ಆಸ್ತಿ ವಿಚಾರ: ನೇಣು  ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಮೈಸೂರು

ಆಸ್ತಿ ವಿಚಾರ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

December 14, 2018

ಮೈಸೂರು: ಆಸ್ತಿ ವಿಚಾರಕ್ಕೆ ಮನನೊಂದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಅರವಿಂದನಗರದಲ್ಲಿ ಮಂಗಳವಾರ ನಡೆದಿದೆ.
ಸಿದ್ದಾರ್ಥನಗರ ನಿವಾಸಿ ಅನಿಲ್ ಕುಮಾರ್(45) ಮೃತಪಟ್ಟವರು. ಇವರು 18 ವರ್ಷಗಳ ಹಿಂದೆ ಲಕ್ಷ್ಮೀ ಎಂಬುವರನ್ನು ವಿವಾಹ ವಾಗಿದ್ದು, ಪತ್ನಿಯೊಂದಿಗೆ ಸಿದ್ದಾರ್ಥನಗರದಲ್ಲಿ ವಾಸವಿದ್ದರು. ಆಸ್ತಿ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ತಾಯಿ- ಮಗನ ನಡುವೆ ಜಗಳ ನಡೆಯುತ್ತಿತ್ತು. ಮಂಗಳವಾರ ರಾತ್ರಿ ಅನಿಲ್ ಕುಮಾರ್, ಆಸ್ತಿ ಕೇಳಲು ಅರವಿಂದನಗರದ ತಾಯಿ ಮನೆಗೆ ಬಂದಾಗ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ತಾಯಿ ರಾಜಲಕ್ಷ್ಮೀ ಕೋಣೆ ಯೊಳಕ್ಕೆ ತೆರಳಿದಾಗ ಮನೆಯ ಹಾಲ್‍ನಲ್ಲಿದ್ದ ಫ್ಯಾನಿಗೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಕುವೆಂಪುನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »