ಗಾಂಧೀಜಿ ತತ್ವ, ಸರಳತೆ ಸರ್ವಕಾಲಿಕ: ಪ್ರಸನ್ನಕುಮಾರ್ ಸುರೆ
ಹಾಸನ

ಗಾಂಧೀಜಿ ತತ್ವ, ಸರಳತೆ ಸರ್ವಕಾಲಿಕ: ಪ್ರಸನ್ನಕುಮಾರ್ ಸುರೆ

February 7, 2019

ಅರಸೀಕೆರೆ: ಜಗತ್ತು ಕಂಡ ಶ್ರೇಷ್ಠ ಚಿಂತಕ, ನುಡಿದಂತೆ ನಡೆದು ವಿಶ್ವಕ್ಕೆ ಆದರ್ಶಪ್ರಾಯರಾದ ಗಾಂಧೀಜಿ ಅವರ ಸರಳತೆ ಹಾಗೂ ತತ್ವಗಳು ಸರ್ವ ಕಾಲಿಕವಾಗಿವೆ ಎಂದು ಶಿಕ್ಷಕ ಪ್ರಸನ್ನ ಕುಮಾರ್ ಸುರೆ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಬಾಣಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್ ಎಸ್ ಘಟಕದಿಂದ ಚಿಕ್ಕೂರು ಗ್ರಾಮದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ ದಲ್ಲಿ ‘ಗಾಂಧೀ ಮತ್ತು ಗ್ರಾಮೀಣಾಭಿ ವೃದ್ಧಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಾಂಧೀಜಿ ಅವರ ವಿಚಾರಧಾರೆಗಳ ಅಧ್ಯ ಯನದಿಂದಲೇ ಅನೇಕರ ಮನ ಪರಿವರ್ತನೆ ಯಾಗುತ್ತದೆ. ಪ್ರಾಮಾಣಿಕತೆ, ಅಹಿಂಸೆ, ಸತ್ಯ. ಮಾನವೀಯ ಮೌಲ್ಯಗಳು ಮನೆ ಮಾಡು ತ್ತವೆ. ರಾಷ್ಟಪಿತ, ಅಹಿಂಸವಾದಿ ಮಹಾತ್ಮ ಗಾಂಧೀಜಿ ಅವರ ಜೀವನ ಚರಿತ್ರೆ ಹಾಗೂ ಆದರ್ಶಗಳನ್ನು ಇಂದಿನ ಯುವಕರು ಅರಿತು ಅಹಿಂಸಾ ಮಾರ್ಗದಲ್ಲಿ ನಡೆದು ಸರ್ವ ಧರ್ಮ ಸಮನ್ವಯತೆನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೈಜ್ಞಾನಿಕ ದೃಷ್ಟಿಕೋನವನ್ನಿಟ್ಟು ಕೊಂಡು ಸತ್ಯಾನೇಷಣೆ ಮಾಡುವ ಗಾಂಧೀಜಿ ಅವರ ವಿಚಾರಧಾರೆ ಅದ್ಭುತ ವಾದದ್ದು. ಆಧುನಿಕ ಯುಗದ ನೂತನ ತಂತ್ರಜ್ಞಾನಗಳಿಗೆ ಗಾಂಧೀಜಿ ಅವರ ಕಲ್ಪನೆUಳು ಪೂರಕವಾಗಿದೆ. ಆರೋಗ್ಯ ಸೇವೆ, ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾ ವಣೆಗಳು ಹಾಗೂ ಹೊಸ ಆಯಾಮ ಗಳನ್ನು ಗಾಂಧೀಜಿ ಅವರ ಚಿಂತನೆಯಲ್ಲಿ ಕಾಣುತ್ತಿವೆ. ಗ್ರಾಮಗಳಿಂದ ಪಟ್ಟಣಗಳಿಗೆ ಹೋಗುವ ಸಂಖ್ಯೆ ಬೆಳೆಯುತ್ತಿದೆ. ಆದರೆ, ಅದರಿಂದಾಗುವ ದುಷ್ಟರಿಣಾಮ ಗಳು ಈಗಾಗಲೇ ಕಾಣಲು ಪ್ರಾರಂಭವಾಗಿವೆ. ಈ ಸಮಸ್ಯೆಗೆ ಪರಿಹಾರ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಕಲ್ಪನೆಯಲ್ಲಿ ಅಡಗಿದೆ ಎಂದು ತಿಳಿಸಿದರು.
ಗಾಂಧೀಜಿಯ ವಸುದೈವ ಕುಟುಂಬ ಚಿಂತನೆ ಇಂದಿಗೂ ಹೆಚ್ಚು ಪ್ರಸ್ತುತವಾಗಿದೆ.

ಗ್ರಾಮಗಳು ಬಲಿಷ್ಠವಾದರೆ ದೇಶ ಬಲಿಷ್ಠ ವಾಗುತ್ತದೆ. ಹಳ್ಳಿಗಳೇ ದೇಶದ ಬೆನ್ನೆ ಲುಬು ಎಂದು ಬಲವಾಗಿ ಗಾಂಧೀಜಿ ನಂಬಿದ್ದÀರು. ಸರಳತೆ, ಸ್ವಚ್ಛತೆ, ಸ್ವಾಭಿಮಾನ, ದೇಶಪ್ರೇಮ ಅವರ ಜೀವನದ ಸಂದೇಶ ಗಳಾಗಿದ್ದವು. ಗ್ರಾಮೀಣ ಭಾಗದಲ್ಲಿ ಉದ್ಯೋಗ ಹೆಚ್ಚುವ ಜೊತೆಗೆ ಮಾರುಕಟ್ಟೆ ಸೌಲಭ್ಯಗಳು ದೊರೆಯುಂತಾಗಬೇಕು. ಗ್ರಾಮೀಣ ಜನರಿಗೆ ರಾಜಕೀಯ ಶಕ್ತಿ, ಆರ್ಥಿಕ ಶಕ್ತಿ ಸೌಲಭ್ಯಗಳು ದೊರೆತು ಯಂತ್ರ ನಾಗರಿಕತೆಯ ಸ್ಥಾನದಲ್ಲಿ ಗೃಹಕೈಗಾರಿಕೆ ಹೆಚ್ಚಬೇಕು. ಆಗ ಮಾತ್ರ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಲೋಕೇಶ್ ಕುಮಾರ್ ಮಾತನಾಡಿ, ಆಧುನಿಕ ಯುಗದಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶಗಳು ಇಂದಿನ ಯುವಕರಿಗೆ ದಾರಿ ದೀಪವಾಗಬೇಕು. ಅವರ ಗ್ರಾಮ ಸ್ವರಾಜ್ ಚಿಂತನೆ ಇಂದಿನ ಸಮಸ್ಯೆಗಳಿಗೆ ಪರಿಹಾರ ನೀಡುವ ದಿವ್ಯ ಔಷಧವಿದ್ದಂತೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಿ.ಬಿ. ಚನ್ನಬಸಪ್ಪ, ಶಿಬಿರಾಧಿಕಾರಿ ಎಂ.ಸತೀಶ್, ವಕೀಲರಾದ ಕಲ್ಯಾಣಕುಮಾರ್, ಸಿದ್ಧಮಲ್ಲಪ್ಪ ಚಿಕ್ಕೂರು ಗ್ರಾಮಸ್ಥರು ಉಪಸ್ಥಿತರಿದ್ದರು.

Translate »