ಚಾಮರಾಜನಗರ: ಮಗನ ಆರೋಗ್ಯಕ್ಕಾಗಿ ಪ್ರಾರ್ಥಿಸಿಕೊಳ್ಳಲು ಮಾರಮ್ಮನ ದೇವಸ್ಥಾನಕ್ಕೆ ತೆರಳಿದ್ದ ತಾಯಿ ಮತ್ತೆ ಬಂದದ್ದು ಶವವಾಗಿ. ಇಂದು ಮೃತರಾದ ಸಾಲಮ್ಮ ಸಾವಿನ ಹಿಂದೆ ಮಗನ ಆರೋಗ್ಯದ ಹರಕೆಯ ಸಂಗತಿ ಅಡಗಿದೆ. ಸಾಲಮ್ಮನ ಮಗ ವೆಟ್ರಿವೇಲು ಕಾಲು ಊತ, ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿದ್ದು, ಈ ಸಮಸ್ಯೆಯಿಂದ ತನ್ನ ಮಗನನ್ನು ಕಾಪಾಡು ಮಾರಮ್ಮ ಎಂದು ಬೇಡಿಕೊಳ್ಳಲು ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಸ್ಥಾನಕ್ಕೆ ಸಾಲಮ್ಮ ತೆರಳಿದ್ದರು. ಈ ವೇಳೆ ಅಲ್ಲಿ ನೀಡಿದ ವಿಷ ಪ್ರಸಾದ ಸೇವಿಸಿ ಈಗ ಮೃತಪಟ್ಟಿದ್ದಾಳೆ. ತನ್ನ ತಾಯಿ…
ಬಿದರಹಳ್ಳಿ ಗ್ರಾಮಸ್ಥರ ಪ್ರತಿಭಟನೆ
December 17, 2018ಹನೂರು: ಮೈಸೂರಲ್ಲಿ ಚಿಕಿತ್ಸೆ ಪಡೆಯುತ್ತಿರುವ 94ಮಂದಿ ಪೈಕಿ 45 ಮಂದಿ ಬಿದರಹಳ್ಳಿ ಯವರೇ ಆಗಿದ್ದಾರೆ. ಆಸ್ಪತ್ರೆಯಲ್ಲಿ ಸರಿ ಯಾದ ಚಿಕಿತ್ಸೆ ಸಿಗುತ್ತಿಲ್ಲ. ನೋಡಲು ಬಿಡು ತ್ತಿಲ್ಲಾ. ದಿನ ಸತ್ತವರ ಶವ ತರಲಾಗುತ್ತಿದೆ ಎಂದು ಭಾನುವಾರ ಬಿದರಹಳ್ಳಿ ಗ್ರಾಮ ಸ್ಥರು ಪ್ರತಿಭಟನೆ ನಡೆಸಿದರು. ಮೈಸೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಾಲಮ್ಮ ಸಾವಿಗೀಡಾಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸುಮಾರು 1 ಗಂಟೆ ಕಾಲ ಗ್ರಾಮಸ್ಥರು ಗ್ರಾಮದ ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು. ನಮ್ಮ ಗ್ರಾಮದಲ್ಲಿ ಸಾವಿನ ಸರಣಿ ಹೆಚ್ಚು ತ್ತಿದೆ. ಸರ್ಕಾರ ಆಸ್ಪತ್ರೆಯಲ್ಲಿರುವವರಿಗೆ ಸೂಕ್ತ…
ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ: ಸಚಿವ ಸಿ.ಎಸ್.ಪುಟ್ಟರಾಜು
December 17, 2018ಹನೂರು: ಯಾವುದೇ ಮುಲಾಜಿಲ್ಲದೇ ಆರೋಪಿ ಯಾವುದೇ ಪಕ್ಷದ ಪ್ರಭಾವಿಯಾಗಿದ್ದರೂ ಆತನನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ಹನೂರು ಕ್ಷೇತ್ರ ವ್ಯಾಪ್ತಿಯ ಬಿದರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಪರಿಸ್ಥಿತಿ ಅವಲೋಕನ ಮಾಡಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ತಪ್ಪಿಸ್ಥರ ಯಾರೇ ಆಗಿರಲ್ಲಿ ಯಾವುದೇ ಪಕ್ಷದವರು ಆಗಿರಲಿ ಪ್ರಭಾವಿಗಳು ಆಗಿದ್ದರೂ ಸಹ ಕ್ರಮಕೈಗೊಳ್ಳು ವಂತೆ ಪೆÇಲೀಸ್ ಇಲಾಖೆಗೆ ಆದೇಶ ನೀಡಿದ್ದಾರೆ….
ಆನೆ ತುಳಿದು ರೈತ ಸಾವು
December 17, 2018ಚಾಮರಾಜನಗರ: ರೈತನೋರ್ವನನ್ನು ಆನೆ ತುಳಿದು ಸಾಯಿಸಿರುವ ಘಟನೆ ಗಡಿ ಭಾಗವಾದ ಮಾದಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಪ್ರಭುಸ್ವಾಮಿ (62) ಮೃತ ರೈತ. ಜಮೀನಿನಲ್ಲಿ ಜೋಳ ಮತ್ತು ರಾಗಿಯನ್ನು ಪ್ರಭುಸ್ವಾಮಿ ಬೆಳೆದಿದ್ದರು. ಕಾಡು ಹಂದಿಗಳ ದಾಳಿ ತಪ್ಪಿಸಿ ಬೆಳೆಯನ್ನು ರಕ್ಷಿಸಿಕೊಳ್ಳಲು ಕಾವಲು ಕಾಯುತ್ತಿದ್ದರು. ಈ ವೇಳೆ ಆನೆ ದಾಳಿ ನಡೆಸಿ ಪ್ರಭುಸ್ವಾಮಿ ಅವರನ್ನು ತುಳಿದು ಸಾಯಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಕಬ್ಬಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ನಾಗರತ್ನಮ್ಮ ಆಯ್ಕೆ
December 17, 2018ಗುಂಡ್ಲುಪೇಟೆ: ತಾಲೂಕಿನ ಕಬ್ಬಹಳ್ಳಿ ಗ್ರಾಮ ಪಂಚಾ ಯಿತಿ ಹಿಂದಿನ ಅಧ್ಯಕ್ಷ ಮಾದೇಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬ ಲಿತ ಅಭ್ಯರ್ಥಿ ನಾಗರತ್ನಮ್ಮ ಜಯಗಳಿಸಿದರು. ಗ್ರಾಮ ಪಂಚಾಯಿತಿಯು 14 ಸದಸ್ಯರ ಬಲ ಹೊಂದಿದ್ದು, 8 ಮಂದಿ ಕಾಂಗ್ರೆಸ್ ಹಾಗೂ 6 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಕಾಂಗ್ರೆಸ್‍ನಿಂದ ಮಂಜುಳಾ ಮತ್ತು ಬಿಜೆಪಿಯಿಂದ ನಾಗರತ್ನಮ್ಮ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಸದಸ್ಯರೊಬ್ಬರು ತಮ್ಮ ಮತ ವನ್ನು ಬಿಜೆಪಿ ಅಭ್ಯರ್ಥಿಗೆ ನೀಡಿದ್ದರಿಂದ ನಾಗರತ್ನಮ್ಮ ಜಯಗಳಿಸಿದರು. ಮತ್ತೊಬ್ಬ…
ಬೈಕ್‍ಗಳ ನಡುವೆ ಡಿಕ್ಕಿ: ಇಬ್ಬರ ಸಾವು
December 17, 2018ಬೇಗೂರು: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‍ಸವಾರರಿಬ್ಬರೂ ಸ್ಥಳದಲ್ಲೇ ಸಾವಿಗೀಡಾದ ಘಟನೆ ಸಮೀಪದ ಗರಗನಹಳ್ಳಿ ಗೇಟ್ ಬಳಿ ಭಾನುವಾರ ನಡೆದಿದೆ.ಕೋಡಹಳ್ಳಿ ಗ್ರಾಮದ ಮಣಿಕಂಠ(26) ಮತ್ತು ಕೇರಳದ ಜಾಫರ್(28) ಮೃತಪಟ್ಟವರು. ವಿವರ: ಮೈಸೂರು ಕಡೆಯಿಂದ ಕೋಡಹಳ್ಳಿಗೆ ತೆರಳುತ್ತಿದ್ದ ಬೈಕ್(ಕೆಎ10-ಎಲ್5905), ಗುಂಡ್ಲುಪೇಟೆ ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಬೈಕ್(ಎಂಪಿ-04-ವೈ9271) ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಮಣಿಕಂಠ ಮತ್ತು ಜಾಫರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಅಸ್ತವ್ಯಸ್ತ : ಗರಗನಹಳ್ಳಿ ಗೇಟ್ ಬಳಿ…
ಗೋಪುರ ಶಂಕುಸ್ಥಾಪನೆಗೆ ಬಂದವರು ಸ್ಮಶಾನ ಸೇರಿದರು…!
December 15, 2018ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸುಳ ವಾಡಿ ಕುಚ್‍ಗುತ್ ಮಾರಮ್ಮನ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಮಾರಂಭದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಪ್ರಸಾದ ಸೇವಿಸಿದವರಲ್ಲಿ 13ಕ್ಕೂ ಹೆಚ್ಚು ಮಂದಿ ಸಾವ ನ್ನಪ್ಪಿ, 70ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಸುಳವಾಡಿ ಕಿಚ್‍ಗುತ್ ದೇವಸ್ಥಾನವು ಮಾರ್ಟಳ್ಳಿ ಸಮೀಪ ಕಾಡಂಚಿನಲ್ಲಿದ್ದು, ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ದೇವಸ್ಥಾನ ನಿರ್ವಹಣೆಗೆ ಟ್ರಸ್ಟ್‍ವೊಂದನ್ನೂ ಕೂಡ ರಚಿಸಿಕೊಳ್ಳಲಾಗಿದ್ದು, ದೇವಾಲಯವು ಅಭಿವೃದ್ಧಿ ಹೊಂದುತ್ತಿದೆ. ಈ ದೇವಸ್ಥಾನಕ್ಕೆ ಗೋಪುರ ನಿರ್ಮಿಸ ಬೇಕೆಂಬ ಉದ್ದೇಶದಿಂದ…
ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ‘ಷಷ್ಠಿ’ ಆಚರಣೆ
December 14, 2018ಹುತ್ತಕ್ಕೆ ಕೋಳಿ ರಕ್ತ, ಮೊಟ್ಟೆ ನೈವೇದ್ಯ, ಎಲ್ಲೆಡೆ ನಾಗರಾಧನೆ, ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ ಚಾಮರಾಜನಗರ: ಜಿಲ್ಲಾದ್ಯಂತ ಗುರುವಾರ ಸುಬ್ರಹ್ಮಣ್ಯ ಷಷ್ಠಿಯನ್ನು ಶ್ರದ್ಧೆ, ಭಕ್ತಿಯಿಂದ ಆಚ ರಿಸಲಾಯಿತು. ಷಷ್ಠಿ ಹಬ್ಬ (ತನಿಹಬ್ಬ)ದಂದು ಹುತ್ತಕ್ಕೆ ಹಾಲೆರೆದು ನಾಗಪೂಜೆ ಮಾಡುವುದು ಸಾಮಾನ್ಯ. ಆದರೆ, ಜಿಲ್ಲೆಯ ವಿವಿಧೆಡೆ ಹುತ್ತಕ್ಕೆ ಕೋಳಿ ಬಲಿಕೊಟ್ಟು, ಕೋಳಿ ರಕ್ತ ಹಾಗೂ ಕೋಳಿ ಮೊಟ್ಟೆ ಹಾಕಿ ನಾಗ ರಾಧನೆ ಮಾಡಿದ್ದು ವಿಶೇಷವಾಗಿತ್ತು. ಚಾಮರಾಜನಗರ ತಾಲೂಕಿನ ಮಲ್ಲ ಯ್ಯನಪುರ, ಉತ್ತುವಳ್ಳಿ, ಚಂದಕವಾಡಿ, ದಡದಹಳ್ಳಿ, ಅಯ್ಯನಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ…
ಹಸುಗಳ ಕಳವು ಮಾಡುತ್ತಿದ್ದ ಆರೋಪಿ ಬಂಧನ 4 ಲಕ್ಷ ಮೌಲ್ಯದ 11 ಹಸು, 3 ಕರು ವಶ
December 14, 2018ಚಾಮರಾಜನಗರ: ಹಸುಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ರಾಮಸಮುದ್ರ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿ ಯಿಂದ 4 ಲಕ್ಷ ಮೌಲ್ಯದ 11 ಹಸು ಹಾಗೂ 3 ಕರುಗಳನ್ನು ವಶ ಪಡಿಸಿಕೊಂಡಿದ್ದಾರೆ. ನಗರದ ಶಫಿಉಲ್ಲಾ ಶರೀಫ್ ಬಂಧಿತ ಆರೋಪಿ. ಚಾಮರಾಜನಗರ, ಸೋಮವಾರಪೇಟೆ, ಮಲ್ಲಯ್ಯನಪುರ, ಮೂಡ್ಲುಪುರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹಸುಗಳ ಕಳ್ಳತನ ವಾಗುತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ…
ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ದಾಸ್ತಾನು: ಆರೋಪಿ ಬಂಧನ
December 14, 2018ಹನೂರು: ಅನ್ನ ಭಾಗ್ಯ ಅಕ್ಕಿಯನ್ನು ಅಕ್ರ ಮವಾಗಿ ದಾಸ್ತಾನು ಮಾಡಿದ್ದ ಚಿಲ್ಲರೆ ಅಂಗ ಡಿಯ ಮೇಲೆ ಅಧಿ ಕಾರಿಗಳು ದಾಳಿ ನಡೆಸಿ, ಅಕ್ಕಿಯನ್ನು ವಶಪ ಡಿಸಿಕೊಂಡ ಘಟನೆ ಸಮೀಪದ ಲೊಕ್ಕನ ಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಗೋಪಿ ಎಂಬುವರ ಚಿಲ್ಲರೆ ಅಂಗಡಿಯಲ್ಲಿ ಅನ್ನಭಾಗ್ಯದ ಅಕ್ಕಿ ಶೇಖರಿಸಿರುವ ಬಗ್ಗೆ ಬಂದ ಖಚಿತ ಮಾಹಿತಿಯೊಂದಿಗೆ ಆಹಾರ ನಿರೀಕ್ಷಕ ನಾಗರಾಜು ದಾಳಿ ನಡೆಸಿ, 24 ಚೀಲ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಅಂಗಡಿ ಮಾಲೀಕ ಗೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಮುಂದಿನ…