ಸೋಮವಾರಪೇಟೆಯಲ್ಲಿ ಜಂತು ಹುಳು ನಿವಾರಣಾ ದಿನಾಚರಣೆ
ಕೊಡಗು

ಸೋಮವಾರಪೇಟೆಯಲ್ಲಿ ಜಂತು ಹುಳು ನಿವಾರಣಾ ದಿನಾಚರಣೆ

February 9, 2019

ಸೋಮವಾರಪೇಟೆ: ರಾಷ್ಟ್ರೀಯ ಜಂತುಹುಳು ನಿವಾ ರಣಾ ದಿನಾಚರಣೆ ಯನ್ನು ಇಲ್ಲಿಗೆ ಸಮೀ ಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ-ಕಲ್ಲಾರೆ ಹಾಗೂ ಚೌಡ್ಲು-ಆಲೆಕಟ್ಟೆ ಅಂಗ ನವಾಡಿ ಕೇಂದ್ರಗಳಲ್ಲಿ ಆಚರಿಸಲಾಯಿತು. ಅಂಗನವಾಡಿ ಮಕ್ಕಳಿಗೆ ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಸುಬ್ರಮಣಿ ಜಂತುಹುಳು ನಾಶಕ ಮಾತ್ರೆಗಳನ್ನು ನೀಡುವ ಮೂಲಕ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಗದಿತ ಕಾಲ ಕಾಲಕ್ಕೆ ಜಂತುಹುಳು ನಿವಾ ರಣೆಯ ಮಾತ್ರೆಗಳನ್ನು ನೀಡಬೇಕು. ಇದರಿಂದ ಅಪೌಷ್ಠಿಕತೆ ಹಾಗೂ ರಕ್ತ ಹೀನತೆಗೆ ಗುರಿಯಾಗುವುದನ್ನು ತಪ್ಪಿಸಬಹುದಾಗಿದೆ ಎಂದರು. ಈ ಸಂದರ್ಭ ಅಂಗನವಾಡಿ ಕಾರ್ಯ ಕರ್ತರುಗಳಾದ ಬಿ.ಎಸ್. ಕಮಲ, ಎಸ್. ವನಜಾಕ್ಷಿ, ಆಶಾ ಕಾರ್ಯಕರ್ತೆಯರುಗಳಾದ ಸವಿತ, ಸಂಧ್ಯಾ ಹಾಗೂ ಸಹಾಯಕಿ ಮಮತಾ ಹಾಜರಿದ್ದರು.

Translate »