ಇಬ್ಬೀಡು ಗ್ರಾಪಂನಿಂದ ಫಲಾನುಭವಿಗಳಿಗೆ ಹೊಲಿಗೆಯಂತ್ರ, ಸೈಕಲ್ ವಿತರಣೆ
ಹಾಸನ

ಇಬ್ಬೀಡು ಗ್ರಾಪಂನಿಂದ ಫಲಾನುಭವಿಗಳಿಗೆ ಹೊಲಿಗೆಯಂತ್ರ, ಸೈಕಲ್ ವಿತರಣೆ

February 7, 2019

ಬೇಲೂರು: ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯಿತಿಯಿಂದ ಪ್ರಸಕ್ತ ಸಾಲಿನ ಶೇ. 5ರ ಅನುದಾನದಡಿ 6 ಜನ ನಿರುದ್ಯೋಗಿ ಯುವತಿಯರಿಗೆ ಹೊಲಿಗೆ ಯಂತ್ರ ಹಾಗೂ ಅಂಗವಿಕಲ ರಿಗೆ ಮೂರು ಚಕ್ರದ ಸೈಕಲ್ ವಿತರಿಸಲಾ ಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಿನಮಣಿ ಹೇಳಿದರು.

ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಸೈಕಲ್ ಹಾಗೂ ಯುವತಿಯರಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ ಅವರು, ಶೇ. 5ರ ವಿಕಲಚೇತನರ ಅನುದಾನದಡಿ ಅಂಗವಿಕಲ ರಿಗೆ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು 6 ಜನರಿಗೆ ಮೂರು ಚಕ್ರದ ಸೈಕಲ್ ಹಾಗೂ ನಿರು ದ್ಯೋಗಿ ಯುವತಿಯರಿಗೆ 6 ಹೊಲಿಗೆ ಯಂತ್ರ ವಿತರಿಸಲಾಗಿದೆ. ಯುವತಿಯರು ಸ್ವಯಂ ವೃತ್ತಿ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.

ಗ್ರಾಪಂ ವ್ಯಾಪ್ತಿಯ ಇಬ್ಬೀಡು ಮತ್ತು ಇಬ್ಬೀಡು ಕಾಲೋನಿ, ಸಂಕೇನಹಳ್ಳಿ, ಅಜ್ಜೇನಹಳ್ಳಿ ಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಇದರ ಪರಿಹಾರಕ್ಕೆ ಖಾಸಗಿ ಬೋರ್‍ಗಳಿಂದ ನೀರನ್ನು ಪೂರೈಸಲು ಕ್ರಮವಹಿಸಲಾಗು ವುದು. ಕುಡಿಯುವ ನೀರಿಗೆ ಶಾಶ್ವತ ಪರಿ ಹಾರ ಕಂಡುಕೊಳ್ಳಲು ಯಗಚಿ ನದಿಯಿಂದ ನೀರು ಸರಬರಾಜು ಮಾಡುವಂತೆ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯ ಕುಮಾರ್, ಸದಸ್ಯರಾದ ಮೋಹನ್, ಸರಿತಾ, ಮಂಜಮ್ಮ, ಜಯಣ್ಣ, ವೆಂಕಟೇಶ್, ಚಂದ್ರ ಕಲಾ, ಪೂರ್ಣೇಶ್, ಶಶಿಕಲಾ, ಪಾರ್ವತಮ್ಮ, ನಳಿನಾಕ್ಷಿ, ಬಸವೇಗೌಡ, ಸೋಮಣ್ಣ, ಪಿಡಿಓ ಸಿ.ಕೆ.ಸರಸ್ವತಿ, ಕಾರ್ಯದರ್ಶಿ ದೇವರಾಜ್ ಹಾಜರಿದ್ದರು.

Translate »