ವಡ್ಡಗೆರೆ ಕೆರೆಗೆ ಶಾಸಕ ನಿರಂಜನ್ ಬಾಗಿನ 
ಚಾಮರಾಜನಗರ

ವಡ್ಡಗೆರೆ ಕೆರೆಗೆ ಶಾಸಕ ನಿರಂಜನ್ ಬಾಗಿನ 

January 6, 2020

ಗುಂಡ್ಲುಪೇಟೆ, ಜ.5(ಸೋಮ್.ಜಿ)- ಕಬಿನಿ ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸಂಪೂರ್ಣ ವಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ಹೇಳಿದರು.

ತಾಲೂಕಿನ ವಡ್ಡಗೆರೆ ಕೆರೆ ಭರ್ತಿಯಾಗಿ ರುವ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಹಳ ವರ್ಷಗಳಿಂದ ವಿಳಂಬವಾಗಿದ್ದ ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿ ಸುವ ಯೋಜನೆಯ ಜಾರಿ ಬಗ್ಗೆ ಹಲವ ರಿಗೆ ಅನುಮಾನವಿದ್ದುದು ಈ ಭಾಗದ ರೈತರ ಆತಂಕಕ್ಕೆ ಕಾರಣವಾಗಿತ್ತು.

ಆದರೆ ಹುತ್ತೂರಿನಿಂದ ವಡ್ಡಗೆರೆ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ ನಂತರ ಈ ಭಾಗದ ಜನರಲ್ಲಿ ವಿಶ್ವಾಸ ಮೂಡಿದೆ. ಕಳೆದ 15 ದಿನದಲ್ಲಿ ವಡ್ಡಗೆರೆ ಕೋಡಿ ಬಿದ್ದು ಮುಂದಿನ ಕೆರೆಗ ಳಿಗೂ ಹರಿಯುತ್ತಿದೆ. ಬಹಳ ದಿನಗಳಿಂದ ತೀವ್ರ ನಿರೀಕ್ಷೆಯಲ್ಲಿದ್ದ ಬೇಡಿಕೆ ಈಡೇರಿದ್ದರಿಂದ ರೈತರ ಮುಖದಲ್ಲಿ ಸಂಭ್ರಮ ಕಾಣುತ್ತಿದೆ. ಗ್ರಾಮಸ್ಥರ ಬಯಕೆಯಂತೆ ಗಂಗಾಪೂಜೆ ನೆರವೇರಿಸಿ ಬಾಗಿನ ಸಲ್ಲಿಸಿರು ವುದರಿಂದ ಉಳಿದ ಗ್ರಾಮಗಳ ರೈತರಿಗೆ ತಮ್ಮೂರ ಕೆರೆಗಳಿಗೂ ನೀರು ತುಂಬುವ ಭರವಸೆಯುಂಟಾಗಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ 212 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಲ್ಲಿ ಹುತ್ತೂರು ಕೆರೆಯೂ ಸೇರಿತ್ತು. ನಂತರ ಮುಂದುವರೆದ ಯೋಜನೆಯಲ್ಲಿ 11 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಇದೇ ಮಾರ್ಗದಲ್ಲಿ ಬರುವ ಸೋಮನಪುರ, ದೇಪಾಪುರ, ಕುಂದಕೆರೆ, ಚಿರಕನಹಳ್ಳಿ ಮುಂತಾದ ಕೆರೆಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸುವಂತೆ ರೈತರಿಂದ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕೆರೆಗಳನ್ನೂ ಸೇರಿಸಲು ಕ್ರಮಕೈಗೊಳ್ಳಲಾ ಗುವುದು ಎಂದರು.

ಈ ವೇಳೆ ದೇಪಾಪುರ ಮಠಾಧ್ಯಕ್ಷರಾದ ಶ್ರೀ ಬಸವಣ್ಣಸ್ವಾಮೀಜಿ, ಬಿಜೆಪಿ ಮಂಡಲಾ ಧ್ಯಕ್ಷ ದೊಡ್ಡಹುಂಡಿ ಜಗದೀಶ್, ಕಿಸಾನ್ ಮೊರ್ಚಾ ಅಧ್ಯಕ್ಷ ನಾಗಮಲ್ಲಪ್ಪ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ನಂದೀಶ್, ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ಮಾಡ್ರಹಳ್ಳಿ ನಾಗೇಂದ್ರ, ಹಾಪ್‍ಕಾಮ್ಸ್ ಜಿಲ್ಲಾಧ್ಯಕ್ಷ ಶಾಂತಪ್ಪ, ರೈತ ಮುಖಂಡ ಸಂಪತ್ತು, ಅಭಿಷೇಕ್ ಗುಡಿಮನೆ, ವೃಷಭೇಂದ್ರ, ನಾಗಪ್ಪ, ಮಹದೇವಸ್ವಾಮಿ, ಸೇರಿದಂತೆ ಇತರರು ಇದ್ದರು.

 

Translate »