ಬೇಗೂರು: ಹೋಬಳಿಯ ಎಲ್ಲಾ ಗ್ರಾಮಗಳ ರೈತರೂ ಪ್ರಧಾನಮಂತ್ರಿಯವರ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರಥಮ ಕಂತಿನ 2 ಸಾವಿರ ರೂ ಪಡೆಯಲು ಅರ್ಜಿ ಸಲ್ಲಿಸಲು ಆರ್‍ಟಿಸಿ ಪಡೆಯಲು ತೀವ್ರ ನೂಕು ನುಗ್ಗಲಾಗಿದ್ದು ಬೆಳಗಿನಿಂದ ಸಂಜೆಯ ವರೆಗೂ ಕಾಯಬೇಕಾಗಿದೆ. ಅರ್ಜಿಯೊಡನೆ ರೈತರು ಆರ್‍ಟಿಸಿ ಸಲ್ಲಿಸ ಬೇಕಾಗಿದ್ದು ಇದನ್ನು ಪಡೆದುಕೊಳ್ಳಲು ಮುಗಿ ಬೀಳುತ್ತಿದ್ದಾರೆÀ. ಹೋಬಳಿ ಕೇಂದ್ರವಾದ ಬೇಗೂರು ಗ್ರಾಮದ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಮಾತ್ರ ಆರ್ ಟಿ ಸಿ ದೊರಕು ತ್ತಿದೆ. ಸರ್ವರ್ ತೊಂದರೆ ಹಾಗೂ ಹೆಚ್ಚಿನ ಕೌಂಟರ್ ಇಲ್ಲದ ಪರಿಣಾಮ…
ಕೊಳ್ಳೇಗಾಲ ಕ್ಷೇತ್ರದ ಶಾಲೆಗಳ ಅಭಿವೃದ್ಧಿಗೆ 7.90 ಕೋಟಿ ರೂ. ಬಿಡುಗಡೆ: ಶಾಸಕ ಎನ್.ಮಹೇಶ್
February 26, 2019ಚಾಮರಾಜನಗರ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 87 ಶಾಲೆಗಳ 198 ಕೊಠಡಿಗಳ ದುರಸ್ತಿ ಗಾಗಿ 1.71 ಕೋಟಿ ಹಾಗೂ ಶಾಲಾ ಕೊಠಡಿಗಳ ಮರು ನಿರ್ಮಾಣಕ್ಕಾಗಿ 6.19 ಕೋಟಿ ಒಟ್ಟು 7.90 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಶಾಸಕ ಎನ್. ಮಹೇಶ್ ಹೇಳಿದರು. ತಾಲೂಕಿನ ಕಣ್ಣೇಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು. ಕೊಳ್ಳೇಗಾಲ ಕ್ಷೇತ್ರಕ್ಕೆ ಸರ್ಕಾರ ಶಿಕ್ಷಣ ಇಲಾಖೆ ಮೂಲಕ 7.90 ಕೋಟಿ ರೂ. ನೀಡಿ ಇತಿಹಾಸ…
ಹಾಸ್ಟೆಲ್‍ಗಳಲ್ಲಿ ಸಮರ್ಪಕ ಮೂಲ ಸೌಕರ್ಯ ಕಲ್ಪಿಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ
February 26, 2019ಚಾಮರಾಜನಗರ: ವಿವಿಧ ಇಲಾಖೆಗಳಡಿ ನಿರ್ವಹಣೆ ಯಾಗುತ್ತಿರುವ ಹಾಸ್ಟೆಲ್‍ಗಳಲ್ಲಿ ಸಮರ್ಪಕವಾಗಿ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಎಂಎಸ್‍ಎಇ ಮತ್ತು ಗಣಿ)ಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಾಜೇಂದರ್ ಕುಮಾರ್ ಕಠಾರಿಯಾ ಅವರು ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಹಾಸ್ಟೆಲ್‍ಗಳಲ್ಲಿ ತಾವು ಭೇಟಿ ನೀಡಿದ್ದ ವೇಳೆ ಹಲವು…
ಸುಟ್ಟು ಕರಕಲಾಗುತ್ತಿರುವ ಬಂಡೀಪುರ ನೋಡಿ ಮಮ್ಮಲ ಮರುಗಿದ ಸಚಿವ ಸತೀಶ್ ಜಾರಕಿಹೊಳಿ
February 25, 2019ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿ ಯಲ್ಲಿ ಕಾಡ್ಗಿಚ್ಚಿನಿಂದ ಸುಟ್ಟುಹೋಗಿರುವ ಪ್ರದೇ ಶಗಳಿಗೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ, ಪರಿಲೀಶಿಸಿದರು. ಬಂಡೀಪುರ ಅರಣ್ಯ ವಲಯಕ್ಕೆ ಸೇರಿದ ಮೇಲು ಕಾಮನಹಳ್ಳಿ ಅರಣ್ಯ, ಹಿಮವದ್ ಗೋಪಾಲ ಸ್ವಾಮಿ ಅರಣ್ಯ ವಲಯದಲ್ಲಿ ಕಾಡ್ಗಿಚ್ಚಿನಿಂದ ಹತ್ತಾರು ಸಾವಿರ ಎಕರೆಗಳಷ್ಟು ಅರಣ್ಯ ಸಂಪೂ ರ್ಣವಾಗಿ ನಾಶವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು ಮಮ್ಮಲ ಮರುಗಿದರು. ಬೆಂಕಿಯಿಂದ ಹಾನಿಗೊಳಗಾಗಿರುವ ಪ್ರದೇಶ ಗಳಲ್ಲಿ ವೀಕ್ಷಣೆ ಮಾಡಿ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು,…
ಸಾವಯವ ರೈತರ ಸಂತೆಗೆ ಭಾರೀ ಪ್ರಶಂಸೆ
February 25, 2019ಚಾಮರಾಜನಗರ: ರೈತ ಸಂಘ, ಹಸಿರುಸೇನೆ ಹಾಗೂ ಮೈಸೂರಿನ ನಿಸರ್ಗ ಟ್ರಸ್ಟ್ ಆಶ್ರಯದಲ್ಲಿ ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಬಳಿ ನೈಸರ್ಗಿಕ ಸಾವಯವ ರೈತರ ಸಂತೆಗೆ ಭಾನುವಾರ ಚಾಲನೆ ದೊರೆಯಿತು. ಇಂದಿನಿಂದ ಆರಂಭವಾದ ನೈಸರ್ಗಿಕ ಸಾವಯವ ರೈತರ ಸಂತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಗರದಲ್ಲಿ ಸಾವಯವ ರೈತರ ಸಂತೆ ಆರಂಭವಾಗಿರುವುದು ಒಳ್ಳೆಯ ಬೆಳವಣಿಗೆ. ರೈತರೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದ ರಿಂದ ನೇರವಾಗಿ ಗ್ರಾಹಕರು ಖರೀದಿಸಬಹುದು. ರಾಸಾಯನಿಕ…
ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟರಿಂದ ಆನೆಮಡುವಿನ ಕೆರೆ ತುಂಬಿಸುವ ಯೋಜನೆಗೆ ಚಾಲನೆ
February 25, 2019ಚಾಮರಾಜನಗರ: ತಾಲೂಕಿನ ಆನೆ ಮಡುವಿನ ಕೆರೆ ತುಂಬಿಸುವ ಯೋಜನೆ ಕಾಮ ಗಾರಿಗೆ ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಆನೆ ಮಡುವಿನ ಕೆರೆಗೆ ನೀರು ತುಂಬಿಸಬೇಕೆಂಬುದು ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿತ್ತು. ಹಾಗಾಗಿ 1.20 ಕೋಟಿ ರೂ. ವೆಚ್ಚದ ಈ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ ಎಂದರು. ಕೆರೆಗಳಿಗೆ ನೀರು ತುಂಬಿಸುವ ಪೈಪ್‍ಲೈನ್‍ನಿಂದ ಮತ್ತೊಂದು ಸಂಪರ್ಕ ಪೈಪ್‍ಲೈನ್…
ಉದ್ಯೋಗ ಮೇಳದ ಪ್ರಯೋಜನ ಪಡೆಯಲು ಜಿಲ್ಲಾಧಿಕಾರಿ ಸಲಹೆ
February 22, 2019ಚಾಮರಾಜನಗರ: ನಿರುದ್ಯೋಗ ನಿವಾರಣೆಗಾಗಿ ಹಮ್ಮಿಕೊಳ್ಳಲಾಗುವ ಉದ್ಯೋ ಗಮೇಳದ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಲು ಉದ್ಯೋಗಾ ಕಾಂಕ್ಷಿಗಳು ಮುಂದಾಗಬೇಕೆಂದು ಜಿಲ್ಲಾಧಿ ಕಾರಿ ಬಿ.ಬಿ. ಕಾವೇರಿ ಸಲಹೆ ನೀಡಿದರು. ನಗರದ ಜೆಎಸ್‍ಎಸ್ ಮಹಿಳಾ ಕಾಲೇಜು ಆವರಣದಲ್ಲಿಂದು ಜಿಲ್ಲಾಡಳಿತ, ಜಿಪಂ, ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆ, ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಉದ್ಯೋಗಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ಉದ್ಯೋಗಕ್ಕೆ ಬೇಡಿಕೆ ಹೆಚ್ಚಿದೆ. ಉದ್ಯೋಗ ಅವಕಾಶಗ ಳನ್ನು ಅರಸುವವರ ಸಂಖ್ಯೆಯೂ ಸಾಕ ಷ್ಟಿದೆ….
ಬಂಡೀಪುರ, ಬಿಳಿಗಿರಿರಂಗನಬೆಟ್ಟ ಅರಣ್ಯ ವಲಯದಲ್ಲಿ ಬೆಂಕಿ; ನೂರಾರು ಎಕರೆ ಕಾಡು ನಾಶ
February 22, 2019ಗುಂಡ್ಲುಪೇಟೆ: ತಾಲೂ ಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುಂದಕೆರೆ ಅರಣ್ಯ ವಲಯದ ಲೊಕ್ಕೆರೆ ಸಮೀಪದ ಗುಡ್ಡದಲ್ಲಿ ಬೆಂಕಿ ಕಾಣಿಸಿ ಕೊಂಡು ಸುಮಾರು 300 ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶ ಭಸ್ಮವಾಗಿದೆ. ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯಕ್ಕೆ ಸೇರಿದ ಲೊಕ್ಕೆರೆ ಸಮೀಪದ ಗುಡ್ಡದಲ್ಲಿ ಒಣಗಿದ್ದ ಹುಲ್ಲಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರ ಬಹುದು ಎನ್ನಲಾಗಿದ್ದು, ಪರಿಣಾಮ ನೂರಾರು ಎಕರೆ ಕಾಡು ಭಸ್ಮವಾಗಿದೆ. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಗುಡ್ಡದ ಸಮೀಪಕ್ಕೆ ತೆರಳಲು ಸಾಧ್ಯ ವಾಗದ ಪರಿಣಾಮ…
ಮಲೈಮಹದೇಶ್ವರ ಬೆಟ್ಟದಲ್ಲಿ ಹನೂರು ತಾಲೂಕು ಸಾಹಿತ್ಯ ಸಮ್ಮೇಳನ
February 21, 2019ಹನೂರು: ಹನೂರು ತಾಲೂಕು ರಚನೆಯಾದ ಬಳಿಕ ಪುಣ್ಯಸ್ಥಳ ಮಲೈ ಮಹದೇಶ್ವರ ಬೆಟ್ಟದಲ್ಲಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯು ತ್ತಿರುವುದು ಚರಿತ್ರೆ ಎಂದು ಅಂತರಾಷ್ಟ್ರೀಯ ಜಾನಪದ ಗಾಯಕರು ಮತ್ತು ವಿದ್ವಾಂಸ ರಾದ ಡಾ.ಅಪ್ಪಗೆರೆ ತಿಮ್ಮರಾಜು ಹೇಳಿದರು. ಹನೂರು ತಾಲೂಕಿನ ಮಲೈಮಹದೇಶ್ವರ ಬೆಟ್ಟದ ಮಹದೇಶ್ವರ ಕಲ್ಯಾಣ ಮಂಟಪ ದಲ್ಲಿ ಹಮ್ಮಿಕೊಂಡಿದ್ದ ಹನೂರು ತಾಲೂಕು ಪ್ರಥಮ ಸಾಹಿತ್ಯ sಸಮ್ಮೇಳನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಜಿಲ್ಲೆಯಲ್ಲಿ ಅನೇಕ ಕಲಾವಿದ ರಿದ್ದು ಅವರಿಂದ ದಿನಕ್ಕೊಂದು ತಂಡವನ್ನು ಕರೆತಂದು…
ವಾಯುವಿಹಾರಿಗಳಿಗೆ ಬೈಕ್ ಡಿಕ್ಕಿ: ಮಹಿಳೆ ಸಾವು ಮತ್ತೊಬ್ಬರಿಗೆ ತೀವ್ರ ಗಾಯ
February 21, 2019ಚಾಮರಾಜನಗರ: ವಾಯು ವಿಹಾರಕ್ಕೆ ತೆರಳಿದ್ದವರಿಗೆ ಬೈಕ್ ಡಿಕ್ಕಿ ಹೊಡೆದು ಓರ್ವ ಮಹಿಳೆ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ದೊಡ್ಡ ರಾಯಪೇಟೆ ಕ್ರಾಸ್ ಬಳಿ ಇರುವ ಪೆಟ್ರೋಲ್ ಬಂಕ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ. ದೊಡ್ಡರಾಯಪೇಟೆ ಗ್ರಾಮದ ಗುರುಸಿದ್ದಯ್ಯ ಪತ್ನಿ ನಂಜಮ್ಮ (42) ಮೃತಪಟ್ಟವರು. ಅದೇ ಗ್ರಾಮದ ಕುಮಾರ್ ಎಂಬುವವರು ತೀವ್ರ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂಜಮ್ಮ, ಕುಮಾರ ಮತ್ತು ಮತ್ತೊಬ್ಬರು ವಾಯುವಿಹಾರದಲ್ಲಿ ತೊಡಗಿದ್ದರು. ಇವರು ದೊಡ್ಡರಾಯಪೇಟೆ ಕ್ರಾಸ್ ಕಡೆಯಿಂದ ಗ್ರಾಮದ ಕಡೆಗೆ ತೆರಳುತ್ತಿದ್ದರು….