ಬೇಗೂರು: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‍ಸವಾರರಿಬ್ಬರೂ ಸ್ಥಳದಲ್ಲೇ ಸಾವಿಗೀಡಾದ ಘಟನೆ ಸಮೀಪದ ಗರಗನಹಳ್ಳಿ ಗೇಟ್ ಬಳಿ ಭಾನುವಾರ ನಡೆದಿದೆ.ಕೋಡಹಳ್ಳಿ ಗ್ರಾಮದ ಮಣಿಕಂಠ(26) ಮತ್ತು ಕೇರಳದ ಜಾಫರ್(28) ಮೃತಪಟ್ಟವರು.
ವಿವರ: ಮೈಸೂರು ಕಡೆಯಿಂದ ಕೋಡಹಳ್ಳಿಗೆ ತೆರಳುತ್ತಿದ್ದ ಬೈಕ್(ಕೆಎ10-ಎಲ್5905), ಗುಂಡ್ಲುಪೇಟೆ ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಬೈಕ್(ಎಂಪಿ-04-ವೈ9271) ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಮಣಿಕಂಠ ಮತ್ತು ಜಾಫರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಚಾರ ಅಸ್ತವ್ಯಸ್ತ : ಗರಗನಹಳ್ಳಿ ಗೇಟ್ ಬಳಿ ಸಂಜೆ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವಿಗೀಡಾದ ಕಾರಣ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಸುಮಾರು ಅರ್ಧಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬೇಗೂರು ಠಾಣೆಯ ಮತ್ತು ಗುಂಡ್ಲುಪೇಟೆ ಪೊಲೀಸ್ ಠಾಣೆಯ ಬಾಲಕೃಷ್ಣ ಮತ್ತು ಸಿಬ್ಬಂದಿವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.