ವಕೀಲನ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಮೂರನೇ ದಿನಕ್ಕೆ ಕಾಲಿಟ್ಟ ವಕೀಲರ ಪ್ರತಿಭಟನೆ
ಚಾಮರಾಜನಗರ

ವಕೀಲನ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಮೂರನೇ ದಿನಕ್ಕೆ ಕಾಲಿಟ್ಟ ವಕೀಲರ ಪ್ರತಿಭಟನೆ

February 9, 2019

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ವಕೀಲ ರವಿ ಮೇಲೆ ಯಾವುದೇ ಸಕಾರಣವಿಲ್ಲದೆ ಗುಂಡ್ಲುಪೇಟೆ ವೃತ್ತ ನಿರೀ ಕ್ಷಕ ಪ್ರಕರಣ ದಾಖಲಿಸಿ ಬಂಧಿಸಿದ ಕ್ರಮ ವನ್ನು ಖಂಡಿಸಿ ಜಿಲ್ಲಾ ವಕೀಲರ ಸಂಘ ನ್ಯಾಯಾಲಯ ಕಲಾಪಗಳಿಂದ ಹೊರಗುಳಿದು ಕಳೆದ ಮೂರು ದಿನ ಪ್ರತಿಭಟನೆ ನಡೆಸುತ್ತಿದ್ದಾರೆ.

ಚಾಮರಾಜನಗರದ ಜಿಲ್ಲಾ ನ್ಯಾಯಾಲ ಯದ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಮುಂದೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅವರ ನೇತೃತ್ವದಲ್ಲಿ ಇಂದು ಕೂಡ ಪ್ರತಿಭಟನೆ ನಡೆಸಿದರು. ವಕೀಲ ರವಿ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳೆಂದ ನಿಂದಿ ಸಿರುವ ಗುಂಡ್ಲುಪೇಟೆ ವೃತ್ತ ನಿರೀಕ್ಷಕ ಬಾಲ ಕೃಷ್ಣ ಮತ್ತು ಸಬ್ ಇನ್ಸ್‍ಪೆಕ್ಟರ್ ಲತೇಶ್ ಕುಮಾರ್ ಅವರ ವಿರುದ್ಧ ಮೇಲಾಧಿಕಾರಿ ಗಳು ಸೂಕ್ತ ಕ್ರಮಕೈಗೊಳ್ಳಲು ಮೀನಾ ಮೇಷ ಎಣಿಸುತ್ತಿದ್ದಾರೆ. ಯಾವುದೇ ತಪ್ಪು ಮಾಡದಿ ದ್ದರು ದುರುದ್ದೇಶದಿಂದ ವಕೀಲರ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವುದು ವಕೀಲ ಸಮುದಾಯಕ್ಕೆ ಅವಮಾನ ಮಾಡಿದಂತಾ ಗಿದೆ ಮತ್ತು ಕಾನೂನಿಗೆ ವಿರುದ್ಧವಾಗಿ ನಡೆದು ಕೊಂಡಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಇನ್ನು ಉಗ್ರ ರೀತಿಯ ಹೋರಾ ಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಜೊತೆಗೆ ಅನಿರ್ಧಿಷ್ಠಾವಧಿ ಕಾಲ ನ್ಯಾಯಾ ಲಯದ ಕಲಾಪದಿಂದ ಹೊರಗುಳಿಯು ವುದನ್ನು ಮುಂದುವರಿಸಬೇಕಾಗುತ್ತದೆ ಎಂದು ವಕೀಲರು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಅವರಿಗೆ ಮನವಿ ಸಲ್ಲಿಸಿದ ವಕೀಲರು ಕಳೆದ ಮೂರು ದಿನಗಳಿಂದ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸುತ್ತಿದ್ದರೂ ದೌರ್ಜನ್ಯವೆಸಗಿರುವ ಪೊಲೀಸರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಕೊಟ್ಟಿರುವ ಮನವಿಯನ್ನು ರಾಜ್ಯದ ಗೃಹ ಇಲಾಖೆಗೆ ಕಳಿಸು ವಂತೆ ಅಪರ ಜಿಲ್ಲಾ ಧಿಕಾರಿಗೆ ತಿಳಿಸಿದರು. ಒಂದೆರಡು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗುಂಡ್ಲುಪೇಟೆ ಮತ್ತು ಯಳಂದೂರು ವಕೀಲ ಸಂಘದ ಸದಸ್ಯರು ನ್ಯಾಯಾಲಯ ಕಲಾಪದಿಂದ ಹೊರಗುಳಿದು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು. ರಾಜ್ಯ ವಕೀಲ ಪರಿ ಷತ್ ಸದಸ್ಯ ವಿಶಾಲ್‍ರಘು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ನ್ಯಾಯ ದೊರಕಿಸಿ ಕೊಡುವುದಾಗಿ ತಿಳಿಸಿದರು. ಜಿಲ್ಲಾ ವಕೀ ಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್, ಪ್ರಧಾನ ಕಾರ್ಯದರ್ಶಿ ಆರ್.ಅರು ಣ್‍ಕುಮಾರ್, ಉಪಾಧ್ಯಕ್ಷ ಶಿವಪ್ರಸನ್ನ, ಜಂಟಿ ಕಾರ್ಯದರ್ಶಿ ದಲಿತ್‍ರಾಜ್, ಖಜಾಂಚಿ ಮಹಾಲಿಂಗ ಸ್ವಾಮಿ, ಕಾರ್ಯ ಕಾರಿ ಸಮಿತಿ ಸದಸ್ಯ ಕಾಗಲವಾಡಿ ಮಹೇ ಶ್‍ಕುಮಾರ್, ಹೆಚ್.ಎಸ್.ಮಹೇಂದ್ರ, ಆರ್. ಗಿರೀಶ್, ಮೋಹನ್ ಜಗದೀಶ್, ಮಾಜಿ ಅಧ್ಯಕ್ಷರಾದ ಪುಟ್ಟರಾಜು, ರಾಮಸಮುದ್ರ ಪುಟ್ಟಸ್ವಾಮಿ, ಬಿ.ಜಿ.ಜಯಪ್ರಕಾಶ್, ಎ. ರಮೇಶ್, ಎಸ್.ಬಸವಣ್ಣ, ಕೆ.ಪಿ.ನಾಗರಾಜು, ಪುಟ್ಟರಾಚಯ್ಯ, ಕೆ.ಎಸ್.ಗುರುಸ್ವಾಮಿ, ಉತ್ತ ವಳ್ಳಿ ಕುಮಾರ್, ಶ್ರೀನಿವಾಸ್, ಕೆ.ಎಸ್.ಸಿದ್ದ ರಾಜು, ಬಿ.ಪ್ರಸನ್ನ ಕುಮಾರ್, ಆರ್.ರಂಗಸ್ವಾಮಿ, ನಾಗಮ್ಮ, ರೂಪಶ್ರೀ, ಮಂಗಳಗೌರಮ್ಮ, ಎಂ., ಆರ್.ಸವಿತ, ಗಾಯತ್ರಿ, ವಿರೂಪಾಕ್ಷಸ್ವಾಮಿ, ಹೊಂಗನೂರು ಮಹೇಶ್ ಮುಂತಾದವರಿದ್ದರು.

Translate »