ಸಾವಯವ ರೈತರ ಸಂತೆಗೆ ಭಾರೀ ಪ್ರಶಂಸೆ
ಚಾಮರಾಜನಗರ

ಸಾವಯವ ರೈತರ ಸಂತೆಗೆ ಭಾರೀ ಪ್ರಶಂಸೆ

February 25, 2019

ಚಾಮರಾಜನಗರ: ರೈತ ಸಂಘ, ಹಸಿರುಸೇನೆ ಹಾಗೂ ಮೈಸೂರಿನ ನಿಸರ್ಗ ಟ್ರಸ್ಟ್ ಆಶ್ರಯದಲ್ಲಿ ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಬಳಿ ನೈಸರ್ಗಿಕ ಸಾವಯವ ರೈತರ ಸಂತೆಗೆ ಭಾನುವಾರ ಚಾಲನೆ ದೊರೆಯಿತು.

ಇಂದಿನಿಂದ ಆರಂಭವಾದ ನೈಸರ್ಗಿಕ ಸಾವಯವ ರೈತರ ಸಂತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಗರದಲ್ಲಿ ಸಾವಯವ ರೈತರ ಸಂತೆ ಆರಂಭವಾಗಿರುವುದು ಒಳ್ಳೆಯ ಬೆಳವಣಿಗೆ. ರೈತರೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದ ರಿಂದ ನೇರವಾಗಿ ಗ್ರಾಹಕರು ಖರೀದಿಸಬಹುದು. ರಾಸಾಯನಿಕ ವಸ್ತುಗಳನ್ನು ಬಳಸಿ ಆಹಾರ ಪದಾ ರ್ಥಗಳನ್ನು ಬೆಳೆಯುವುದರಿಂದ ಮನುಷ್ಯನ ಮೇಲೆ ದುಷ್ಪರಿಣಾಮಗಳು ಆಗುತ್ತಿದೆ. ಹಾಗಾಗಿ ಜನರ ಒಲವು ಸಿರಿಧಾನ್ಯಗಳ ಕಡೆಗೆ ಹೋಗುತ್ತಿದೆ. ಆರೋಗ್ಯಕರ ಬದುಕಿಗೆ ಸಿರಿಧಾನ್ಯಗಳು ಬಹಳ ಅವಶ್ಯಕವಾಗಿದೆ ಎಂದರು.

ಮಳಿಗೆ ಉದ್ಘಾಟಿಸಿ ಮಾತನಾಡಿದ ಸಂಸದ ಆರ್.ಧ್ರುವನಾರಾಯಣ್, ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಒಲವು ಸಿರಿಧಾನ್ಯಗಳ ಕಡೆಗೆ ವಾಲುತ್ತಿರು ವುದು ಕಂಡು ಬರುತ್ತಿದೆ. ತಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಲು ಜನರು ಸಿರಿಧಾನ್ಯಗಳ ಮೊರೆ ಹೋಗುತ್ತಿದ್ದಾರೆ. ಈ ಹಂತದಲ್ಲಿ ಸಾವಯವ ರೈತರ ಸಂತೆ ಆರಂಭವಾಗಿರುವುದು ಸಂತಸದ ಸಂಗತಿ ಎಂದರು.

ಶಾಸಕ ಆರ್.ನರೇಂದ್ರ ಮಾತನಾಡಿ, ಇಂದು ರಾಸಾಯನಿಕ ಔಷಧಗಳನ್ನು ಬಳಸದೇ ಆಹಾರ ಪದಾರ್ಥಗಳು ಸಿದ್ಧವಾಗುವುದಿಲ್ಲ. ಇಂತಹ ಆಹಾರ ಪದಾರ್ಥಗಳ ಸೇವನೆಯಿಂದ ನಾನಾ ರೋಗಗಳು ಬರುತ್ತಿವೆ. ಹಾಗಾಗಿ ಜನರು ಸಾವಯವ ಪದಾ ರ್ಥಗಳ ಮೊರೆ ಹೋಗುತ್ತಿದ್ದಾರೆ ಎಂದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಇಂದು ಕೃಷಿ ಯಲ್ಲಿ ರಾಸಾಯನಿಕ ಔಷಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಹಾಗಾಗಿ ಭೂಮಿ ತನ್ನ ತನವನ್ನು ಕಳೆದುಕೊಂಡು ಫಲವತ್ತತೆ ಇಲ್ಲವಾಗಿದೆ ಎಂದು ವಿಷಾದಿಸಿದರು.
ನಾನಾ ಉತ್ಪನ್ನಗಳು ಮಾರಾಟಕ್ಕೆ: ಭಾನುವಾರ ದಿಂದ ಪ್ರಾರಂಭವಾದ ನೈಸರ್ಗಿಕ ಸಾವಯವ ರೈತರ ಸಂತೆಯಲ್ಲಿ ಸುಮಾರು 25ಕ್ಕೂ ಹೆಚ್ಚು ರೈತರು ತಾವು ಬೆಳೆದಿದ್ದ ಸಾವಯವ ಬೆಳೆಯನ್ನು ಮಾರಾಟ ಮಾಡಿದರು. ಸಿರಿಧಾನ್ಯಗಳು, ತರಕಾರಿ, ಜೇನುತುಪ್ಪ, ಬೆಲ್ಲ, ಗಾಣದಲ್ಲಿ ತಯಾರಿಸಿದ್ದ ಎಣ್ಣೆ, ಸಿಹಿ ಉಂಡೆ, ಗಂಜಿ ಇನ್ನಿತರ ಆಹಾರ ಪದಾರ್ಥಗ ಳನ್ನು ಮಾರಾಟಕ್ಕೆ ಇಡಲಾಗಿತ್ತು. ಗ್ರಾಹಕರಿಂ ದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಪ್ರತಿ ಭಾನುವಾರವೂ ಸಂತೆ: ವಿಷಮುಕ್ತ ಆಹಾ ರದ ಕಡೆ ಜನರ ಒಲವನ್ನು ಸೆಳೆಯುವ ಉದ್ದೇಶ ದಿಂದ ಈ ಸಾವಯವ ರೈತರ ಸಂತೆ ಪ್ರಾರಂಭಿ ಸಿದ್ದು, ಸಾವಯವ ಬೆಳೆ ಬೆಳೆದಿರುವ ರೈತರೇ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಈ ಸಂತೆಯ ಉದ್ದೇಶವಾಗಿದೆ. ಸಂತೆಯನ್ನು ಪ್ರತಿ ತಿಂಗಳ 4ನೇ ಭಾನುವಾರ ಸಂಜೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಗ್ರಾಹಕರ ಆಸಕ್ತಿ ಹಾಗೂ ರೈತರ ಒತ್ತಡದ ಮೇರೆಗೆ ಪ್ರತಿ ಭಾನು ವಾರ ಸಂಜೆ ನಡೆಸಲು ರೈತಸಂಘ ತೀರ್ಮಾಸಿದ್ದು, ಇಂದಿನಿಂದ ಪ್ರತಿ ಭಾನುವಾರ ಸಾವಯವ ಸಂತೆ ನಡೆಯಲಿದೆ. ಉದ್ಘಾಟನಾ ಸಂಆರಂಭದಲ್ಲಿ ಎಪಿಎಂಸಿ ಅಧ್ಯಕ್ಷ ಶಂಕರಮೂರ್ತಿ, ಸದಸ್ಯ ಬಿ.ಕೆ. ರವಿಕುಮಾರ್, ಜಂಟಿ ಕೃಷಿ ನಿರ್ದೇಶಕ ತಿರು ಮಲೇಶ, ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಡಾ.ಗುರು ಪ್ರಸಾದ್, ಬಸವಣ್ಣ, ಮುಖಂಡರಾದ ಬಂದೀಗೌಡನಹಳ್ಳಿ ನಟರಾಜು, ಹೊನ್ನೂರು ಬಸವಣ್ಣ, ಅಂಬಳೆ ಶಿವಕುಮಾರ್, ಹೆಗ್ಗವಾಡಿ ಪುರ ಮಹದೇವಸ್ವಾಮಿ, ಗುಂಡ್ಲುಪೇಟೆ ಛತ್ರಹಳ್ಳಿ ಮಹದೇವಪ್ಪ, ಹಾಲಹಳ್ಳಿ ಮಹೇಶ್, ಚಂಗಡಿ ಕರಿಯಪ್ಪ, ಶಾಂತಕುಮಾರ್, ಮಾದೇಶ್ ಇತರರು ಹಾಜರಿದ್ದರು.

Translate »