ಬಂಡೀಪುರದಲ್ಲಿ ಅಕಾಲಿಕ  ಮಳೆ: ಕಾಡ್ಗಿಚ್ಚು ಆತಂಕ ದೂರ
ಚಾಮರಾಜನಗರ

ಬಂಡೀಪುರದಲ್ಲಿ ಅಕಾಲಿಕ ಮಳೆ: ಕಾಡ್ಗಿಚ್ಚು ಆತಂಕ ದೂರ

February 10, 2019

ಗುಂಡ್ಲುಪೇಟೆ: ಹಲವು ತಿಂಗಳಿಂದ ಮಳೆ ಇಲ್ಲದೆ ಒಣಗಿದ್ದ ಬಂಡೀಪುರ ಅಭ್ಯ ಯಾರಣ್ಯಕ್ಕೆ ಮಳೆರಾಯ ಇಂದು ತಂಪೆರೆದಿದ್ದು, ಕಾಡ್ಗಿಚ್ಚು ಆತಂಕ ಕೊಂಚ ದೂರಾಗಿದೆ.

ಬಂಡೀಪುರ ಅರಣ್ಯವಾಪ್ತಿಯ ಕಾಡು ಹಲವು ತಿಂಗಳಿಂದ ಮಳೆ ಇಲ್ಲದೆ ಒಣಗಿತ್ತು. ಇಂದು ಮಧ್ಯಾಹ್ನ ಸುರಿದ ಅಕಾಲಿಕ ಮಳೆಯಿಂದ ಕೊಂಚ ಇಳೆ ತಣಿದಿದೆ. ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಮಳೆ ಸುರಿದಿದ್ದು, ಬಿಸಿಲಿನ ತಾಪದಿಂದ ಬಸವಳಿದಿದ್ದ ವನ್ಯ ಜೀವಿಗಳು ನಿಟ್ಟುಸಿರು ಬಿಟ್ಟಿವೆ.

ಇಂದು ಮಧ್ಯಾಹ್ನ ಬಿರು ಬಿಸಿಲಿನ ನಡುವೆಯೂ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ಸ್ಥಳ ದಮ್ಮನಕಟ್ಟೆ ಅರಣ್ಯ ಪ್ರದೇಶದ ಸುತ್ತಮುತ್ತ ಮಳೆ ಆಗಿದೆ. ಮಳೆಯಿಂದ ಬೇಸಿಗೆಯಲ್ಲಿ ಕಾಡಿನಲ್ಲಿ ಉಂಟಾಗುವ ಕಾಡ್ಗಿಚ್ಚು ತಡೆಯಲು ಅನುಕೂಲವಾಗುವ ಜೊತೆಗೆ ಪ್ರಾಣಿ-ಪಕ್ಷಿಗಳಿಗೂ ನೀರಿನ ದಾಹ ತಣಿಯಲಿದೆ. ಈ ವೇಳೆ ಸಫಾರಿಗೆ ಆಗಮಿಸಿದ್ದ ಪ್ರವಾಸಿಗರು ಮಳೆಯಲ್ಲೇ ಸಫಾರಿ ನಡೆಸಿ ಖುಷಿ ಪಟ್ಟರು.

Translate »