ಕರ್ತವ್ಯ ಮುಗಿಸಿ ತೆರಳುತ್ತಿದ್ದ ಪೇದೆ ಬೈಕ್‍ನಿಂದ ಬಿದ್ದು ಸಾವು 
ಚಾಮರಾಜನಗರ

ಕರ್ತವ್ಯ ಮುಗಿಸಿ ತೆರಳುತ್ತಿದ್ದ ಪೇದೆ ಬೈಕ್‍ನಿಂದ ಬಿದ್ದು ಸಾವು 

January 2, 2020

ಕೊಳ್ಳೇಗಾಲ, ಜ.1(ನಾಗೇಂದ್ರ)- ಕರ್ತವ್ಯ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಬೈಕ್‍ನಲ್ಲಿ ಅಯತಪ್ಪಿ ಬಿದ್ದು ಪೆÇಲೀಸ್ ಪೇದೆಯೊ ಬ್ಬರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಜರುಗಿದೆ.

ಗ್ರಾಮಾಂತರ ಪೆÇಲೀಸ್ ಠಾಣೆಯ ಪೇದೆ ಹಾಗೂ ಹನೂರು ಆರ್.ಎಸ್.ದೊಡ್ಡಿ ಬಡಾವಣೆಯ ಸಿದ್ದರಾಜು ಮೃತಪಟ್ಟ ಪೇದೆ. ಇವರು ಅಪರಾಧ ವಿಭಾಗದಲ್ಲಿ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡಿಸೆಂಬರ್ 31ರ ಹೊಸ ವರ್ಷದ ಗಸ್ತಿನ ಕರ್ತವ್ಯ ನಿರ್ವಹಿಸಿದ್ದರು. ಬುಧವಾರ ಬೆಳಗಿನ ಜಾವ ಮನೆಗೆ ಹಿಂತಿರುಗುವ ವೇಳೆ ಅಣಗಳ್ಳಿ ಸಮೀಪದಲ್ಲಿ ಬೈಕ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೆÇಲೀಸರು ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪೇದೆ ಸಿದ್ದರಾಜು ಸಾವಿಗೀಡಾದ ಹಿನ್ನೆಲೆ ಚಾ.ನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ಹನೂರು ಶಾಸಕ ಆರ್.ನರೇಂದ್ರ, ಎಸ್ಪಿ ಆನಂದ್‍ಕುಮಾರ್, ಡಿವೈಎಸ್ಪಿ  ನವೀನ್ ಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀಕಾಂತ್, ಉಪ ನೀರಿಕ್ಷಕರುಗಳಾದ ರಾಜೇಂದ್ರ, ಅಶೋಕ್ ಇನ್ನಿತರರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.

 

Translate »