ಸ್ವಚ್ಛತೆಗೆ ಆದ್ಯತೆ ನೀಡಲು ಪೌರಾಯುಕ್ತ ಮನವಿ
ಮಂಡ್ಯ

ಸ್ವಚ್ಛತೆಗೆ ಆದ್ಯತೆ ನೀಡಲು ಪೌರಾಯುಕ್ತ ಮನವಿ

January 2, 2020

ಮಂಡ್ಯ, ಜ.1(ನಾಗಯ್ಯ)- ಕಸಮುಕ್ತ ಮಂಡ್ಯ ಮಾಡುವ ನಗರಸಭೆಯ ಕನಸಿಗೆ ಪೂರಕವಾಗಿ ನಾಗರಿಕರು ಸ್ವಚ್ಛತೆಗೆ ಹೆಚ್ಚು ಆದÀ್ಯತೆ ನೀಡಬೇಕು ಎಂದು ನಗರಸಭೆ ಪೌರಾ ಯುಕ್ತ ಲೋಕೇಶ್ ಮನವಿ ಮಾಡಿದರು.

ನಗರದ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ಉದ್ಯಾನವನದಲ್ಲಿ ಬುಧವಾರ ನೂತನ ವರ್ಷದ ಸಂಭ್ರಮಾಚರಣೆ ಅಂಗವಾಗಿ ಪೌರಕಾರ್ಮಿಕರು ಆಯೋ ಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹಾತ್ಮಾ ಗಾಂಧೀಜಿ ಅವರು ಕಂಡ ಸ್ವಚ್ಛತೆಯ ಕನಸನ್ನು ನನಸಾಗಿಸಲು ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ. ನಗರಸಭೆ ಪೌರ ಕಾರ್ಮಿಕರಷ್ಟೇ ನಾಗರಿಕರು ಸ್ವಚ್ಛತೆ ಹಾಗೂ ನೀರಿನ ಮಿತವ್ಯಯಕ್ಕೆ ಆದÀ್ಯತೆ ನೀಡಿದಾಗ ಮಾತ್ರ ಕಸಮುಕ್ತ ಮಂಡ್ಯ ಮಾಡಲು ಸಾಧ್ಯವಾಗು ತ್ತದೆ. 2020ನೇ ವರ್ಷದಲ್ಲಿ ಕಸ ವಿಲೇ ವಾರಿಯಲ್ಲಿ ನಾಗರಿಕರು ನಗರಸಭೆ ಸಿಬ್ಬಂದಿ ಗಳೊಂದಿಗೆ ಕೈ ಜೋಡಿಸಬೇಕು. ಒಣ ಕಸ ಹಾಗೂ ಹಸಿಕಸವನ್ನು ಮೂಲದಲ್ಲೇ ಬೇರ್ಪಡಿಸಿ ಸಹಕರಿಸಬೇಕು ಎಂದರು.

ನಗರಸಭೆ ಸದಸ್ಯ ಶ್ರೀಧರ್ ಮಾತ ನಾಡಿ, ನಗರವನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಿದೆ. ಹೊಸ ವರ್ಷದ ಮೊದಲ ದಿನ ಅವರನ್ನು ಅಭಿನಂದಿಸಿ ಕಾರ್ಮಿಕರೊಂದಿಗೆ ಸಂಭ್ರಮಾ ಚರಣೆ ಮಾಡುತ್ತಿರುವುದು ಶ್ಲಾಘನೀಯ. ಪೌರಕಾರ್ಮಿಕರ ಕಾಯಕ ಶಕ್ತಿ ಅಪಾರ ವಾದದ್ದು ಎಂದು ಬಣ್ಣಿಸಿದರು.

ಈ ವೇಳೆ ನಗರಸಭೆ ಸದಸ್ಯರಾದ ಜಿ.ಕೆ. ಶ್ರೀನಿವಾಸ್, ಸೌಭಾಗ್ಯ, ರಜನಿ, ಲಲಿತಾ, ರಾಮಲಿಂಗಯ್ಯ, ಜೆಡಿಎಸ್ ಮುಖಂಡ ಎಂ.ಆರ್.ಮಂಜುನಾಥ್, ಕಾಯಕ ಯೋಗಿ ಫೌಂಡೇಷನ್ ಅಧ್ಯಕ್ಷ ಎಂ. ಶಿವಕುಮಾರ್, ಅಧಿಕಾರಿಗಳಾದ ಮೀನಾಕ್ಷಿ, ಚಲುವರಾಜ್, ಪ್ರಕಾಶ್, ಗೋವಿಂದ ರಾಜ್, ಮುಖಂಡರಾದ ಬಿ.ಎಸ್. ಅನುಪಮಾ, ಬಿ.ಕೆ.ಅರುಣ ಜ್ಯೋತಿ, ನಂಜುಂಡ ಉಪಸ್ಥಿತರಿದ್ದರು.

Translate »