ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ‘ಷಷ್ಠಿ’ ಆಚರಣೆ
ಚಾಮರಾಜನಗರ

ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ‘ಷಷ್ಠಿ’ ಆಚರಣೆ

December 14, 2018

ಹುತ್ತಕ್ಕೆ ಕೋಳಿ ರಕ್ತ, ಮೊಟ್ಟೆ ನೈವೇದ್ಯ, ಎಲ್ಲೆಡೆ ನಾಗರಾಧನೆ, ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ
ಚಾಮರಾಜನಗರ: ಜಿಲ್ಲಾದ್ಯಂತ ಗುರುವಾರ ಸುಬ್ರಹ್ಮಣ್ಯ ಷಷ್ಠಿಯನ್ನು ಶ್ರದ್ಧೆ, ಭಕ್ತಿಯಿಂದ ಆಚ ರಿಸಲಾಯಿತು.
ಷಷ್ಠಿ ಹಬ್ಬ (ತನಿಹಬ್ಬ)ದಂದು ಹುತ್ತಕ್ಕೆ ಹಾಲೆರೆದು ನಾಗಪೂಜೆ ಮಾಡುವುದು ಸಾಮಾನ್ಯ. ಆದರೆ, ಜಿಲ್ಲೆಯ ವಿವಿಧೆಡೆ ಹುತ್ತಕ್ಕೆ ಕೋಳಿ ಬಲಿಕೊಟ್ಟು, ಕೋಳಿ ರಕ್ತ ಹಾಗೂ ಕೋಳಿ ಮೊಟ್ಟೆ ಹಾಕಿ ನಾಗ ರಾಧನೆ ಮಾಡಿದ್ದು ವಿಶೇಷವಾಗಿತ್ತು.

ಚಾಮರಾಜನಗರ ತಾಲೂಕಿನ ಮಲ್ಲ ಯ್ಯನಪುರ, ಉತ್ತುವಳ್ಳಿ, ಚಂದಕವಾಡಿ, ದಡದಹಳ್ಳಿ, ಅಯ್ಯನಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹುತ್ತಕ್ಕೆ ಕೋಳಿ ರಕ್ತವನ್ನು ನೈವೇದ್ಯ ಮಾಡಲಾಯಿತು. ಹಬ್ಬದ ಅಂಗವಾಗಿ ಜಿಲ್ಲಾದ್ಯಂತ ಸುಬ್ರ ಹ್ಮಣ್ಯಸ್ವಾಮಿ ಸೇರಿದಂತೆ ಹಲವು ದೇವಾ ಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯಿತು.
ಬೆಳಿಗ್ಗೆಯಿಂದಲೇ ಜನರು ಹುತ್ತಗಳ ಬಳಿ ತೆರಳಿ ಹಾಲೆರೆದು, ನಾಗಪೂಜೆ ಮಾಡಿದ್ದರು. ಈ ಮೂಲಕ ತಮ್ಮ ಇಷ್ಟಾರ್ಥಗಳು ಈಡೇರಲಿ ಹಾಗೂ ಸರ್ಪಗಳಿಂದ ಯಾವುದೇ ತೊಂದರೆಗಳು ಆಗದಿರಲಿ ಎಂದು ಪ್ರಾರ್ಥಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಸಡಗರದ ತನಿಹಬ್ಬ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ `ತನಿ ಹಬ್ಬ’ದ ಸಡಗರ ಕಂಡುಬಂತು. ಹೊಸಬಟ್ಟೆ ಧರಿಸಿದ್ದ ಮಕ್ಕಳು, ಮಹಿಳೆ ಯರು ಬೆಳಿಗ್ಗೆಯೇ ಹೊಲಕ್ಕೆ ಪೂಜಾ ಸಾಮಗ್ರಿಗಳೊಂದಿಗೆ ನಾಟಿಕೋಳಿ ಹಾಗೂ ಮೊಟ್ಟೆ ಕೊಂಡೊಯ್ದು, ಹುತ್ತಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ನಮಸ್ಕರಿಸಿದರು. ಬಳಿಕ, ಕೋಳಿಯ ಕತ್ತು ಕೊಯ್ದು ರಕ್ತವನ್ನು ಹುತ್ತದ ಕೋವಿಗಳಿಗೆ ಬಿಟ್ಟರು. ನಂತರ ಮೊಟ್ಟೆ ಮತ್ತು ಬೆಳ್ಳಿ ಅಥವಾ ತಾಮ್ರದಿಂದ ಮಾಡಿದ ಪುಟ್ಟ ದಾದ `ನಾಗರಹೆಡೆ’ ಆಭರಣವನ್ನು ಕೋವಿನಲ್ಲಿ ಹಾಕಿದರು.

‘ಜಮೀನುಗಳಲ್ಲಿ ನಾಗರಹಾವು ಕಾಣಿಸಿ ಕೊಳ್ಳುವುದು ಸಾಮಾನ್ಯ. ಷಷ್ಠಿಯಂದು ಹುತ್ತಕ್ಕೆ ಕೋಳಿ ಬಲಿ ನೀಡಿದರೆ ನಾಗರ ಹಾವು ಕಾಣಿಸಿಕೊಳ್ಳುವುದಿಲ್ಲ. ಇಲ್ಲದಿದ್ದರೆ ಹಾವು ಕಾಣಿಸಿಕೊಂಡು ನಾಗದೋಷ ಕಾಡುತ್ತದೆ ಎಂಬ ನಂಬಿಕೆ ಇಲ್ಲಿನ ಗ್ರಾಮೀಣ ಭಾಗಗಳಲ್ಲಿದೆ’ ಎಂದು ಸ್ಥಳೀ ಯರು ತಿಳಿಸಿದರು. ಕೋಳಿ ಬಲಿ ನೀಡದ ಜನರು ಹುತ್ತಕ್ಕೆ ಬಾಳೆಹಣ್ಣು, ಹಾಲು- ಸಕ್ಕರೆಯ ನೈವೇದ್ಯ ಅರ್ಪಿಸುವ ಮೂಲಕ ಹಬ್ಬ ಆಚರಿಸಿದರು.

ಗುಂಡ್ಲುಪೇಟೆ ವರದಿ(ಸೋಮ್.ಜಿ): ತಾಲೂಕಿನಾದ್ಯಂತ ಸುಬ್ರಹ್ಮಣ್ಯ ಷಷ್ಠಿ ಹಬ್ಬವನ್ನು ಭಕ್ತಿ-ಭಾವದಿಂದ ಆಚರಿ ಸಲಾಯಿತು.
ಬೆಳಿಗ್ಗೆಯಿಂದಲೇ ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಹುತ್ತ, ನಾಗರಕಲ್ಲಿಗೆ ಮತ್ತು ಅಶ್ವಥಕಟ್ಟೆಗೆ ತೆರಳಿದ ಸಾರ್ವ ಜನಿಕರು ಪೂಜೆ ಸಲ್ಲಿಸಿ, ಹಾಲು ಮತ್ತು ಬೆಣ್ಣೆ ನೈವೇದ್ಯ ಸಮರ್ಪಿಸಿದರು.ಪೆÇೀಷಕರೊಂದಿಗೆ ಮಕ್ಕಳು ಸಹ ದೇವಸ್ಥಾನಗಳಿಗೆ ತೆರಳಿ ನಾಗರಕಲ್ಲಿಗೆ ಹಾಲಿನ ಅಭಿಷೇಕ ಮಾಡಿ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು.

Translate »