ಅಂತರ ವಿಶ್ವವಿದ್ಯಾನಿಲಯ ಕ್ರಿಕೆಟ್ ಪಂದ್ಯಾವಳಿ: ಚೆನ್ನೈನ ಹಿಂದೂಸ್ತಾನ್ ತಾಂತ್ರಿಕ ಮತ್ತು ವಿಜ್ಞಾನ ವಿವಿ ತಂಡ ಚಾಂಪಿಯನ್
ಮೈಸೂರು

ಅಂತರ ವಿಶ್ವವಿದ್ಯಾನಿಲಯ ಕ್ರಿಕೆಟ್ ಪಂದ್ಯಾವಳಿ: ಚೆನ್ನೈನ ಹಿಂದೂಸ್ತಾನ್ ತಾಂತ್ರಿಕ ಮತ್ತು ವಿಜ್ಞಾನ ವಿವಿ ತಂಡ ಚಾಂಪಿಯನ್

December 11, 2019

ಮೈಸೂರು ವಿಶ್ವವಿದ್ಯಾನಿಲಯ ತಂಡ ರನ್ನರ್‍ಅಪ್
ಮೈಸೂರು, ಡಿ.10(ವೈಡಿಎಸ್)- ಮಾನಸಗಂಗೋತ್ರಿಯ ಗ್ಲೇಡ್ಸ್ ಮೈದಾನ ದಲ್ಲಿ ಮಂಗಳವಾರ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಪುರುಷರ ಕ್ರಿಕೆಟ್ ಪÀಂದ್ಯಾವಳಿಯ ಫೈನಲ್‍ನಲ್ಲಿ ಚೆನ್ನೈನ ಹಿಂದೂಸ್ತಾನ್ ತಾಂತ್ರಿಕ ಮತ್ತು ವಿಜ್ಞಾನ ವಿ.ವಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ನವದೆಹಲಿಯ ಭಾರತೀಯ ವಿಶ್ವ ವಿದ್ಯಾನಿಲಯಗಳ ಮಹಾಸಂಘ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಜಂಟಿ ಆಶ್ರಯದಲ್ಲಿ 13 ದಿನಗಳ ಕಾಲ ಆಯೋಜಿಸಿದ್ದ ಪಂದ್ಯಾವಳಿಯ ಫೈನಲ್ ನಲ್ಲಿ ಚೆನ್ನೈನ ಹಿಂದೂಸ್ತಾನ್ ವಿವಿ ತಂಡ 29 ರನ್‍ಗಳಿಂದ ಆತಿಥೇಯ ಮೈಸೂರು ವಿ.ವಿ ತಂಡವನ್ನು ಮಣಿಸಿತು.

ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈನ ಹಿಂದೂ ಸ್ತಾನ್ ವಿವಿ ತಂಡ 45 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತು. ತಂಡದ ಪರ ಆಟಗಾರ ಆದಿತ್ಯ ರಘುರಾಮನ್ ಅವರು 98 ಎಸೆತಕ್ಕೆ 69 ರನ್ ಹಾಗೂ ಆರ್.ಕಿರಣ್ 50(43) ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. ಉಳಿದ ಆಟಗಾರರಾದ ನಾಯಕ ಎಸ್. ಸಿದ್ದಾರ್ಥ 26 ಎಸೆತಕ್ಕೆ 38, ಎಸ್. ಸುಧಾನ್ ಸಂಜೀವ 26(43), ಕಿರಣ್ ಆಕಾಶ್ 15, ಆಸಿಕ್ 12, ಎಂ.ಆದಿತ್ಯ 10 ಗಳಿಸಿದರು.

ಈ ಮೊತ್ತದ ಬೆನ್ನತ್ತಿದ್ದ ಮೈಸೂರು ವಿವಿ ತಂಡ ಆರಂಭದಿಂದಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 41.2 ಓವರುಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 203 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡ ಪರ ಆಟಗಾರ ವಿಷ್ಣುಪ್ರಿಯನ್ 41(46), ಧೀಮಂತ್ 35(28), ನಂದನ್ ನಾರಾಯಣ್ 32(41), ವಿ.ಉತ್ತಮ್‍ಗೌಡ 25(39), ಶಶಾಂಕ್ 23(28) ರನ್ ಗಳಿಸಿ ದರು. ಮೈಸೂರು ವಿವಿ ತಂಡ ಕಳೆದ ಕಳೆದ ಬಾರಿಯೂ ರನ್ನರ್ ಅಪ್ ಆಗಿತ್ತು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯ ದಲ್ಲಿ ಹೈದರಾಬಾದ್‍ನ ಜವಾಹರಲಾಲ್ ನೆಹರು ತಾಂತ್ರಿಕ ವಿ.ವಿ ತಂಡ, ಕಳೆದ ಬಾರಿಯ ಚಾಂಪಿಯನ್ ಬೆಂಗಳೂರಿನ ಜೈನ್ ವಿ.ವಿ ತಂಡವನ್ನು 13 ರನ್‍ಗಳಿಂದ ಮಣಿಸಿ ತೃತೀಯ ಸ್ಥಾನ ಪಡೆದರೆ, ಬೆಂಗಳೂರು ಜೈನ್ ವಿವಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು. ಹಿಂದೂಸ್ತಾನ್ ವಿ.ವಿ, ಮೈಸೂರು ವಿ.ವಿ, ಜವಾಹರಲಾಲ್ ನೆಹರು ತಾಂತ್ರಿಕ ವಿ.ವಿ ಮತ್ತು ಜೈನ್ ವಿ.ವಿ. ತಂಡಗಳು ಅಖಿಲ ಭಾರತ ಅಂತರ ವಿ.ವಿ. ಪಂದ್ಯಾ ವಳಿಗೆ ಅರ್ಹತೆ ಪಡೆದುಕೊಂಡವು.

ಫಲಿತಾಂಶ: ಜವಾಹರಲಾಲ್ ನೆಹರು ತಾಂತ್ರಿಕ ವಿ.ವಿ. ಹೈದರಾಬಾದ್ ತಂಡ 43.5 ಓವರ್‍ಗಳಲ್ಲಿ 279 (ಪ್ರತೀಕ್ ಪವಾರ್ 113, ಪಿ.ಸಾಯ್ ವಿಕಾಸ್ ರೆಡ್ಡಿ 52, ಆದಿತ್ಯ ಗೋಯಲ್ 49ಕ್ಕೆ 3, ಆದಿತ್ಯ ಸೋಮಣ್ಣ 26ಕ್ಕೆ 3) ರನ್ ಗಳಿಸಿದರೆ, ಜೈನ್ ವಿ.ವಿ, ಬೆಂಗಳೂರು ತಂಡ 45 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 266 (ಸ್ಪರ್ಶ್ ಹೆಗ್ಡೆ 91, ಅರ್ಜುನ್ ಅರೋರ 82, ಅಖಿಲೇಶ್ ರೆಡ್ಡಿ 36ಕ್ಕೆ 2) ರನ್ ಗಳಿಸಿತು. ಅಂತಿಮವಾಗಿ ಜವಾಹರಲಾಲ್ ನೆಹರು ತಾಂತ್ರಿಕ ವಿ.ವಿಗೆ 13 ರನ್ ಜಯ ಸಾಧಿಸಿತು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಬಹುಮಾನ ವಿತರಿಸಿ, ಮಾತನಾಡಿ, ಡಿ.27ರಿಂದ ಇಂದಿನ ವರೆಗೆ ನಡೆದ ಕ್ರಿಕೆಟ್ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ನಡೆದಿದೆ. ಹಿಂದೂಸ್ತಾನ್ ವಿ.ವಿ, ಮೈಸೂರು ವಿ.ವಿ, ಜವಾಹರಲಾಲ್ ನೆಹರು ತಾಂತ್ರಿಕ ವಿ.ವಿ ಮತ್ತು ಜೈನ್ ವಿ.ವಿ. ತಂಡಗಳು ಅಖಿಲ ಭಾರತ ಅಂತರ ವಿ.ವಿ.ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿದ್ದು, ಉತ್ತಮ ಆಟ ಪ್ರದರ್ಶಿಸುವಂತೆ ಸಲಹೆ ನೀಡಿದರು. ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ. ಕೃಷ್ಣಯ್ಯ, ಮೈಸೂರು ವಲಯ ಕೆಎಸ್‍ಸಿಎ ಅಧ್ಯಕ್ಷ ಹರಿಕೃಷ್ಣ ಉಪಸ್ಥಿತರಿದ್ದರು.

Translate »