ಜಿಲ್ಲೆಯಲ್ಲಿ ‘2020’ಗೆ ಸಂಭ್ರಮದ ಸ್ವಾಗತ
ಚಾಮರಾಜನಗರ

ಜಿಲ್ಲೆಯಲ್ಲಿ ‘2020’ಗೆ ಸಂಭ್ರಮದ ಸ್ವಾಗತ

January 2, 2020

ಚಾಮರಾಜನಗರ, ಜ.1- ಜಿಲ್ಲಾದ್ಯಂತ ಜನರು 2020ನೇ ಹೊಸ ವರ್ಷವನ್ನು ಸಂಭ್ರಮ, ಸಡಗರ, ಭಕ್ತಿಯಿಂದ ಬರಮಾಡಿಕೊಂಡರು.ಮಂಗಳವಾರ ಮಧ್ಯರಾತ್ರಿ 12 ಗಂಟೆಯಾ ಗುತ್ತಿಂತೆ ಜಿಲ್ಲೆಯ ಜನರು ಪರಸ್ಪರ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವಿದ್ಯಾರ್ಥಿಗಳು ಮತ್ತು ಯುವ ಜನರು ತಮ್ಮ ಸ್ನೇಹಿತರಿಗೆ ಮತ್ತು ಆಪ್ತರಿಗೆ ಗ್ರಿಟಿಂಗ್ ಮೆಸೇಜï, ವೀಡಿಯೋ ಮೂಲಕ ಶುಭಾಶಯ ಕೋರಿದರು.

ಇನ್ನು ಕೆಲವರು ಸಿಹಿ ಹಂಚಿ ಮತ್ತು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಮಹಿಳೆಯರು ಮತ್ತು ಯುವತಿಯರು ಮನೆಗಳ ಎದುರು ಬಣ್ಣದ ರಂಗೋಲಿ ಚಿತ್ತಾರ ಬಿಡಿಸಿ ಹೊಸ ವರ್ಷವನ್ನು ಸ್ವಾಗತಿ ಸಿದರು. ಯುವಕರು ಸುಣ್ಣ ಮತ್ತು ಬಣ್ಣದಿಂದ ರಸ್ತೆಗಳ ಮೇಲೆ ಹೊಸ ವರ್ಷದ ಶುಭಾ ಶಯಗಳನ್ನು ಕೋರಿದ್ದು ಕಂಡುಬಂತು.

ಹೊಸ ವರ್ಷದ ಮೊದಲ ದಿನ ಹಲವರು ಹೊಸ ಬಟ್ಟೆತೊಟ್ಟು ಸಮೀಪದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಇನ್ನು ಕೆಲವರು ಕುಟುಂಬ ಸಮೇತ ಮಲೆ ಮಹದೇಶ್ವರನ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಪಾರ್ವತಿ ಬೆಟ್ಟ, ಕುರುಬನಕಟ್ಟೆ ಕ್ಷೇತ್ರ, ಶಿವನ ಸಮುದ್ರದ ಸಮೂಹ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದರು.

ಕ್ರೈಸ್ತರು ಚರ್ಚ್‍ಗಳಲ್ಲಿ ಹೊಸ ವರ್ಷ ಆಚರಣೆ ಮಾಡಿ ಸಂಭ್ರಮ ಆಚರಿಸಿದರು. ಯುವಜನರು ಹೋಟೆಲï, ರೆಸಾಟರ್ï, ಡಾಬಾಗಳಲ್ಲಿ ಪಾರ್ಟಿ ಮಾಡಿ ಸಂಭ್ರಮಿಸಿದರು.

Welcome to the 2020's in chamarajanagar district-1

ಪಟ್ಟಣದ ಜನರು ಶ್ರೀ ಚಾಮರಾಜೇ ಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರೆ, ಗ್ರಾಮೀಣ ಜನರು ಯಡಪುರ ಸಮೀಪದ ಮಹದೇಶ್ವರ ದೇಗುಲ, ಹರದನಹಳ್ಳಿಯ ದಿವ್ಯಲಿಂಗೇಶ್ವರ, ಸಂತೇಮರಹಳ್ಳಿಯ ಮಹದೇಶ್ವರ ದೇವಾಲಯ, ಮಂಗಲ ಗ್ರಾಮದ ಶಂಕರ ದೇವರ ಬೆಟ್ಟ, ಕೂಡ್ಲೂರು ಗ್ರಾಮದ ಮಂಟೇಸ್ವಾಮಿ ದೇವಾಲಯ, ಕುದೇರು ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ, ಕಾವಿ ಬಸವೇಶ್ವರ, ಚಂದಕ ವಾಡಿಯ ಲಕ್ಷ್ಮೀದೇವಿ ದೇಗು ಲಗಳಿಗೆ ಪೂಜೆ ಸಲ್ಲಿಸಿದರು.

ಗುಂಡ್ಲುಪೇಟೆ ವರದಿ (ಸೋಮ್.ಜಿ): ಹೊಸ ವರ್ಷದ ಮೊದಲನೆಯ ದಿನವಾದ ಬುಧವಾರ ಹಿಮ ವದ್ ಗೋಪಾಲಸ್ವಾಮಿ ಬೆಟ್ಟ, ಪಾರ್ವತಿ ಬೆಟ್ಟ, ಹುಲುಗಿನ ಮುರಡಿ ವೆಂಟಕರಮಣ ಸ್ವಾಮಿ ಬೆಟ್ಟ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ತೆರಳಿದ ಭಕ್ತರು ಪೂಜೆ ಸಲ್ಲಿಸುವುದರೊಂದಿಗೆ ನೂತನ ವರ್ಷವನ್ನು ಸ್ವಾಗತಿಸಿದರು.

ಪಟ್ಟಣದ ಶ್ರೀರಾಮೇಶ್ವರ ದೇವಸ್ಥಾನ, ವಿಜಯನಾರಾಯಣ, ಆಂಜನೇಯ ಸ್ವಾಮಿ, ಬಲಮುರಿ ಗಣಪತಿ ದೇವಸ್ಥಾನ, ಸರ್ವಶಕ್ತಿ ಸಿದ್ದಿ ವಿನಾಯಕ ದೇವ ಸ್ಥಾನ, ಮಹದೇ ಶ್ವರ ದೇವಸ್ಥಾನ ಹಾಗೂ ಅಯ್ಯಪ್ಪ ದೇವಸ್ಥಾನ ಸೇರಿದಂತೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಹುಲುಗಿನ ಮುರಡಿ ವೆಂಕಟರಮಣ ಸ್ವಾಮಿಬೆಟ್ಟ, ಸ್ಕಂದಗಿರಿ ಪಾರ್ವತಾಂಬಾ ದೇವಸ್ಥಾನ, ತ್ರಿಯಂಭಕೇಶ್ವರ ದೇವಸ್ಥಾನ, ಬೆರಟಹಳ್ಳಿ ಅಕ್ಷಯ ಮಹದೇಶ್ವರ ದೇವ ಸ್ಥಾನ, ಕೆಬ್ಬೆಕಟ್ಟೆ ಶನೇಶ್ವರ ದೇವಸ್ಥಾನ, ದುಂದಾಸನಪುರ ಮಲೆ ಮಹದೇಶ್ವರ ಹಾಗೂ ತಾಳವಾಡಿ ಪಿರ್ಕಾಗೆ ಸೇರಿದ ಕೊಂಗಳ್ಳಿ ಮಲ್ಲಿಕಾರ್ಜುನ ದೇವಸ್ಥಾನಗಳಿಗೆ ವಿವಿಧೆಡೆಯಿಂದ ಆಗಮಿಸಿದ ಅಸಂಖ್ಯಾತ ಭಕ್ತರು ನೂತನ ವರ್ಷವು ತಮ್ಮ ಕುಟುಂಬಕ್ಕೆ ಹಾಗೂ ನಾಡಿಗೆ ಶುಭವನ್ನುಂಟು ಮಾಡಲಿ ಎಂದು ಪ್ರಾರ್ಥಿಸಿದರು.

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭಕ್ತರ ದಂಡು: ಬಂಡೀಪುರ ಹುಲಿ ಯೋಜನೆಯ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿದ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಪಟ್ಟಣದ ಸಾರಿಗೆ ಡಿಪೆÇೀದಿಂದ ಹೆಚ್ಚುವರಿಯಾಗಿ 25 ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು. ಹೊಸ ವರ್ಷಾಚರಣೆಗೆ ಊಟಿಗೆ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರು ಬಂಡೀಪುರಕ್ಕೆ ಭೇಟಿ ನೀಡಿ ಪ್ರಕೃತಿ ಸೌಂದರ್ಯ ಸವಿದರು.

ಬೆರಟಹಳ್ಳಿ ಗ್ರಾಮಸ್ಥರು ಕಳೆದ 23 ವರ್ಷ ಗಳಿಂದ ನೂತನ ವರ್ಷಾರಂಭದಂದು ಅಕ್ಷಯ ಮಹದೇಶ್ವರ ದೇವಸ್ಥಾನದಲ್ಲಿ ಆರಾ ಧನೆ ನಡೆಸುತ್ತಿದ್ದಾರೆ. ಇಲ್ಲಿಗೆ ಆಗಮಿಸಿದ ಭಕ್ತರ ಮನದ ಬಯಕೆಗಳು ಈಡೇರುತ್ತದೆ ಎಂದು ಪ್ರತೀತಿ ಇದ್ದು, ಪ್ರತಿ ವರ್ಷವೂ ಭಕ್ತರ ಸಂಖ್ಯೆ ಹೆಚ್ಚಾಗು ತ್ತಿದೆ. ಇದಲ್ಲದೇ ತಾಲೂಕಿನ ಇಂಗಲವಾಡಿ, ಮಲ್ಲಯ್ಯನಪುರ ಮುಂತಾದ ಗ್ರಾಮಗಳ ಮಹದೇಶ್ವರ ದೇವಸ್ಥಾನಗಳಲ್ಲಿಯೂ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಪ್ರವಾಸಿಗರ ಸಂಖ್ಯೆ ಇಳಿಮುಖ: ಹೊಸ ವರ್ಷದ ಮೊದಲ ದಿನವಾದ ಬುಧವಾರ ಬಂಡೀಪುರದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಕಳೆದ ಒಂದು ವಾರಕ್ಕೆ ಹೋಲಿಸಿದರೆ ಹೊಸವರ್ಷ ದಂದು ಪ್ರವಾಸಿಗರ ಸಂಖ್ಯೆ ತುಸು ಇಳಿಮುಖವಾಗಿತ್ತು. ಸುತ್ತಮುತ್ತಲ ರೆಸಾರ್ಟುಗಳಲ್ಲಿ ಉಳಿದಿದ್ದ ಪ್ರವಾಸಿಗರು ಮಾತ್ರ ಆಗಮಿಸಿದ್ದರು. ರೆಸಾರ್ಟುಗಳಲ್ಲಿ ಅಬ್ಬರದ ಸಂಗೀತ ಹಾಗೂ ಧ್ವನಿವರ್ಧಕ ಬಳಕೆಗೆ ಕಟ್ಟುನಿಟ್ಟಿನ ಕಡಿವಾಣ ಹಾಕಿದ್ದರಿಂದ ಕೆಲವೇ ಪ್ರವಾಸಿಗಳು ಮಾತ್ರ ಸಫಾರಿಗೆ ಆಗಮಿಸಿದ್ದರು.

Translate »