ಮೈಸೂರು: ಅಪರಿಚಿತ ವ್ಯಕ್ತಿಯೊಬ್ಬ ನಕಲಿ ಸಹಿ, ಚೆಕ್ ಬುಕ್ ಬಳಸಿ ತನ್ನ ಖಾತೆಯಿಂದ ಲಕ್ಷಾಂತರ ರೂ. ವರ್ಗಾ ಯಿಸಿ ವಂಚಿಸಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬರು ಜಯಲಕ್ಷ್ಮಿ ಪುರಂ ಠಾಣೆಗೆ ದೂರು ನೀಡಿದ್ದಾರೆ. ಡಾ.ದೇವರಾಜ್ ಎಂಬುವರು ಗಂಗೋತ್ರಿ ಬಡಾವಣೆಯ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‍ನಲ್ಲಿ ಖಾತೆಯನ್ನು ಹೊಂದಿದ್ದು, ನ.5ರಂದು ಬ್ಯಾಂಕಿಗೆ ತೆರಳಿ ಪಾಸ್ ಬುಕ್ ಎಂಟ್ರಿ ಮಾಡಿಸಿದಾಗ ಖಾತೆಯಲ್ಲಿ 1,81,91,892 ರೂ.ಗಳಿತ್ತು. ಪಾಸ್ ಬುಕ್ ಪರಿಶೀಲಿಸಲಾಗಿ ಸೆ.11ರಂದು ಚೆಕ್ ನಂ.27ರಲ್ಲಿ 8.75 ಲಕ್ಷ, ಆ.18 ರಂದು ಚೆಕ್ ನಂ.29ರಲ್ಲಿ 5 ಲಕ್ಷ, ಸೆ.27ರಂದು ಚೆಕ್ ನಂ.30ರಲ್ಲಿ 60 ಸಾವಿರ ರೂ. ಬಾಬುರಾವ್ ಎಂಬುವರ ಖಾತೆಗೆ ವರ್ಗಾವಣೆಯಾಗಿ ರುವುದು ಗೊತ್ತಾಗಿದೆ. ಬಾಬುರಾವ್ ಎಂಬ ಅಪರಿಚಿತ ವ್ಯಕ್ತಿ ನಕಲಿ ಚೆಕ್, ನಕಲಿ ಸಹಿ ಬಳಸಿ ಖಾತೆಯಿಂದ 14.45 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೇವರಾಜ್ ದೂರು ದಾಖಲಿಸಿದ್ದಾರೆ.
