ಕೊಳ್ಳೇಗಾಲ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನಾಲ್ಕು ಮನೆ ಗಳು ಸಂಪೂರ್ಣ ಜಖಂಗೊಂಡಿದ್ದು, ಮನೆ ಯಲ್ಲಿದ್ದ ಲಕ್ಷಾಂತರ ಮೌಲ್ಯದ ಸಾಮಗ್ರಿ ಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮ ವಾಗಿರುವ ದುರ್ಘಟನೆ ಬುಧವಾರ ರಾತ್ರಿ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಪಾಳ್ಯ ಗ್ರಾಮದ ವೆಂಕಟನಾಯಕ, ನಾಗ ಮಣಿ, ವೆಂಕಟಮ್ಮ ಹಾಗೂ ಪುಟ್ಟಮಾದಮ್ಮ ಎಂಬುವರಿಗೆ ಸೇರಿದ ಮನೆಗಳು ಸಿಲಿಂಡರ್ ಸ್ಫೋಟದಿಂದಾಗಿ ಜಖಂಗೊಂಡಿವೆÉ. ಮನೆಗ ಳಿಗೆ ಬೆಂಕಿ ವ್ಯಾಪಿಸಿದ್ದನ್ನು ಕಂಡ ಅಕ್ಕಪ ಕ್ಕದ ನಿವಾಸಿಗಳು ಸಹಾ ಜಾಗೃತರಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಜೊತೆ ಕೈಜೋಡಿಸುವ ಮೂಲಕ ಮುಂದಾಗುವ ಅನಾಹುತ ತಪ್ಪಿಸಿದ್ದಾರೆ.
ಗ್ರಾಮದ ವೆಂಕಟನಾಯಕ ಎಂಬು ವರು ಮನೆಯಲ್ಲಿ ಗ್ಯಾಸ್ ಸ್ಟವ್ ಹೊತ್ತಿಸು ತ್ತಿದ್ದಂತೆ ಸಿಲಿಂಡರ್ ಸ್ಪೋಟಗೊಂಡು ಬಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂ ಡಿದೆ. ಗೋಡೆಯ ಬದಿಯಲ್ಲಿ ಬೆಂಕಿಯಿಂದ ತಪ್ಪಿಸಿಕೊಂಡ ಅವರನ್ನು ಸ್ಥಳೀಯರು ರಕ್ಷಿಸಿ ದ್ದಾರೆ. ಬೆಂಕಿ ತಕ್ಷಣ ನಾಗಮಣಿ, ವೆಂಕ ಟಮ್ಮ ಹಾಗೂ ಪುಟ್ಟಮಾದಮ್ಮ ಅವರ ಮನೆಗಳಿಗೂ ವ್ಯಾಪಿಸಿದೆ. ಸ್ಥಳೀಯರು ಕೂಡಲೆ ಅಗ್ನಿಶಾಮಕ ಠಾಣೆಗೆ ವಿಚಾರ ಮುಟ್ಟಿಸುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಬೆಂಕಿ ನಂದಿಸುವ ಮೂಲಕ ಮುಂದಾ ಗುವ ಅನಾಹುತ ತಪ್ಪಿಸಿದ್ದಾರೆ. ಘಟ ನೆಯಿಂದ ನಾಲ್ಕು ಕುಟುಂಬಗಳ 11 ಮಂದಿ ಸದಸ್ಯರಿಗೂ ಯಾವುದೇ ಪ್ರಾಣಾಪಾಯವಾ ಗಿಲ್ಲ. ಅದೃಷ್ಠವಶಾತ್ ಎಲ್ಲರೂ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ ಹಾಗೂ ಕಂದಾಯ ಇಲಾ ಖೆಯ ಅಧಿಕಾರಿಗಳು, ವೃತ್ತ ನಿರೀಕ್ಷಕ ಶ್ರೀಕಾಂತ್, ಸಬ್‍ಇನ್ಸ್‍ಪೆಕ್ಟರ್ ವನರಾಜು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.