ಗುಂಡ್ಲುಪೇಟೆ: ಹಲವು ತಿಂಗಳಿಂದ ಮಳೆ ಇಲ್ಲದೆ ಒಣಗಿದ್ದ ಬಂಡೀಪುರ ಅಭ್ಯ ಯಾರಣ್ಯಕ್ಕೆ ಮಳೆರಾಯ ಇಂದು ತಂಪೆರೆದಿದ್ದು, ಕಾಡ್ಗಿಚ್ಚು ಆತಂಕ ಕೊಂಚ ದೂರಾಗಿದೆ. ಬಂಡೀಪುರ ಅರಣ್ಯವಾಪ್ತಿಯ ಕಾಡು ಹಲವು ತಿಂಗಳಿಂದ ಮಳೆ ಇಲ್ಲದೆ ಒಣಗಿತ್ತು. ಇಂದು ಮಧ್ಯಾಹ್ನ ಸುರಿದ ಅಕಾಲಿಕ ಮಳೆಯಿಂದ ಕೊಂಚ ಇಳೆ ತಣಿದಿದೆ. ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಮಳೆ ಸುರಿದಿದ್ದು, ಬಿಸಿಲಿನ ತಾಪದಿಂದ ಬಸವಳಿದಿದ್ದ ವನ್ಯ ಜೀವಿಗಳು ನಿಟ್ಟುಸಿರು ಬಿಟ್ಟಿವೆ. ಇಂದು ಮಧ್ಯಾಹ್ನ ಬಿರು ಬಿಸಿಲಿನ ನಡುವೆಯೂ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ…
ಬಜೆಟ್‍ನಲ್ಲಿ ಚಾಮರಾಜನಗರ ಜಿಲ್ಲೆಗೆ ದಕ್ಕಿದ್ದು 8.5 ಕೋಟಿ ರೂ. ಮಾತ್ರ
February 9, 2019ಚಾಮರಾಜನಗರ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ 2,34,153 ಕೋಟಿ ರೂ. ಬಜೆಟ್‍ನಲ್ಲಿ ಜಿಲ್ಲೆಗೆ ನಿಗದಿಪಡಿಸಿ ನೀಡಿರುವುದು ಕೇವಲ 8.5 ಕೋಟಿ ಮಾತ್ರ. ಇದು ಜಿಲ್ಲೆಯ ಜನರಲ್ಲಿ ನಿರಾಶೆ ಮೂಡಿಸಿದೆ. ಜಿಲ್ಲಾ ಕೇಂದ್ರವಾದ ಚಾಮರಾಜನಗರ ದಲ್ಲಿ ಈಗಾಗಲೇ ಮುಚ್ಚಿ ಹೋಗಿರುವ ರೇಷ್ಮೆ ಕಾರ್ಖಾನೆಯ ಪುನಶ್ಚೇತನಕ್ಕಾಗಿ 5 ಕೋಟಿ ರೂ. ಮತ್ತು ಸಂತೇಮರಹಳ್ಳಿ ರೇಷ್ಮೆ ಕಾರ್ಖಾನೆ ಆಧುನೀಕರಣ ಹಾಗೂ ಯುವಕರಿಗೆ ತರಬೇತಿ ನೀಡಲು 2 ಕೋಟಿ ರೂ.ಗಳ ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ. ಇದಲ್ಲದೇ ಚಾಮ ರಾಜನಗರ ಜಿಲ್ಲೆ ಸೇರಿದಂತೆ 10…
ವಕೀಲನ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಮೂರನೇ ದಿನಕ್ಕೆ ಕಾಲಿಟ್ಟ ವಕೀಲರ ಪ್ರತಿಭಟನೆ
February 9, 2019ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ವಕೀಲ ರವಿ ಮೇಲೆ ಯಾವುದೇ ಸಕಾರಣವಿಲ್ಲದೆ ಗುಂಡ್ಲುಪೇಟೆ ವೃತ್ತ ನಿರೀ ಕ್ಷಕ ಪ್ರಕರಣ ದಾಖಲಿಸಿ ಬಂಧಿಸಿದ ಕ್ರಮ ವನ್ನು ಖಂಡಿಸಿ ಜಿಲ್ಲಾ ವಕೀಲರ ಸಂಘ ನ್ಯಾಯಾಲಯ ಕಲಾಪಗಳಿಂದ ಹೊರಗುಳಿದು ಕಳೆದ ಮೂರು ದಿನ ಪ್ರತಿಭಟನೆ ನಡೆಸುತ್ತಿದ್ದಾರೆ. ಚಾಮರಾಜನಗರದ ಜಿಲ್ಲಾ ನ್ಯಾಯಾಲ ಯದ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಮುಂದೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅವರ ನೇತೃತ್ವದಲ್ಲಿ ಇಂದು ಕೂಡ ಪ್ರತಿಭಟನೆ ನಡೆಸಿದರು. ವಕೀಲ ರವಿ ಮೇಲೆ ಹಲ್ಲೆ ಮಾಡಿ…
ರಾಜ್ಯ ಬಜೆಟ್‍ನಿಂದ ರೈತರಿಗೆ ಏನೇನೂ ಉಪಯೋಗ ಇಲ್ಲ
February 9, 2019ಚಾಮರಾಜನಗರ: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿ ಸಿದ ರಾಜ್ಯ ಬಜೆಟ್ ಚುನಾವಣಾ ದೃಷ್ಟಿಯಿಂದ ಕೂಡಿದೆ. ರೈತರ ಓಟು ಪಡೆಯಲು ರೈತರ ಬಜೆಟ್ ಎಂದು ಬಿಂಬಿಸುವ ಸಲುವಾಗಿ ಹಲವಾರು ಬಾರಿ ರೈತರ ಹೆಸರನ್ನು ಬಳಸಲಾಗಿದೆ. ಈ ಬಜೆಟ್‍ನಿಂದ ರೈತ ಸಮುದಾಯಕ್ಕೆ ಏನೇನೂ ಉಪಯೋಗ ಇಲ್ಲ ಎಂದು ರೈತ ಸಂಘದ ನೂತನ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಟೀಕಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ಗಾತ್ರ ದೊಡ್ಡದು….
ಸಫಾಯಿ ಕರ್ಮಚಾರಿಗಳಿಗೆ ಸಮರ್ಪಕವಾಗಿ ಸೌಲಭ್ಯ ತಲುಪಿಸಿ
February 7, 2019ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ತಾಕೀತು ಚಾಮರಾಜನಗರ: ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ಸಿಗುವ ಎಲ್ಲ ಯೋಜನೆಗಳು ಹಾಗೂ ಮೂಲ ಸೌಲಭ್ಯಗಳನ್ನು ಅಧಿಕಾರಿಗಳು ಸಮರ್ಪಕ ವಾಗಿ ತಲುಪಿಸಬೇಕೆಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಅವರು ತಾಕೀತು ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಇಂದು ಸಫಾಯಿ ಕರ್ಮಚಾರಿ ಗಳ ಕುಂದು ಕೊರತೆ ಹಾಗೂ ಸಫಾಯಿ ಕರ್ಮಚಾರಿಗಳ ಸೌಲಭ್ಯಗಳ ಕಾರ್ಯ ಕ್ರಮ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಸಫಾಯಿ ಕರ್ಮಚಾರಿಗಳ…
ಖಾಸಗಿ ಬಸ್-ಪಿಕಪ್ ವಾಹನ ಮುಖಾಮುಖಿ ಡಿಕ್ಕಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
February 7, 2019ಚಾಮರಾಜನಗರ: ಖಾಸಗಿ ಬಸ್ ಮತ್ತು ಪಿಕಪ್ ವಾಹನ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಹೊಂಗನೂರು ಗ್ರಾಮ ಸಮೀಪ ಇಂದು ಮಧ್ಯಾಹ್ನ ಸಂಭವಿಸಿದೆ. ಚಾಮರಾಜನಗರದಿಂದ ಕಾಗಲವಾಡಿ, ಹೊಂಗನೂರು, ಇರಸವಾಡಿ ಮಾರ್ಗವಾಗಿ ಯಳಂದೂರಿಗೆ ತೆರಳುತ್ತಿದ್ದ ಖಾಸಗಿ ಬಸ್, ವಿರುದ್ಧ ದಿಕ್ಕಿನಲ್ಲಿ ಬಾಳೆಕಾಯಿ ತುಂಬಿಕೊಂಡು ಬರುತ್ತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಎರಡೂ ವಾಹನಗಳೂ ಚಾಲಕರ ನಿಯಂತ್ರಣ ತಪ್ಪಿ ರಸ್ತೆ ಬದಿ ಜಮೀನಿಗೆ ನುಗ್ಗಿ ನಿಂತಿದ್ದವು. ಅಪಘಾತದಲ್ಲಿ ಬಸ್‍ನಲ್ಲಿದ್ದ…
ಹಳ್ಳಕ್ಕೆ ಬೈಕ್ ಉರುಳಿ ಸವಾರ ಸಾವು
February 7, 2019ಗುಂಡ್ಲುಪೇಟೆ: ನಿಯಂತ್ರಣ ತಪ್ಪಿದ ಬೈಕ್ ಹಳ್ಳಕ್ಕೆ ಉರುಳಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿ, ಹಿಂಬದಿ ಸವಾರ ಗಾಯ ಗೊಂಡ ಘಟನೆ ಇಂದು ಗುಂಡ್ಲುಪೇಟೆ-ಬೇಗೂರು ರಸ್ತೆಯ ಹಿರಿಕಾಟಿ ಗೇಟ್ ಬಳಿ ಸಂಭವಿಸಿದೆ. ಚಾಮರಾಜನಗರದ ದಿನಸಿ ವ್ಯಾಪಾರಿ ಶ್ರೀನಿವಾಸ್ (54) ಅಪ ಘಾತದಲ್ಲಿ ಮೃತಪಟ್ಟಿದ್ದು, ಹಿಂಬದಿ ಸವಾರ ಆರೀಫ್ ಗಾಯ ಗೊಂಡಿದ್ದಾರೆ. ಶ್ರೀನಿವಾಸ್ ಅವರು ತಮ್ಮ ಸ್ನೇಹಿತ ಆರೀಫ್ ಅವ ರೊಂದಿಗೆ ಬೇಗೂರು ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದಾಗ ಅವರ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬದಿ ಹಳ್ಳಕ್ಕೆ ಉರುಳಿದೆ…
ಸಲಗ ಹತ್ಯೆ; ದಂತ ಅಪಹರಣ
February 7, 2019ಹನೂರು: ಕಾವೇರಿ ವನ್ಯಧಾಮದ ಕೊತ್ತನೂರು ಅರಣ್ಯ ಪ್ರದೇಶದಲ್ಲಿ ಒಂಟಿ ಸಲಗವೊಂದನ್ನು ನಾಡ ಬಂದೂಕಿನಿಂದ ಹತ್ಯೆ ಮಾಡಿ ದಂತ ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ವಿವರ : ರಾಜ್ಯದ ಪ್ರಸಿದ್ದ ಚಿಕ್ಕಲ್ಲೂರು ಜಾತ್ರೆಯ ಸಂದರ್ಭದಲ್ಲಿ ಸುಮಾರು 50 ವರ್ಷದ ಗಂಡಾನೆಯೊಂದನ್ನು ಬೇಟೆಗಾರರು ಹಣೆಗೆ ಗುಂಡಿಕ್ಕಿ ಹತ್ಯೆ ಮಾಡಿ, ಆಸ್ಯಿಡ್ ಬಳಸಿ ಆನೆಯ ದಂತಗಳನ್ನು ಅಪಹರಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಭಾನುವಾರ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಆನೆಯ ಕಳೆಬರಹ ಪತ್ತೆಯಾಗಿದ್ದು, ಮಾಹಿತಿಯನ್ನು ಹಿರಿಯ…
ಸಿಲಿಂಡರ್ ಸ್ಫೋಟ, ನಾಲ್ಕು ಮನೆ ಜಖಂ, ಲಕ್ಷಾಂತರ ಮೌಲ್ಯದ ಸಾಮಗ್ರಿ ಹಾನಿ
February 7, 2019ಕೊಳ್ಳೇಗಾಲ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನಾಲ್ಕು ಮನೆ ಗಳು ಸಂಪೂರ್ಣ ಜಖಂಗೊಂಡಿದ್ದು, ಮನೆ ಯಲ್ಲಿದ್ದ ಲಕ್ಷಾಂತರ ಮೌಲ್ಯದ ಸಾಮಗ್ರಿ ಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮ ವಾಗಿರುವ ದುರ್ಘಟನೆ ಬುಧವಾರ ರಾತ್ರಿ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ. ಪಾಳ್ಯ ಗ್ರಾಮದ ವೆಂಕಟನಾಯಕ, ನಾಗ ಮಣಿ, ವೆಂಕಟಮ್ಮ ಹಾಗೂ ಪುಟ್ಟಮಾದಮ್ಮ ಎಂಬುವರಿಗೆ ಸೇರಿದ ಮನೆಗಳು ಸಿಲಿಂಡರ್ ಸ್ಫೋಟದಿಂದಾಗಿ ಜಖಂಗೊಂಡಿವೆÉ. ಮನೆಗ ಳಿಗೆ ಬೆಂಕಿ ವ್ಯಾಪಿಸಿದ್ದನ್ನು ಕಂಡ ಅಕ್ಕಪ ಕ್ಕದ ನಿವಾಸಿಗಳು ಸಹಾ ಜಾಗೃತರಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಜೊತೆ…
ನಾಳೆ ಫ್ರೌಢಶಾಲೆ ನೂತನ ಕೊಠಡಿ, ವಿದ್ಯಾರ್ಥಿನಿಲಯ ಉದ್ಘಾಟನೆ
February 7, 2019ಚಾಮರಾಜನಗರ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ವತಿಯಿಂದ ನಿರ್ಮಾಣ ಗೊಂಡಿರುವ ಯಳಂದೂರು ತಾಲೂಕಿನ ಕೆಸ್ತೂರು ಸರ್ಕಾರಿ ಫ್ರೌಢಶಾಲೆಯ ಹೆಚ್ಚುವರಿ ನೂತನ ಕೊಠಡಿ ಹಾಗೂ ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯಗಳ ಉದ್ಘಾಟನೆ ಕಾರ್ಯ ಕ್ರಮವನ್ನು ಫೆಬ್ರವರಿ 9 ರಂದು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗುವರು. ಸಂಸದ ಆರ್.ದ್ರುವನಾರಾಯಣ ಉದ್ಘಾಟನೆ ನೆರವೇರಿಸುವರು. ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಶಾಸಕರಾದ ಮರಿತಿಬ್ಬೇ ಗೌಡ, ಆರ್.ಧರ್ಮಸೇನ, ಸಂದೇಶ್…