ನಾಳೆ ಫ್ರೌಢಶಾಲೆ ನೂತನ ಕೊಠಡಿ, ವಿದ್ಯಾರ್ಥಿನಿಲಯ ಉದ್ಘಾಟನೆ
ಚಾಮರಾಜನಗರ

ನಾಳೆ ಫ್ರೌಢಶಾಲೆ ನೂತನ ಕೊಠಡಿ, ವಿದ್ಯಾರ್ಥಿನಿಲಯ ಉದ್ಘಾಟನೆ

February 7, 2019

ಚಾಮರಾಜನಗರ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ವತಿಯಿಂದ ನಿರ್ಮಾಣ ಗೊಂಡಿರುವ ಯಳಂದೂರು ತಾಲೂಕಿನ ಕೆಸ್ತೂರು ಸರ್ಕಾರಿ ಫ್ರೌಢಶಾಲೆಯ ಹೆಚ್ಚುವರಿ ನೂತನ ಕೊಠಡಿ ಹಾಗೂ ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯಗಳ ಉದ್ಘಾಟನೆ ಕಾರ್ಯ ಕ್ರಮವನ್ನು ಫೆಬ್ರವರಿ 9 ರಂದು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಉಸ್ತುವರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗುವರು. ಸಂಸದ ಆರ್.ದ್ರುವನಾರಾಯಣ ಉದ್ಘಾಟನೆ ನೆರವೇರಿಸುವರು. ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಶಾಸಕರಾದ ಮರಿತಿಬ್ಬೇ ಗೌಡ, ಆರ್.ಧರ್ಮಸೇನ, ಸಂದೇಶ್ ನಾಗರಾಜು, ಕೆ.ಟಿ. ಶ್ರೀಕಂಠೇಗೌಡ, ಜಿಲ್ಲಾ ಪಂಚಾ ಯಿತಿ ಉಪಾಧ್ಯಕ್ಷರಾದ ಜೆ.ಯೋಗೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ನಿರಂಜನ್, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರುಗದಮಣಿ, ಸದಸ್ಯರಾದ ಉಮಾವತಿ ಸಿದ್ದರಾಜು, ತಾಪಂ ಉಪಾಧ್ಯಕ್ಷರಾದ ಮಲ್ಲಾಜಮ್ಮ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಸದಸ್ಯರಾದ ಪುಟ್ಟುಕುಮಾರ್, ಪಲ್ಲವಿ ಮಹೇಶ್, ಗ್ರಾಪಂ ಅಧ್ಯಕ್ಷರಾದ ಸರಿತಾರಾಜು, ಉಪಾಧ್ಯಕ್ಷರಾದ ಜೆ.ರಂಗಸ್ವಾಮಿ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ಜಿಲ್ಲಾ ಯೋಜನಾ ಉಪಸಮನ್ವಯಾ ಧಿಕಾರಿಯಾದ ಸಿ.ಎನ್.ರಾಜು, ಕ್ಷೇತ್ರ ಶಿಕ್ಷಣಧಿಕಾರಿ ವಿ.ತಿರುಮಲಾಚಾರಿ, ಕ್ಷೇತ್ರ ಸಮನ್ವ ಯಾಧಿಕಾರಿಯಾದ ಆರ್.ಮಹೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

Translate »