ಉಪಚುನಾವಣೆಯಲ್ಲಿ ಗೆಲುವು: ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ
ಚಾಮರಾಜನಗರ

ಉಪಚುನಾವಣೆಯಲ್ಲಿ ಗೆಲುವು: ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

December 10, 2019

ಬಿಜೆಪಿಯಿಂದ ಮೂರೂವರೆ ವರ್ಷ ಉತ್ತಮ ಆಡಳಿತ
ಚಾಮರಜನಗರ, ಡಿ.9(ಎಸ್‍ಎಸ್)- ರಾಜ್ಯದಲ್ಲಿ ನಡೆದ 15 ವಿಧಾನಸಭಾ ಕ್ಷೇತ್ರ ಗಳ ಉಪಚುನಾವಣೆಯಲ್ಲಿ 12 ಕ್ಷೇತ್ರ ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನಲೆ ಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಸೋಮ ವಾರ ವಿಜಯೋತ್ಸವ ಆಚರಿಸಿದರು.

ಶ್ರೀ ಚಾಮರಾಜೇಶ್ವರಸ್ವಾಮಿ ದೇವ ಸ್ಥಾನದ ಮುಂಭಾಗದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಪಕ್ಷದ ಪರ ವಾಗಿ ಹಾಗೂ ಪ್ರಧಾನ ಮಂತ್ರಿ, ಮುಖ್ಯ ಮಂತ್ರಿ ಪರವಾಗಿ ಜಯಕಾರ ಕೂಗಿದರು. ನಂತರ ವೃತ್ತದಲ್ಲಿ ಪಟಾಕಿ ಸಿಡಿಸಿದರು. ತದನಂತರ ಸಿಹಿ ವಿತರಿಸಿ ಸಂಭ್ರಮ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿ ಕಾರ್ಜುನಪ್ಪ, ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ 12 ಕ್ಷೇತ್ರ ಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಇದೊಂದು ಐತಿಹಾಸಿಕ ಗೆಲುವು ಎಂದು ಬಣ್ಣಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರರು ಪಕ್ಷವನ್ನು ಬೆಂಬಲಿಸಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ಬಹುಮತ ದೊರೆತಿದ್ದು, ಇನ್ನು ಉಳಿದಿ ರುವ ಮೂರೂವರೆ ವರ್ಷಗಳ ಕಾಲ ಉತ್ತಮ ಆಡಳಿತ ಜನರಿಗೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಪಂ ಸದಸ್ಯ ಸಿ.ಎನ್. ಬಾಲರಾಜು, ಚೂಡಾ ಮಾಜಿ ಅಧ್ಯಕ್ಷ ಎಸ್. ಬಾಲ ಸುಬ್ರಹ್ಮಣ್ಯಂ, ನಗರಸಭಾ ಸದಸ್ಯರಾದ ಮನೋಜ್‍ಪಟೇಲ್, ಮಂಜುನಾಥ್, ರಾಘವೇಂದ್ರ, ತಾಲೂಕು ಅಧ್ಯಕ್ಷ ನಂಜೇ ದೇವನಪುರ ಪ್ರಶಾಂತ್, ಮುಖಂಡರಾದ ಚಂದ್ರಶೇಖರ್, ಶಿವಣ್ಣ, ಸುರೇಶ್‍ನಾಯ್ಕ, ಕೆ.ಎಲ್. ಮಹದೇವಸ್ವಾಮಿ, ಕಾಗಲವಾಡಿ ಮರಿಸ್ವಾಮಿ, ಸುಂದರ್‍ರಾಜ್, ಕಾಂತರಾಜ್, ನಾಗೇಶ್‍ನಾಯ್ಕ, ವೀರೇಂದ್ರ, ಶಾಂತಮೂರ್ತಿ, ಚಂದ್ರಶೇಖರರಾವ್, ಚಂದ್ರು, ರಾಜು ಇತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

Translate »