ಈದ್ಗಾ, ಖಬರಸ್ತಾನ್‍ಗೆ ಪರ್ಯಾಯ ಜಮೀನು ನೀಡಲು ಮುಸ್ಲಿಂ ಸಮುದಾಯದ ಮುಖಂಡರ ಆಗ್ರಹ
ಹಾಸನ

ಈದ್ಗಾ, ಖಬರಸ್ತಾನ್‍ಗೆ ಪರ್ಯಾಯ ಜಮೀನು ನೀಡಲು ಮುಸ್ಲಿಂ ಸಮುದಾಯದ ಮುಖಂಡರ ಆಗ್ರಹ

February 7, 2019

ಅಂಗಡಿ ಮುಂಗ್ಗಟ್ಟು ಬಂದ್: 7ನೇ ದಿನವೂ ಮುಂದುವರೆದ ಧರಣಿ
ಹಾಸನ: ಹೊಸ ಈದ್ಗಾ ಹಾಗೂ ಖಬರಸ್ತಾನ್ ಜಮೀನಿಗೆ ಪರ್ಯಾಯವಾಗಿ ಜಮೀನು ನೀಡಬೇಕೆಂದು ಆಗ್ರಹಿಸಿ ನಡೆಸಲಾಗುತ್ತಿರುವ ಪ್ರತಿಭಟನೆ 7ನೇ ದಿನವೂ ಮುಂದುವರೆದೂ ಮುಸ್ಲಿಂ ಸಮುದಾಯದ ಅಂಗಡಿ ಮುಗ್ಗಟ್ಟು ಬಂದ್ ಮಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಅನಿರ್ದಿಷ್ಟಾವಧಿ ಪ್ರತಿಭಟನೆ ಯನ್ನು ತೀವ್ರಗೊಳಿಸಿದರು.
ಹುಣಸಿನಕೆರೆ ಬಳಿ ಇರುವ ಹೊಸ ಈದ್ಗಾ ಮೈದಾನದ ಮುಂದೆ ರಸ್ತೆಯಲ್ಲಿ ಟೆಂಟು ಹಾಕಿ ಮುಸ್ಲಿಂ ಬಾಂಧವರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾ ಗುತ್ತಿರುವ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಮತ್ತು ತಹಸೀಲ್ದಾರ್ ಶ್ರೀನಿ ವಾಸಯ್ಯ ಭೇಟಿ ನೀಡಿ ಪ್ರತಿಭಟನಾಕಾರರ ಬೇಡಿಕೆಯನ್ನು ಆಲಿಸಿದರು.

ಹುಣಸಿನಕೆರೆ ಬಳಿ ಇರುವ ಸರ್ವೆ ನಂ. 376/2 ಮತ್ತು 376/3 ರಲ್ಲಿ ಸುಮಾರು 3 ಎಕರೆ ಜಮೀನು ಈದ್ಗಾ ಹಾಗೂ ಖಬರ ಸ್ತಾನ್‍ಗೆ ಸೇರಿದೆ. ಈ ಜಾಗವನ್ನು ಅಬ್ದುಲ್ ಕಲಾಂ (80 ಅಡಿ ರಸ್ತೆ) ರಸ್ತೆಗೆ ವಶಪಡಿಸಿ ಕೊಳ್ಳಲಾಗಿದೆ. ಈ ಜಮೀನಿಗೆ ಪರ್ಯಾಯ ವಾಗಿ ಜಮೀನು ನೀಡು ವಂತೆ ಹಲವು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿ ಕಾರಿಗಳಿಗೆ ಹಾಗೂ ಹುಡಾ ಕಮಿಷ್ನರ್ ಗಳಿಗೆ, ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಜಮೀನು ಸ್ಥಳದಲ್ಲಿ ರಸ್ತೆ ಕಾಮಗಾರಿ ಗಳನ್ನು ಮುಂದುವರೆಸಿದ್ದು, ಪರ್ಯಾಯ ವಾಗಿ ಇದುವರೆಗೂ ಈದ್ಗಾ ಹಾಗೂ ಖಬರಸ್ತಾನ್‍ಗೆ ಜಾಗವನ್ನು ನೀಡಿರುವು ದಿಲ್ಲ. ಹಾಸನ ನಗರದಲ್ಲಿ ಎಲ್ಲಾ ಪ್ರದೇಶದಲ್ಲೂ ಮುಸ್ಲಿಮರು ನೆಲೆಸಿದ್ದು, ಖಬ್ರಸ್ಥಾನ್ ಮತ್ತು ಈದ್ಗಾ ಒಂದೇ ಆಗಿರುವುದರಿಂದ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಹಾಸನದಲ್ಲಿಯೇ ಸುಮಾರು 50 ಸಾವಿರಕ್ಕೂ ಹೆಚ್ಚು ಮುಸ್ಲಿಂ ಜನರಿದ್ದಾರೆ. ರಂಜಾನ್, ಬಕ್ರೀದ್, ಮೀಲಾದ್ ಮತ್ತು ಇನ್ನಿತರೆ ಧಾರ್ಮಿಕ ಸಭೆ ಸಮಾರಂಭ ಗಳು ಇಲ್ಲಿ ನಡೆಯುತ್ತದೆ. ಜೊತೆಗೆ ಮುಸ್ಲಿಮರ ಶವಸಂಸ್ಕಾರಗಳು ಇಲ್ಲಿಯೇ ನಡೆಯುತ್ತಿದ್ದು, ಭರ್ತಿ ಆಗುವ ಹಂತಕ್ಕೆ ತಲುಪಿದೆ. ನಗರ ಪರಿಮಿತಿಯಲ್ಲಿ ಕನಿಷ್ಟ 5 ಎಕರೆ ಜಮೀನನ್ನು ಈದ್ಗಾ ಹಾಗೂ ಖಬರ ಸ್ತಾನ್‍ಗಾಗಿ ಮಂಜೂರು ಮಾಡಿ ಕೊಡ ಬೇಕು ಎಂದು ಮನವಿ ಮಾಡಿದರು.

ನಮ್ಮ ಮನವಿಯನ್ನು ಪುರಸ್ಕರಿಸದಿದ್ದರೆ ಅಬ್ದುಲ್ ಕಲಾಂ ರಸ್ತೆ ಕಾಮಗಾರಿ ನಿಲ್ಲಿಸಲಾಗುವುದು. ನಮ್ಮ ಪ್ರತಿಭಟನೆ ಭೂಮಿಯ ಪರ್ಯಾಯವಾಗಿ ನೀಡುವ ವರೆಗೂ ರಸ್ತೆ ಅಭಿವೃದ್ಧಿ ಕೆಲಸಕ್ಕೆ ಅವಕಾಶ ಕೊಡುವುದಿಲ್ಲ. ಅನಿರ್ದಿಷ್ಟಾವಧಿ ಪ್ರತಿ ಭಟನೆ ಮುಂದುವರೆಸುವುದಾಗಿ ಎಚ್ಚರಿಸಿ ದರು. ಗುರುವಾರದ ಧರಣಿಯಲ್ಲಿ ಸಾವಿ ರಾರು ಜನ ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು. ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಪ್ರತಿಭಟನೆಯಲ್ಲಿ ಹೊಸ ಈದ್ಗಾ ಕಮಿಟಿ ಅಧ್ಯಕ್ಷ ಅಶ್ವಾಖ್, ಎಸ್.ಡಿ.ಪಿ.ಐ. ಸಂಘಟನೆಯ ಫೈರೋಜ್ ಪಾಷ, ಜೆಡಿಎಸ್ ಪಕ್ಷದ ಸೈಯಾದ್ ಅನ್ಸರ್, ಅಮಾ ನುಲ್ಲಾ ಜಾವೀದ್, ಮುಬ್ಬಷಿರ್ ಅಹಮದ್, ರಿಯಾಜ್, ಫಜಲುಲ್ಲಾ ಖಾನ್, ಅಮೀರ್ ಜಾನ್, ನಜೀರ್ ಅಹಮದ್, ಹಾರೂನ್ ಪಾಷ, ನಸೀರ್
ಹಸೀನ್, ಇಮಾಯರ್ ಇತರರು ಭಾಗವಹಿಸಿದ್ದರು.

Translate »