ಕಬ್ಬಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ನಾಗರತ್ನಮ್ಮ ಆಯ್ಕೆ
ಚಾಮರಾಜನಗರ

ಕಬ್ಬಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ನಾಗರತ್ನಮ್ಮ ಆಯ್ಕೆ

December 17, 2018

ಗುಂಡ್ಲುಪೇಟೆ: ತಾಲೂಕಿನ ಕಬ್ಬಹಳ್ಳಿ ಗ್ರಾಮ ಪಂಚಾ ಯಿತಿ ಹಿಂದಿನ ಅಧ್ಯಕ್ಷ ಮಾದೇಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬ ಲಿತ ಅಭ್ಯರ್ಥಿ ನಾಗರತ್ನಮ್ಮ ಜಯಗಳಿಸಿದರು.

ಗ್ರಾಮ ಪಂಚಾಯಿತಿಯು 14 ಸದಸ್ಯರ ಬಲ ಹೊಂದಿದ್ದು, 8 ಮಂದಿ ಕಾಂಗ್ರೆಸ್ ಹಾಗೂ 6 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಕಾಂಗ್ರೆಸ್‍ನಿಂದ ಮಂಜುಳಾ ಮತ್ತು ಬಿಜೆಪಿಯಿಂದ ನಾಗರತ್ನಮ್ಮ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.

ಕಾಂಗ್ರೆಸ್ ಸದಸ್ಯರೊಬ್ಬರು ತಮ್ಮ ಮತ ವನ್ನು ಬಿಜೆಪಿ ಅಭ್ಯರ್ಥಿಗೆ ನೀಡಿದ್ದರಿಂದ ನಾಗರತ್ನಮ್ಮ ಜಯಗಳಿಸಿದರು. ಮತ್ತೊಬ್ಬ ಕಾಂಗ್ರೆಸ್ ಸದಸ್ಯೆ ತಮ್ಮ ಮತಪತ್ರವನ್ನು ಎಲ್ಲರೆದುರು ಪ್ರದರ್ಶಿಸಿದ್ದು ಇದನ್ನು ಸ್ಥಳ ದಲ್ಲಿದ್ದವರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದು ಗೌಪ್ಯತೆಯನ್ನು ಕಾಪಾಡದ ಹಿನ್ನೆ ಲೆಯಲ್ಲಿ ಮತವನ್ನು ಗಣನೆಗೆ ತೆಗೆದು ಕೊಳ್ಳದಂತೆ ಪಟ್ಟು ಹಿಡಿದರು. ಈ ಹಿನ್ನೆ ಲೆಯಲ್ಲಿ ಬಿಜೆಪಿ ಬೆಂಬಲಿತೆ ನಾಗರತ್ನಮ್ಮ 7 ಮತಗಳನ್ನು ಪಡೆದು ಜಯಗಳಿಸಿದರು.

ಇದರಿಂದ ಕೆಲಕಾಲ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ವಾಗ್ವಾದ ನಡೆದು, ಕೈಕೈ ಮಿಲಾಯಿಸುವ ಹಂತ ತಲುಪಿತು. ಮತ ಎಣಿಕೆ ನಂತರ ಚುನಾ ವಣಾಧಿಕಾರಿಯಾಗಿ ಕಾರ್ಯನಿರ್ವಸಿದ್ದ ಲೋಕೋಪಯೋಗಿ ಇಲಾಖೆಯ ಎಇಇ ಚಂದ್ರಪ್ಪ ಅವರು ನಾಗರತ್ನಮ್ಮ ಅವರು ಜಯಗಳಿಸಿರುವುದಾಗಿ ಘೋಷಿಸಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಿ.ಭಾರತಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನಾಗರತ್ನಮ್ಮ ಅವರ ಗೆಲುವನ್ನು ಪ್ರಕಟಿಸಿದರು. ಕಳೆದ 25 ವರ್ಷಗಳಿಂ ದಲೂ ಕಾಂಗ್ರೆಸ್ ಹಿಡಿತದಲ್ಲಿದ್ದ ಆಡಳಿತ ಮಂಡಲಿಯನ್ನು ಈ ಬಾರಿ ಕೈವಶ ಮಾಡಿ ಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದ ರಿಂದ ಬಿಜೆಪಿ ಕಾರ್ಯಕರ್ತರು ವಿಜ ಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾ ಯಿತಿ ಸದಸ್ಯ ರೇವಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗಮಣಿ, ಸದಸ್ಯರಾದ ಕಲ್ಲಹಳ್ಳಿ ಮಹೇಶ್, ಬಸವರಾಜ ಸ್ವಾಮಿ, ಪುಟ್ಟರಾಜು, ಮಹದೇವಮ್ಮ, ಮುಖಂಡ ರಾದ ನಾಗರಾಜು, ಮಲ್ಲಣ್ಣ, ವೃಷಭೇಂದ್ರ, ಬಾಬು, ಬಸವರಾಜು, ಮೂರ್ತಿ ಇದ್ದರು.

Translate »