ವಿದ್ಯಾರ್ಥಿ ಜೀವನಕ್ಕೆ ಪುಸ್ತಕಗಳ ಪಾತ್ರ ಮುಖ್ಯ
ಮಂಡ್ಯ

ವಿದ್ಯಾರ್ಥಿ ಜೀವನಕ್ಕೆ ಪುಸ್ತಕಗಳ ಪಾತ್ರ ಮುಖ್ಯ

January 2, 2020

ಭಾರತೀನಗರ, ಜ.1(ಅ.ಸತೀಶ್)- ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮಂಡ್ಯದ ಶಂಕರೇಗೌಡ ಶಿಕ್ಷಣ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕಿ ಡಾ.ವಿ.ಡಿ. ಸುವರ್ಣ ಹೇಳಿದರು.

ಇಲ್ಲಿನ ಭಾರತೀಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ, ಭಾರತೀ ಕಾಲೇಜಿನ ಓದುಬರಹ ಒಕ್ಕೂಟ, ಜಾಣ- ಜಾಣೆಯರ ಬಳಗದಿಂದ ನಡೆದ ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಾ ಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರಿಂದ ಜ್ಞಾನದ ಜೊತೆಗೆ ವಿವೇಕ, ವಿನಯ, ಸಂಸ್ಕಾರವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಯ ಜೀವನದಲ್ಲಿ ಸ್ನೇಹಿತರು ದಾರಿ ತಪ್ಪಿಸಬಹುದು. ಆದರೆ, ಪುಸ್ತಕ ವ್ಯಾಸಂಗ ಮಾಡು ವುದರಿಂದ ಎಂದಿಗೂ ದಾರಿ ತಪ್ಪುವುದಿಲ್ಲ. ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂದು ತಿಳಿಸಿದರು.

ಪ್ರಾಂಶುಪಾಲ ಪ್ರೊ.ಮಾಯೀಗೌಡ ಮಾತನಾಡಿ, ಕಂಪ್ಯೂಟರ್ ಯುಗದಲ್ಲಿ ಪುಸ್ತಕಗಳು ಏಕೆ ಎಂದು ಕೆಲವರು ಪ್ರಶ್ನಿಸುತ್ತಾರೆ. ಎಲ್ಲವನ್ನು ಅಂತರ್ಜಾಲದಲ್ಲೇ ತಿಳಿದುಕೊಳ್ಳಬಹುದು ಎಂಬುವುದು ಕೆಲವರ ತಪ್ಪು ಕಲ್ಪನೆಯಾಗಿದೆ. ಪುಸ್ತಕದ ಮಹತ್ವವನ್ನು ಅರಿತವರಿಗೆ ಮಾತ್ರ ಅದರ ಬೆಲೆ ತಿಳಿಯುತ್ತದೆ. ಹಾಗಾಗಿ, ತಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಗುಣಮಟ್ಟದ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಿ ಎಂದರು.

ಉಪನ್ಯಾಸಕ ಪ್ರೊ.ಮಾ.ರಾಮಕೃಷ್ಣ ಮಾತನಾಡಿದರು. ಕಾಲೇಜಿನ 22 ವಿದ್ಯಾರ್ಥಿಗಳು ತಾವು ಮೆಚ್ಚಿದ ಪುಸ್ತಕ ಗಳನ್ನು ಕುರಿತು ಮಾತನಾಡಿದರು. ಇವರುಗಳಲ್ಲಿ ದ್ವಿತೀಯ ಬಿಎಸ್‍ಸಿ ಜಿ.ಎನ್.ಸಿಂಧೂರಾಣಿ, ಅಂತಿಮ ಬಿಎ ಬಿ.ಎನ್.ಸಂತೋಷ್, ದ್ವಿತೀಯ ಬಿಎಸ್‍ಸಿ ಕೆ.ವಿ. ವರಲಕ್ಷ್ಮಿ, ಅಂತಿಮ ಬಿಕಾಂ ಬಿ.ಎನ್.ಶೃತಿ, ಪ್ರಥಮ ಬಿಎ ಐಶ್ವರ್ಯ ಬಹುಮಾನ ಗಳಿಸಿದರು.

ತೀರ್ಪುಗಾರರಾಗಿ ಮುಖ್ಯಶಿಕ್ಷಕ ಎಂ.ಮಾಯಪ್ಪ, ಉಪನ್ಯಾಸಕರಾದ ಎಂ.ಎಸ್.ಮಹದೇವಸ್ವಾಮಿ, ಎ.ಆರ್. ಕಾವ್ಯ ಭಾಗವಹಿಸಿದ್ದರು. ಈ ವೇಳೆ ವಿವಿಧ ಲೇಖಕರು ರಚಿಸಿದ ಉತ್ತಮ ಪುಸ್ತಕಗಳನ್ನು ಬಿಡುಗಡೆ ಮಾಡ ಲಾಯಿತು. ವೇದಿಕೆಯಲ್ಲಿ ಕಾಲೇಜಿನ ಪ್ರೊ.ಬಿ.ಎಸ್. ಬೋರೇಗೌಡ, ಮುಖಂಡರಾದ ಶಿವಸ್ವಾಮಿ, ಡಾ. ಶಿವಸ್ವಾಮಿ, ಸಂಜೀವ್ ಸೇರಿದಂತೆ ಇತರರಿದ್ದರು.

Translate »