗೂ ಆಹಾರ ದೊರಕುವುದಿಲ್ಲ. ಆದ್ದರಿಂದ ರೈತರ ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ ಇರಬೇಕು. ನಮ್ಮ…
ಆರೋಗ್ಯವಂತ ಸಮಾಜಕ್ಕೆ ಎಲ್ಲರ ಸಹಕಾರ ಅಗತ್ಯ
December 24, 2019ಯಳಂದೂರು, ಡಿ.23(ವಿ.ನಾಗರಾಜು)- ಆರೋಗ್ಯ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮಾಜಿ ಶಾಸಕ ಎಸ್. ಬಾಲರಾಜು ಕರೆ ನೀಡಿದರು. ಅವರು ಭಾನುವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಎಸ್. ಬಾಲರಾಜು ಸ್ನೇಹ ಬಳಗ, ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರೆಯ ವತಿಯಿಂದ ಆಯೋಜಿಸಿದ್ದ ಬೃಹತ್ ಉಚಿತ ಕಣ್ಣಿನ ತಪಾಸಣಾ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಳ್ಳೆ ಕಾರ್ಯಗಳನ್ನು ಮಾಡಬೇಕಾದರೆ ಇದಕ್ಕೆ ಇಂತಹದೆ ದಿನ, ಸಮಯವನ್ನು ನಿಗದಿ ಮಾಡಿಕೊಳ್ಳಬಾರದು. ತಕ್ಷಣವೇ ಇದರ ಬಗ್ಗೆ ಕಾರ್ಯಪ್ರವೃತ್ತ ರಾಗಬೇಕು. ಇದೊಂದು ಸೇವಾ ಕಾರ್ಯವಾಗಿದ್ದು…
ಡಿ. 27, ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ
December 24, 2019ಚಾಮ ರಾಜನಗರ, ಡಿ.23- ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಸ್ಥಾನದ ಗೋಲಕಗಳ ಹಣ ಎಣಿಕೆ ಕಾರ್ಯವು ಡಿ.27 ರಂದು ಬೆಳಿಗ್ಗೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಸಹಯೋಗದೊಂದಿಗೆ ನಡೆಯಲಿದೆ ಎಂದು ಶ್ರೀ ಮಲೆ ಮಹ ದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ.










