ಹಸುಗಳ ಕಳವು ಮಾಡುತ್ತಿದ್ದ ಆರೋಪಿ ಬಂಧನ 4 ಲಕ್ಷ ಮೌಲ್ಯದ 11 ಹಸು, 3 ಕರು ವಶ
ಚಾಮರಾಜನಗರ

ಹಸುಗಳ ಕಳವು ಮಾಡುತ್ತಿದ್ದ ಆರೋಪಿ ಬಂಧನ 4 ಲಕ್ಷ ಮೌಲ್ಯದ 11 ಹಸು, 3 ಕರು ವಶ

December 14, 2018

ಚಾಮರಾಜನಗರ:  ಹಸುಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ರಾಮಸಮುದ್ರ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿ ಯಿಂದ 4 ಲಕ್ಷ ಮೌಲ್ಯದ 11 ಹಸು ಹಾಗೂ 3 ಕರುಗಳನ್ನು ವಶ ಪಡಿಸಿಕೊಂಡಿದ್ದಾರೆ.

ನಗರದ ಶಫಿಉಲ್ಲಾ ಶರೀಫ್ ಬಂಧಿತ ಆರೋಪಿ. ಚಾಮರಾಜನಗರ, ಸೋಮವಾರಪೇಟೆ, ಮಲ್ಲಯ್ಯನಪುರ, ಮೂಡ್ಲುಪುರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹಸುಗಳ ಕಳ್ಳತನ ವಾಗುತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ತಂಡ ಆರೋಪಿ ಪತ್ತೆಗೆ ಬಲೆ ಬೀಸಿತ್ತು.

ಈ ವೇಳೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮುತ್ತತ್ತಿ ಬಳಿಯ ಜಮೀನೊಂದರಲ್ಲಿ ಕಳವು ಮಾಡಿದ್ದ ಹಸುಗಳನ್ನು ಇರಿಸಲಾಗಿದೆ ಎಂದು ಮಾಹಿತಿ ದೊರಕಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು 11 ಹಸು ಹಾಗೂ 3 ಕರುಗಳನ್ನು ವಶಪಡಿಸಿಕೊಂಡಿ ದ್ದಾರೆ. ಆರೋಪಿ ಶಫಿಉಲ್ಲಾ ಶರೀಫ್ ಅನ್ನು ನ್ಯಾಯಾಲಕ್ಕೆ ಹಾಜರುಪಡಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕಾರ್ಯಾಚರಣೆ ಯಲ್ಲಿ ಗ್ರಾಮಾಂತರ ವೃತ್ತ ನೀರಿಕ್ಷಕ ಕೆ.ರಾಜೇಂದ್ರ, ಪೂರ್ವ ಪೊಲೀಸ್ ಠಾಣೆಯ ಪಿಎಸ್‍ಐ ಬಿ.ಪುಟ್ಟಸ್ವಾಮಿ, ಸಿಬ್ಬಂದಿಗಳಾದ ಸೈಯದ್ ಇಮ್ತಿಯಾಜ್ ಹುಸೇನ್, ಚಂದ್ರ, ನಿಂಗರಾಜು, ಜಗದೀಶ್, ಕುಮಾರಸ್ವಾಮಿ, ಮಹೇಶ್, ವೆಂಕಟೇಶ್, ಚಾಲಕರಾದ ರಾಜು, ಮಹೇಶ್ ಇತರರು ಪಾಲ್ಗೊಂಡಿದ್ದರು.

Translate »