ಉಪಚುನಾವಣೆ ಗೆಲುವು; ಯಳಂದೂರಲ್ಲಿ ಬಿಜೆಪಿ ಸಂಭ್ರಮ
ಚಾಮರಾಜನಗರ

ಉಪಚುನಾವಣೆ ಗೆಲುವು; ಯಳಂದೂರಲ್ಲಿ ಬಿಜೆಪಿ ಸಂಭ್ರಮ

December 11, 2019

ಯಳಂದೂರು, ಡಿ.10- ವಿಧಾನಸಭಾ ಕ್ಷೇತ್ರಗ ಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು 12 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ ಹಿನ್ನೆ ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ಗಾಂಧಿ ಸರ್ಕಲ್‍ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಪಕ್ಷದ ಮುಖಂಡ ಕಿನಕಹಳ್ಳಿರಾಚಯ್ಯ ಮಾತ ನಾಡಿ, ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಬಿಜೆಪಿ ಪಡೆದು ಕೊಂಡಿದೆ. ಇದು ಪಕ್ಷಕ್ಕೆ ಮತ್ತಷ್ಟು ಬಲವನ್ನು ತಂದು ಕೊಟ್ಟಿದೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ಅವಧಿಯಲ್ಲಿ ಸುಭದ್ರ ಸರ್ಕಾರವನ್ನು ನೀಡಲು ಅನುಕೂಲವಾಗಿದೆ. ಇಲ್ಲಿನ ಮತದಾರರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ದುರಾಡಳಿತದ ವಿರುದ್ಧ ನೀಡಿರುವ ತೀರ್ಪಾ ಗಿದೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇರುವುದ ರಿಂದ ರಾಜ್ಯದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ನೆರವು ಸಿಗಲಿದೆ. ಅಲ್ಲದೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ. ಈ ಚುನಾವಣೆ ಇದರ ದಿಕ್ಸೂಚಿಯಾಗಿದೆ. ಮುಂದಿನ ದಿನಗಳಲ್ಲಿ ಜನರು ಹೆಚ್ಚಿನ ಅಭಿವೃದ್ಧಿಯ ನಿರೀಕ್ಷೆಯನ್ನು ಇಟ್ಟಿದ್ದು ಇದನ್ನು ಪೂರ್ಣಗೊಳಿಸುವಲ್ಲಿ ಪಕ್ಷದ ನಾಯಕರು ಕೈ ಜೋಡಿಸಲಿದ್ದಾರೆ ಎಂದರು. ಮುಖಂಡರಾದ ಮದ್ದೂರು ಶ್ರೀಕಂಠ, ಪಿ.ಮಹೇಶ್, ಚಂದ್ರಶೇಖರ್, ಭೀಮಪ್ಪ, ಆಟೋನಾಗಣ್ಣ, ಕೃಷ್ಣ, ಪಟೇಲ್‍ಮಹೇಶ್, ಪುರಿನಿಂಗಣ್ಣ, ರಂಗಸ್ವಾಮಿ, ರಾಜೇಶ್, ಚಂದ್ರು, ಕೆಂಪ ರಾಜು, ಚಿನ್ನಸ್ವಾಮಿ, ಪ್ರಸಾದ್‍ನಾಯಕ್ ಇತರರಿದ್ದರು.

Translate »