ಮಲೈಮಹದೇಶ್ವರ ಬೆಟ್ಟದಲ್ಲಿ ಹನೂರು ತಾಲೂಕು ಸಾಹಿತ್ಯ ಸಮ್ಮೇಳನ
ಚಾಮರಾಜನಗರ

ಮಲೈಮಹದೇಶ್ವರ ಬೆಟ್ಟದಲ್ಲಿ ಹನೂರು ತಾಲೂಕು ಸಾಹಿತ್ಯ ಸಮ್ಮೇಳನ

February 21, 2019

ಹನೂರು: ಹನೂರು ತಾಲೂಕು ರಚನೆಯಾದ ಬಳಿಕ ಪುಣ್ಯಸ್ಥಳ ಮಲೈ ಮಹದೇಶ್ವರ ಬೆಟ್ಟದಲ್ಲಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯು ತ್ತಿರುವುದು ಚರಿತ್ರೆ ಎಂದು ಅಂತರಾಷ್ಟ್ರೀಯ ಜಾನಪದ ಗಾಯಕರು ಮತ್ತು ವಿದ್ವಾಂಸ ರಾದ ಡಾ.ಅಪ್ಪಗೆರೆ ತಿಮ್ಮರಾಜು ಹೇಳಿದರು.

ಹನೂರು ತಾಲೂಕಿನ ಮಲೈಮಹದೇಶ್ವರ ಬೆಟ್ಟದ ಮಹದೇಶ್ವರ ಕಲ್ಯಾಣ ಮಂಟಪ ದಲ್ಲಿ ಹಮ್ಮಿಕೊಂಡಿದ್ದ ಹನೂರು ತಾಲೂಕು ಪ್ರಥಮ ಸಾಹಿತ್ಯ sಸಮ್ಮೇಳನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಜಿಲ್ಲೆಯಲ್ಲಿ ಅನೇಕ ಕಲಾವಿದ ರಿದ್ದು ಅವರಿಂದ ದಿನಕ್ಕೊಂದು ತಂಡವನ್ನು ಕರೆತಂದು ಸಾಂಸ್ಕøತಿಕ ಕಾರ್ಯಕ್ರಮ ಆಯೋ ಜಿಸಿ ನಮ್ಮ ಈ ಭಾಗದ ಮಹದೇಶ್ವರ ಕಾವ್ಯ, ಮಂಟ್ಯೇಸ್ವಾಮಿ, ಸಿದ್ದಪ್ಪಾಜಿ, ರಾಚ ಪ್ಪಾಜಿ ಅವರ ಚರಿತ್ರೆಗಳನ್ನು ತಿಳಿಸಿ ಗೀತೆ ಗಳನ್ನು ಹಾಡುವ ಮೂಲಕ ಎಲ್ಲೆಡೆ ಮಹದೇ ಶ್ವರರ ಕಾವ್ಯ, ಮಂಟ್ಯೇಸ್ವಾಮಿ ಕಾವ್ಯಗಳು ಪಸರಿಸುವಂತಾಗಬೇಕು ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಪ್ರೊ. ಕೇಶವನ್ ಪ್ರಸಾದ್ ಮಾತನಾಡಿ, ಗಡಿ ಹಾಗೂ ಕಾಡಂಚಿನ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ನಿಯೋ ಜಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು, ಎರಡು ರಾಜ್ಯಗಳ ನಿರಂತರ ಸಂಘರ್ಷಕ್ಕೆ ಕಾರಣವಾಗಿರುವ ಹೊಗೇನಕಲ್ ವಿವಾದ 1956ರಲ್ಲೇ ಬಗೆಹರಿದಿದೆ. ಭಾಷಾವಾರು ಪ್ರಾಂತ್ಯಗಳ ರಚನೆ ಸಂದರ್ಭದಲ್ಲಿ ಊಟಿ ಯನ್ನು ತಮಿಳುನಾಡಿಗೆ ಬಿಟ್ಟುಕೊಟ್ಟು ಬಹು ಜನರ ಆರಾಧ್ಯ ದೈವ ಮಲೆಮಹದೇಶ್ವರ ಬೆಟ್ಟವನ್ನು ತನ್ನಲ್ಲಿಯೇ ಉಳಿಸಿಕೊಂಡಿತು. ಇದರಲ್ಲಿ ಹೊಗೇನಕಲ್ ಜಲಪಾತವೂ ಸೇರಿದೆ ಎಂದರು.

ಶಾಸಕ ಆರ್.ನರೇಂದ್ರ ಮಾತನಾಡಿ, ಗಡಿಭಾಗದಲ್ಲಿರುವ ಹನೂರು ಕ್ಷೇತ್ರವು ಈ ಹಿಂದೆ ಸಾಕಷ್ಟು ಸಮಸ್ಯೆಗಳಿಂದ ಕೊಡಿತ್ತು ಆದರೆ ಕಳೆದ 10 ವರ್ಷಗಳಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಅಭಿ ವೃದ್ದಿ ಕಾಮಗಾರಿಗಳನ್ನು ಮಾಡಲಾಗು ವುದು ಎಂದರು. ಇದೇ ಸಂದರ್ಭದಲ್ಲಿ ಹಾರೋಹಳ್ಳಿ ಪ್ರಗತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಶಿವನಂಜಪ್ಪ, ಮ.ಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಸಮ್ಮೇಳಾಧ್ಯ ಕ್ಷರ ಪತ್ನಿ ಶಾಂತಾಪ್ರಸಾದ್, ಜಿಲ್ಲಾ ಪಂಚಾ ಯಿತಿ ಮಾಜಿ ಉಪಾಧ್ಯಕ್ಷ ಈಶ್ವರ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ಸ್ವಾಮಿ, ಪಿಡಿಒ ರಾಜೇಶ್, ಶಿಕ್ಷಕರು, ವಿದ್ಯಾರ್ಥಿಗಳು, ಮಹಿಳಾ ಸಂಘ-ಸಂಸ್ಥೆಯ ಸದಸ್ಯರು ಸೇರಿದಂತೆ ಮ.ಬೆಟ್ಟ ಸುತ್ತಮುತ್ತಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

Translate »