ಬಜೆಟ್‍ನಲ್ಲಿ ಚಾಮರಾಜನಗರ ಜಿಲ್ಲೆಗೆ ದಕ್ಕಿದ್ದು 8.5 ಕೋಟಿ ರೂ. ಮಾತ್ರ
ಚಾಮರಾಜನಗರ

ಬಜೆಟ್‍ನಲ್ಲಿ ಚಾಮರಾಜನಗರ ಜಿಲ್ಲೆಗೆ ದಕ್ಕಿದ್ದು 8.5 ಕೋಟಿ ರೂ. ಮಾತ್ರ

February 9, 2019

ಚಾಮರಾಜನಗರ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ 2,34,153 ಕೋಟಿ ರೂ. ಬಜೆಟ್‍ನಲ್ಲಿ ಜಿಲ್ಲೆಗೆ ನಿಗದಿಪಡಿಸಿ ನೀಡಿರುವುದು ಕೇವಲ 8.5 ಕೋಟಿ ಮಾತ್ರ. ಇದು ಜಿಲ್ಲೆಯ ಜನರಲ್ಲಿ ನಿರಾಶೆ ಮೂಡಿಸಿದೆ.

ಜಿಲ್ಲಾ ಕೇಂದ್ರವಾದ ಚಾಮರಾಜನಗರ ದಲ್ಲಿ ಈಗಾಗಲೇ ಮುಚ್ಚಿ ಹೋಗಿರುವ ರೇಷ್ಮೆ ಕಾರ್ಖಾನೆಯ ಪುನಶ್ಚೇತನಕ್ಕಾಗಿ 5 ಕೋಟಿ ರೂ. ಮತ್ತು ಸಂತೇಮರಹಳ್ಳಿ ರೇಷ್ಮೆ ಕಾರ್ಖಾನೆ ಆಧುನೀಕರಣ ಹಾಗೂ ಯುವಕರಿಗೆ ತರಬೇತಿ ನೀಡಲು 2 ಕೋಟಿ ರೂ.ಗಳ ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ. ಇದಲ್ಲದೇ ಚಾಮ ರಾಜನಗರ ಜಿಲ್ಲೆ ಸೇರಿದಂತೆ 10 ಜಿಲ್ಲೆ ಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಸ್ಥಾಪಿಸಲು 15 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಇದನ್ನು ಹೊರತು ಪಡಿಸಿದರೆ, ಬೇರೆಲ್ಲೂ ಜಿಲ್ಲೆಯ ಹೆಸರು ಪ್ರಸ್ತಾಪ ಆಗಿಲ್ಲ. ಮಾನವ-ಆನೆ ಸಂಘರ್ಷ ನಿಯಂ ತ್ರಣಕ್ಕಾಗಿ ಉಪಯೋಗಿಸಿದ ರೈಲು ಹಳಿ ತಡೆಗೋಡೆಯಿಂದ ಮಾನವ-ಆನೆ ಸಂಘರ್ಷ ನಿಯಂತ್ರಣ ಯೋಜನೆಯಡಿ ರೈಲು ಹಳಿ ತಡೆಗೋಡೆ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ಅರ್ಧ ಭಾಗ ಅರಣ್ಯ ಪ್ರದೇಶದಿಂದ ಆವೃತ್ತವಾಗಿ ರುವುದರಿಂದ ಜಿಲ್ಲೆಯ ಹಲವು ಗ್ರಾಮ ಗಳು ಕಾಡಂಚಿನ ಪ್ರದೇಶದಲ್ಲಿ ಇರುವುದ ರಿಂದ ಈ ಯೋಜನೆಯ ಅನುದಾನ ಜಿಲ್ಲೆಗೆ ದೊರೆಕಬಹುದು ಎಂದು ನಿರೀಕ್ಷಿಸಲಾ ಗಿದೆ. ಈ ನಾಲ್ಕನ್ನು ಹೊರತು ಪಡಿಸಿದರೆ, ಜಿಲ್ಲೆಯ ಹೆಸರು ಬಜೆಟ್‍ನಲ್ಲಿ ಇಲ್ಲವಾಗಿದೆ.

ಹೆಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ವೇಳೆ ಜಿಲ್ಲೆಯ ಎರಡು ಕಡೆ (ಬಡಗಲಮೊಳೆ ಮತ್ತು ಕೊಂಬು ಡಿಕ್ಕಿ) ವಾಸ್ತವ್ಯ ಹೂಡಿದ್ದರು. ಇದಲ್ಲದೇ ಚಾಮರಾಜನಗರಕ್ಕೆ ಭೇಟಿ ನೀಡುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಹೀಗಾಗಿ ಜಿಲ್ಲೆಯ ಜನತೆ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿ ಹೊಸ ಯೋಜನೆಗ ಳನ್ನು ಜಾರಿಗೊಳಿಸಬಹುದು ಎಂದು ನಿರೀಕ್ಷಿಸಿ ದ್ದರು. ಇದಲ್ಲದೇ ಜಿಲ್ಲೆಯಲ್ಲಿ ಪ್ರವಾಸೋ ದ್ಯಮವನ್ನು ಅಭಿವೃದ್ಧಿಗೊಳಿಸಲು ಬಹಳ ಅವಕಾಶ ಇದ್ದುದ್ದರಿಂದ ಪ್ರವಾಸೋದ್ಯ ಮಕ್ಕೆ ಒತ್ತು ನೀಡಬಹುದು ಎಂದು ಜನತೆ ಭಾವಿಸಿದ್ದರು. ಆದರೆ ಪ್ರವಾ ಸೋದ್ಯಮ ಇಲಾಖೆಯಲ್ಲಿ ಜಿಲ್ಲೆಯ ಹೆಸರು ಇಲ್ಲದಿರುವುದು ನಾಗರಿಕರಲ್ಲಿ ಬೇಸರ ತರಿಸಿದೆ.

ಬಡವರಿಗೆ ನಿವೇಶನ ವಿತರಿಸಲು ಅನುದಾನ, ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಹಣ, ಮುಂದುವರೆದ ಒಳ ಚರಂಡಿ ಕಾಮಗಾರಿಗೆ ಅನುದಾನ, ಕುಡಿ ಯುವ ನೀರು ಪೂರೈಕೆಯ ಹೊಸ ಯೋಜನೆಯನ್ನು ಜಿಲ್ಲೆಯ ಜನತೆ ನಿರೀ ಕ್ಷಿಸಿದ್ದರು. ಇವುಗಳ ಬೇಡಿಕೆಗಳ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಇದ್ಯಾವುದೂ ಸಹ ಬಜೆಟ್‍ನಲ್ಲಿ ಪ್ರಸ್ತಾಪ ಆಗದೇ ಇರುವುದನ್ನು ತಿಳಿದ ಜಿಲ್ಲೆಯ ಜನತೆ ಸರ್ಕಾರ ಗಡಿ ಜಿಲ್ಲೆಯನ್ನು ಕಡೆ ಗಣಿಸಿದೆ ಎಂದು ಆರೋಪಿಸಿದ್ದಾರೆ.

Translate »