ಹೆಲ್ಮೆಟ್ ಧರಿಸದವರಿಗೆ ರಿಯಾಯಿತಿ ದರದಲ್ಲಿ ಹೆಲ್ಮೆಟ್ ವಿತರಣೆ
ಚಾಮರಾಜನಗರ

ಹೆಲ್ಮೆಟ್ ಧರಿಸದವರಿಗೆ ರಿಯಾಯಿತಿ ದರದಲ್ಲಿ ಹೆಲ್ಮೆಟ್ ವಿತರಣೆ

December 11, 2019

ಚಾಮರಾಜನಗರ, ಡಿ.10(ಎಸ್‍ಎಸ್)- ಹೆಲ್ಮೆಟ್ ಧರಿ ಸದೇ ವಾಹನ ಸವಾರಿ ಮಾಡು ವವರಿಗೆ ದಂಡ ವಿಧಿಸುವ ಬದಲು ರಿಯಾ ಯಿತಿ ದರದಲ್ಲಿ ಹೆಲ್ಮೆಟ್ ನೀಡುವ ವಿನೂತನ ಪ್ರಯತ್ನ ವನ್ನು ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಆರಂಭಿಸಿದೆ.

ಸುಪ್ರೀಂಕೋರ್ಟ್‍ನ ತೀರ್ಪಿನಂತೆ ಜಿಲ್ಲೆಯಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ನಿಯಮ ಉಲ್ಲಂ ಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಆದರೂ ಸಹ ಇನ್ನೂ ಕೆಲವು ಸವಾರರು ಹೆಲ್ಮೆಟ್ ಧರಿಸುತ್ತಿಲ್ಲ. ಹೀಗಾಗಿ 1250 ರೂ. ಮುಖ ಬೆಲೆಯ ಐಎಸ್‍ಐ ಪ್ರಮಾ ಣಿತ ಹೆಲ್ಮೆಟನ್ನು 750 ರೂ.ಗೆ ನೀಡಲು ನಿರ್ಧರಿಸಿದ್ದೇವೆ. ಈ ವಿನೂತನ ಪ್ರಯತ್ನ ವನ್ನು ಮಂಗಳವಾರದಿಂದಲೇ ಪ್ರಾರಂಭಿ ಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್‍ಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಹೆಲ್ಮೆಟ್ ಧರಿಸದೇ ವಾಹನ ಸವಾರಿ ಮಾಡುವವರಿಗೆ 500 ರೂ. ದಂಡ ವಿಧಿಸಲಾಗುತ್ತಿದೆ. ಇದರ ಬದಲು 750 ರೂ. ನೀಡಿದರೇ ಪೊಲೀಸರು ಸ್ಥಳದಲ್ಲಿಯೇ ಹೆಲ್ಮೆಟ್ ನೀಡುತ್ತಾರೆ. ಈ ಮೂಲಕ ಪ್ರತಿಯೊಬ್ಬ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು ಎಂಬುದು ನಮ್ಮ ಉದ್ದೇಶ. ಹೆಲ್ಮೆಟ್ ಖರೀದಿಸುವುದು ಕಡ್ಡಾಯ ಅಲ್ಲ. ದಂಡ ಪಾವತಿಸುತ್ತೇವೆ. ನಮಗೆ ಹೆಲ್ಮೆಟ್ ಬೇಡ ಎಂದರೂ ಸಹ ದಂಡ ಕಟ್ಟಿಸಿ ಕೊಂಡು ರಸೀತಿ ನೀಡುತ್ತೇವೆ ಎಂದು ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೊಳ್ಳೇಗಾಲ ಪಟ್ಟಣ ದಲ್ಲಿ ಸಂಚಾರ ಠಾಣೆ ಆರಂಭಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಕೊಳ್ಳೇಗಾಲದಲ್ಲಿ ಸಂಚಾರ ಠಾಣೆ ಆರಂಭವಾಗಲಿದೆ ಎಂದ ಎಸ್‍ಪಿ, ಜಿಲ್ಲೆಯ ನಾಗರಿಕರು ಸಂಚಾರ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ. ಡಿವೈಎಸ್‍ಪಿಗಳಾದ ಜೆ.ಮೋಹನ್, ನವೀನ್ ಕುಮಾರ್, ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಎಸ್.ಸಿ.ನಾಗೇ ಗೌಡ ಇತರರು ಉಪಸ್ಥಿತರಿದ್ದರು.

“ಮೋಟಾರು ವಾಹನ ಕಾಯ್ದೆ ಸೆಪ್ಟೆಂಬರ್ ತಿಂಗಳಿನಲ್ಲಿ ಜಾರಿಗೆ ಬಂದ ನಂತರ ಜಿಲ್ಲೆಯಲ್ಲಿ 13,528 ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳು ದಾಖಲಾಗಿದೆ. ಇದರಿಂದ 52.81 ಲಕ್ಷ ರೂ. ದಂಡ ವಸೂಲಿ ಆಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 4,684 ಪ್ರಕರಣ ದಾಖಲಾಗಿದ್ದು, 17.71 ಲಕ್ಷ ರೂ., ಅಕ್ಟೋ ಬರ್‍ನಲ್ಲಿ 2831 ಪ್ರಕರಣ ದಾಖಲಾಗಿದ್ದು, 11.23 ಲಕ್ಷ ರೂ. ದಂಡ ವಸೂಲಿ ಆಗಿದೆ. ನವೆಂಬರ್‍ನಲ್ಲಿ 6013 ಪ್ರಕರಣ ದಾಖಲಾಗಿದ್ದ 23.85 ಲಕ್ಷ ರೂ. ದಂಡ ವಸೂಲಿ ಆಗಿದೆ.
-ಎಚ್.ಡಿ.ಆನಂದ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

Translate »