ಹಂಡ್ರಕಳ್ಳಿಮೋಳೆಯಲ್ಲಿ ರಸ್ತೆ, ಚರಂಡಿ ಕಾಮಗಾರಿ ಕಳಪೆ: ಗ್ರಾಮಸ್ಥರ ಪ್ರತಿಭಟನೆ
ಚಾಮರಾಜನಗರ

ಹಂಡ್ರಕಳ್ಳಿಮೋಳೆಯಲ್ಲಿ ರಸ್ತೆ, ಚರಂಡಿ ಕಾಮಗಾರಿ ಕಳಪೆ: ಗ್ರಾಮಸ್ಥರ ಪ್ರತಿಭಟನೆ

January 6, 2020

ಚಾಮರಾಜನಗರ, ಜ.5- ತಾಲೂಕಿನ ಹಂಡ್ರಕಳ್ಳಿಮೋಳೆಯಲ್ಲಿ ನಿರ್ಮಿಸಿರುವ ಸಿಮೆಂಟ್ ರಸ್ತೆ, ಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಿಂಗರಾಜು ನೇತೃತ್ವದಲ್ಲಿ ಜಮಾಯಿಸಿದ್ದ ಪ್ರತಿಭಟನಾನಿರತರು ಗುತ್ತಿಗೆದಾರ, ಇಂಜಿನಿಯರ್ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಿಂಗರಾಜು ಮಾತನಾಡಿ, ಶಾಸಕ ಸಿ.ಪುಟ್ಟ ರಂಗಶೆಟ್ಟಿ ಅವರು ತಮ್ಮ ಅನುದಾನದಲ್ಲಿ ಹಂಡ್ರಕಳ್ಳಿಮೋಳೆ ಗ್ರಾಮದಲ್ಲಿ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣಕ್ಕಾಗಿ 70 ಲಕ್ಷ ರೂ. ನೀಡಿದ್ದರು. ಆದರೆ ಗುತ್ತಿಗೆದಾರ, ಪಿಡಬ್ಲೂಡಿ ಇಂಜಿನಿ ಯರ್ ಸೇರಿಕೊಂಡು ಗ್ರಾಮದಲ್ಲಿ ಕಳಪೆ ಕಾಮಗಾರಿ ಮಾಡಿದ್ದು, ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿ ಕೊಳಚೆ ನೀರು ಹರಿದು ಹೋಗದೆ ಚರಂಡಿಯಲ್ಲಿ ತುಂಬಿಕೊಂಡು ಗಬ್ಬುನಾರುತ್ತಿದೆ. ಇದರಿಂದ ಜನತೆಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.

ಕ್ರಿಯಾಯೋಜನೆ ಪ್ರಕಾರ ಚರಂಡಿ, ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ಮಾಣ ಮಾಡಿಲ್ಲ. ಕಾಮಗಾರಿ ಪೂರ್ಣ ಗೊಳಿಸಿಲ್ಲ. ಕಾಮಗಾರಿ ತುಂಬಾ ಕಳಪೆಯಿಂದ ಕೂಡಿದೆ. ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಕಳಪೆ ಕಾಮಗಾರಿ ಮಾಡಿರುವ ಇಂಜಿನಿಯರ್ ಅವರನ್ನು ಅಮಾನತ್ತುಪಡಿಸಬೇಕು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ಅಪೂರ್ಣ ಗೊಂಡಿರುವ ರಸ್ತೆ, ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ದರು. ಪ್ರತಿಭಟನೆಯಲ್ಲಿ ಯಜಮಾನರಾದ ನಿಂಗಶೆಟ್ಟಿ, ಬಸವಶೆಟ್ಟಿ, ಸೋಮಣ್ಣ, ಮುಖಂಡರಾದ ಮಹದೇವಶೆಟ್ಟಿ, ನಂಜಶೆಟ್ಟಿ, ಮಹ ದೇವಶೆಟ್ಟಿ, ಮಂಜು, ಸಿದ್ದರಾಜು ಇತರರು ಭಾಗವಹಿಸಿದ್ದರು.

Translate »