ಅತ್ತೆ, ವಾರಗಿತ್ತಿ, ಮೈದುನನಿಗೆ ಶಿಕ್ಷೆ, ಮಾವ, ಭಾವ ದೋಷಮುಕ್ತ ಚಾಮರಾಜನಗರ, ಡಿ.16(ಎಸ್‍ಎಸ್)- ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಗೃಹಿಣಿಯ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆಕೆಯ ಸಾವಿಗೆ ಕಾರಣವಾಗಿದ್ದ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದ ಬೆಳ್ಳಮ್ಮ (ಗೃಹಿಣಿಯ ಅತ್ತೆ), ದೊಡ್ಡಮ್ಮ (ವಾರಗಿತ್ತಿ), ರಮೇಶ್ (ಮೈದುನ) ಶಿಕ್ಷೆಗೆ ಗುರಿಯಾದವರು. ಚಿಕ್ಕಮಾದಶೆಟ್ಟಿ (ಮಾವ), ರಂಗಸ್ವಾಮಿ (ಭಾವ) ದೋಷಮುಕ್ತಗೊಂಡಿದ್ದಾರೆ. ಏನಿದು ಪ್ರಕರಣ:…
ಜಿಲ್ಲಾ 7ನೇ ಆರ್ಥಿಕ ಗಣತಿ ಪ್ರಕ್ರಿಯೆಗೆ ಚಾಲನೆ
December 17, 2019ಚಾಮರಾಜನಗರ, ಡಿ.16- ಆರ್ಥಿಕ ಗಣತಿಯಿಂದ ದೇಶದ ಪ್ರಗತಿಯ ಸೂಚ್ಯಂಕ ಗಳಾದ ರಾಷ್ಟ್ರೀಯ ತಲಾ ಆದಾಯ, ಜಿಡಿಪಿಗಳು ತಿಳಿಯುವುದರಿಂದ, ಗಣತಿ ದಾರರು ಮನೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ನಿಖರ ಮಾಹಿತಿ ನೀಡಿ, ಗಣತಿಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಜಿಲ್ಲೆಯ 7ನೇ ಆರ್ಥಿಕ ಗಣತಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಆರ್ಥಿಕ ಗಣತಿಯು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನಡೆಯಲಿದ್ದು, ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರಗಳ ಸಂಘಟಿತ ಮತ್ತು ಅಸಂಘಟಿಕ ವಲಯ…
ಪಾಂಡಿಚೇರಿ ಬೀಚ್‍ನಲ್ಲಿ ಚಾಮರಾಜನಗರ ಯುವಕ ಸಾವು
December 17, 2019ಚಾಮರಾಜನಗರ, ಡಿ.16(ಎಸ್‍ಎಸ್)- ತಾಲೂಕಿನ ಹರವೆ ಗ್ರಾಮದ ಯುವಕ ನೋರ್ವ ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದಾಗ ಪಾಂಡಿಚೇರಿ ಬೀಚ್‍ನಲ್ಲಿ ಅಲೆಗಳಿಗೆ ಸಿಲುಕಿ ಮೃತಪಟ್ಟಿದ್ದಾನೆ. ಹರವೆ ಗ್ರಾಮದ ಅಂಗಡಿ ಬಸಪ್ಪ ಎಂಬುವರ ಪುತ್ರ ಬಿ. ದೀಪು (26) ಮೃತಪಟ್ಟ ಯುವಕ. ದೀಪು ಬೆಂಗಳೂರಿನ ಕಂಪನಿ ಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ. 8 ಮಂದಿ ಸ್ನೇಹಿತರ ಜೊತೆ ಪಾಂಡಿಚೇರಿಗೆ ಪ್ರವಾಸಕ್ಕೆ ತೆರಳಿದ್ದ. ಈ ವೇಳೆ ಬೀಚ್‍ನಲ್ಲಿ ಆಟವಾಡುವ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಇನ್ನೂ ಮೂವರು ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ ಓರ್ವ ಯುವತಿಯ…
ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್
December 17, 2019ಚಾಮರಾಜನಗರ, ಡಿ.16- ತಂಬಾಕು ಉತ್ಪನ್ನಗಳ ಉತ್ಪಾದನೆ, ಸರಬರಾಜು, ಮಾರಾಟದ ಮೇಲಿನ ನಿಯಂತ್ರಣಕ್ಕಾಗಿ ಜಾರಿಗೆ ತರಲಾಗಿರುವ ಕೋಟ್ಪಾ-2003 ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿಂದು ನಡೆದ ಜಿಲ್ಲಾ ತಂಬಾಕು ನಿಯಂ ತ್ರಣ ಘಟಕದ ಜಿಲ್ಲಾ ಮಟ್ಟದ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-2003ರ ಸೆಕ್ಷನ್ 4ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು…
ಹನೂರು ಬಳಿ ಜೂಜು ಅಡ್ಡೆ ಮೇಲೆ ದಾಳಿ: 9 ಮಂದಿ ವಶಕ್ಕೆ
December 17, 2019ಹನೂರು, ಡಿ.16- ಜಿಲ್ಲಾ ಅಪರಾಧ ದಳದ ಪೊಲೀಸರು ಜೂಜಾಟ ಅಡ್ಡೆಯ ಮೇಲೆ ದಾಳಿ ನಡೆಸಿ 9 ಜನ ಜೂಜುಕೋರ ರನ್ನು ಹಾಗೂ ನಗದು ಮತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹನೂರು ಪೊಲೀಸ್ ಠಾಣಾ ಸರಹದ್ದಿನ ಹುಲ್ಲೇಪುರ ತೋಟದ ಜಮೀನೊಂದರಲ್ಲಿ ರಾತ್ರಿ ವೇಳೆ ಇಸ್ಪೀಟ್ ಆಡುತ್ತಿದ್ದ ಹನೂರು ಪಟ್ಟಣ ಹಾಗೂ ಆರ್.ಎಸ್.ದೊಡ್ಡಿ 9 ಜನರನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ 39165 ನಗದು ಮತ್ತು 5 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಜಿಲ್ಲಾ ಅಪ…
ಟೋಲ್ ಸಂಗ್ರಹ: ಸಾರಿಗೆ ಬಸ್ ದರ ಹೆಚ್ಚಳ
December 11, 2019ಚಾಮರಾಜನಗರ, ಡಿ.10- ಮೈಸೂರು- ನಂಜನಗೂಡು ಹಾಗೂ ಟಿ.ನರಸೀಪುರ-ಮೈಸೂರು ಮಾರ್ಗದಲ್ಲಿ ಟೋಲ್ ಸಂಗ್ರಹ ಆರಂಭವಾಗಿರುವುದು ಜಿಲ್ಲೆಯಿಂದ ಮೈಸೂರಿಗೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಪ್ರುಯಾಣಿಸುತ್ತಿರುವ ಪ್ರಯಾಣಿಕರಿಗೂ ಅದರ ಬಿಸಿ ತಟ್ಟಿದೆ. ಮೈಸೂರು-ನಂಜನಗೂಡು ನಡುವಿನ ಕೆ.ಎನ್.ಹುಂಡಿ ಬಳಿ ಹಾಗೂ ತಿ.ನರಸೀಪುರ- ಮೈಸೂರು ನಡುವಿನ ಯಡದೊರೆ ಬಳಿ ಟೋಲ್ ಸ್ಥಾಪಿಸಲಾಗಿದೆ. ಇಲ್ಲಿ ಭಾನು ವಾರ ಮಧ್ಯಾಹ್ನದಿಂದ ಶುಲ್ಕ ಸಂಗ್ರಹಿ ಸಲಾಗುತ್ತದೆ. ಕೆಎಸ್‍ಆರ್‍ಟಿಸಿ ಬಸ್‍ಗೆ ಟ್ರಿಪ್‍ವೊಂದಕ್ಕೆ 80 ರೂ. ನಿಗಧಿಗೊಳಿಸ ಲಾಗಿದ್ದು, ಈ ಹಿನ್ನಲೆಯಲ್ಲಿ ಬಸ್ ದರವನ್ನು ಮಂಗಳವಾರದಿಂದ 4 ರಿಂದ 5 ರೂ. ದರ…
ಉಪಚುನಾವಣೆ ಗೆಲುವು; ಯಳಂದೂರಲ್ಲಿ ಬಿಜೆಪಿ ಸಂಭ್ರಮ
December 11, 2019ಯಳಂದೂರು, ಡಿ.10- ವಿಧಾನಸಭಾ ಕ್ಷೇತ್ರಗ ಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು 12 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ ಹಿನ್ನೆ ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ಗಾಂಧಿ ಸರ್ಕಲ್‍ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಪಕ್ಷದ ಮುಖಂಡ ಕಿನಕಹಳ್ಳಿರಾಚಯ್ಯ ಮಾತ ನಾಡಿ, ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಬಿಜೆಪಿ ಪಡೆದು ಕೊಂಡಿದೆ. ಇದು ಪಕ್ಷಕ್ಕೆ ಮತ್ತಷ್ಟು ಬಲವನ್ನು ತಂದು ಕೊಟ್ಟಿದೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ಅವಧಿಯಲ್ಲಿ ಸುಭದ್ರ ಸರ್ಕಾರವನ್ನು…
ಹೆಲ್ಮೆಟ್ ಧರಿಸದವರಿಗೆ ರಿಯಾಯಿತಿ ದರದಲ್ಲಿ ಹೆಲ್ಮೆಟ್ ವಿತರಣೆ
December 11, 2019ಚಾಮರಾಜನಗರ, ಡಿ.10(ಎಸ್‍ಎಸ್)- ಹೆಲ್ಮೆಟ್ ಧರಿ ಸದೇ ವಾಹನ ಸವಾರಿ ಮಾಡು ವವರಿಗೆ ದಂಡ ವಿಧಿಸುವ ಬದಲು ರಿಯಾ ಯಿತಿ ದರದಲ್ಲಿ ಹೆಲ್ಮೆಟ್ ನೀಡುವ ವಿನೂತನ ಪ್ರಯತ್ನ ವನ್ನು ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಆರಂಭಿಸಿದೆ. ಸುಪ್ರೀಂಕೋರ್ಟ್‍ನ ತೀರ್ಪಿನಂತೆ ಜಿಲ್ಲೆಯಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ನಿಯಮ ಉಲ್ಲಂ ಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಆದರೂ ಸಹ ಇನ್ನೂ ಕೆಲವು ಸವಾರರು ಹೆಲ್ಮೆಟ್ ಧರಿಸುತ್ತಿಲ್ಲ. ಹೀಗಾಗಿ 1250 ರೂ. ಮುಖ ಬೆಲೆಯ ಐಎಸ್‍ಐ ಪ್ರಮಾ ಣಿತ…
ಸಮುದಾಯ ಭವನ ಸದ್ಬಳಕೆಗೆ ಶಾಸಕರ ಸಲಹೆ
December 11, 2019ಗುಂಡ್ಲುಪೇಟೆ, ಡಿ.10(ಸೋಮ್.ಜಿ)- ಸಮುದಾಯ ಭವನಗಳನ್ನು ಶುಭ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳಿ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ತಾಲೂಕಿನ ಸೋಮಹಳ್ಳಿ ಗ್ರಾಮದ ಮಡಿವಾಳ ಸಮಾಜದ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ತಾಲೂಕಿ ನಲ್ಲಿ ಹಲವಾರು ಸಮಾಜದ ಸಮುದಾಯ ಭವನ ಗಳು ಗ್ರಾಮಗಳಲ್ಲಿದೆ. ಆದರೆ ಅದರ ಸಮರ್ಪ ಕವಾದ ನಿರ್ವಹಣೆ ಕೊರತೆಯಿಂದ ಕಟ್ಟಡಗಳು ಶಿಥಿಲಾವಸ್ತೆ ತಲುಪುತ್ತಿದೆ. ಇದನ್ನು ಮನಗಂಡು ಸಮುದಾಯ ಭವನಗಳನ್ನು ಶುಭ ಕಾರ್ಯಗಳಿಗೆ ಸದ್ಭಳಕೆ ಮಾಡಿಕೊಳ್ಳುವುದರೊಂದಿಗೆ ಅವುಗಳ ನಿರ್ವಹಣೆಯನ್ನು ನೋಡಿಕೊಳ್ಳಿ ಎಂದರು. ರಸ್ತೆ ಅಭಿವೃದ್ಧಿ:…
ಉಪಚುನಾವಣೆಯಲ್ಲಿ ಗೆಲುವು: ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ
December 10, 2019ಬಿಜೆಪಿಯಿಂದ ಮೂರೂವರೆ ವರ್ಷ ಉತ್ತಮ ಆಡಳಿತ ಚಾಮರಜನಗರ, ಡಿ.9(ಎಸ್‍ಎಸ್)- ರಾಜ್ಯದಲ್ಲಿ ನಡೆದ 15 ವಿಧಾನಸಭಾ ಕ್ಷೇತ್ರ ಗಳ ಉಪಚುನಾವಣೆಯಲ್ಲಿ 12 ಕ್ಷೇತ್ರ ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನಲೆ ಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಸೋಮ ವಾರ ವಿಜಯೋತ್ಸವ ಆಚರಿಸಿದರು. ಶ್ರೀ ಚಾಮರಾಜೇಶ್ವರಸ್ವಾಮಿ ದೇವ ಸ್ಥಾನದ ಮುಂಭಾಗದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಪಕ್ಷದ ಪರ ವಾಗಿ ಹಾಗೂ ಪ್ರಧಾನ ಮಂತ್ರಿ, ಮುಖ್ಯ ಮಂತ್ರಿ ಪರವಾಗಿ ಜಯಕಾರ ಕೂಗಿದರು. ನಂತರ ವೃತ್ತದಲ್ಲಿ…