ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆ ಗೇರಿಸಲಾಗಿದೆ ಎಂದು ಸಂಸದ ಆರ್. ಧ್ರುವನಾರಾಯಣ್ ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂ ಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತು ವಾರಿ ಸಮಿತಿ ಪರಿಶೀಲನಾ ಸಭೆಯ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು. ಯೋಜನೆಯ ಪ್ರಧಾನ ವ್ಯವಸ್ಥಾಪಕ ಭಾಸ್ಕರ್ ಮಾತನಾಡಿ, ಗುಂಡ್ಲುಪೇಟೆ, ಚಾಮ ರಾಜನಗರದ 32.8 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯ ನ್ನಾಗಿ ಪರಿವರ್ತಿಸಲಾಗಿದ್ದು, 156…
ಗಾಂಜಾ ಗಿಡ ವಶ: ಆರೋಪಿ ಬಂಧನ
October 28, 2018ಹನೂರು: ಮನೆಯ ಹಿತ್ತಲಿನಲ್ಲಿ ಅಕ್ರಮ ವಾಗಿ ಬೆಳೆದಿದ್ದ ಗಾಂಜಾ ಗಿಡ ವಶಪಡಿಸಿಕೊಂಡು ಆರೋಪಿ ಬಂಧಿಸುವಲ್ಲಿ ಹನೂರು ಪೊಲೀ ಸರು ಯಶಸ್ವಿಯಾಗಿದ್ದಾರೆ.ತಮಿಳುನಾಡು ಗಡಿಗ್ರಾಮ ಅರ್ಧನಾರಿಪುರ ಗ್ರಾಮದ ನಿವಾಸಿ ರಂಗಸ್ವಾಮಿ ಬಂಧಿತ ಆರೋಪಿ. ಘಟನೆ ವಿವರ: ರಂಗಸ್ವಾಮಿ ಮನೆಯ ಹಿತ್ತಲಿನಲ್ಲಿ ಸುತ್ತಲೂ ಬೇಲಿ ಕಟ್ಟಿ ಅದರೊಳಗೆ ಅಕ್ರಮವಾಗಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಹನೂರು ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಮೋಹಿತ್ ಸಹದೇವ್ ನೇತೃತ್ವದ ತಂಡ ದಾಳಿ ಮಾಡಿ 5 ಕೆಜಿ 700 ಗ್ರಾಂ ಗಾಂಜಾ ಗಿಡ…
ಮದ್ಯ ಮಾರಾಟ ನಿಷೇಧ
October 28, 2018ಚಾಮರಾಜನಗರ: ಕೊಳ್ಳೇಗಾಲ ನಗರಸಭೆ ವಾರ್ಡ್ ನಂ.9 ಹಾಗೂ ಗುಂಡ್ಲುಪೇಟೆ ತಾಪಂ ತೆರಕಣಾಂಬಿ ಕ್ಷೇತ್ರಕ್ಕೆ ಅ.28ರಂದು ನಡೆಯುವ ಚುನಾವಣೆ ಹಾಗೂ ಅ.31ರಂದು ನಡೆಯುವ ಮತ ಎಣಿಕೆ ಹಿನ್ನೆಲೆಯಲ್ಲಿ ಸೂಚಿತ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆದೇಶ ಹೊರಡಿಸಿದ್ದಾರೆ. ಕೊಳ್ಳೇಗಾಲ ನಗರಸಭೆ ವಾರ್ಡ್ ನಂ.9ರ ವ್ಯಾಪ್ತಿ ಹಾಗೂ ಇದರ ಗಡಿಯಿಂದ 3 ಕಿ.ಮೀ. ಅಂತರದಲ್ಲಿ ಹಾಗೂ ಗುಂಡ್ಲುಪೇಟೆ ತಾಲೂಕು ತೆರಕಣಾಂಬಿ ತಾಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ಇದರ ಗಡಿ ಯಿಂದ 3 ಕಿ.ಮೀ. ಅಂತರದಲ್ಲಿ ಬರುವ ಮದ್ಯದಂಗಡಿಗಳನ್ನು…
ಕುಡಿಯಲು ಹಣ ನೀಡದ ತಂದೆ ಹತ್ಯೆಗೈದ ಮಗ
October 28, 2018ಚಾಮರಾಜನಗರ: ಕುಡಿಯಲು ಹಣ ನೀಡದಿದ್ದಕ್ಕೆ ಕುಪಿತಗೊಂಡ ಮಗ ತನ್ನ ತಂದೆಯನ್ನೇ ಹತ್ಯೆ ಗೈದಿರುವ ಘಟನೆ ತಾಲೂಕಿನ ತಮ್ಮಡಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಗ್ರಾಮದ ನಿವಾಸಿ ಮಹದೇವನಾಯ್ಕ(60) ಹತ್ಯೆಗೊಳಗಾದವರು. ಅವರ ಮಗ ಸ್ವಾಮಿ ಹತ್ಯೆ ಆರೋಪಿ. ಘಟನೆ ವಿವರ: ಸ್ವಾಮಿ ಕುಡಿಯಲು ಹಣ ನೀಡುವಂತೆ ತಂದೆಯನ್ನು ಕೇಳಿದ್ದಾನೆ. ಈ ವೇಳೆ ಮಹದೇವನಾಯ್ಕ ಹಣ ನೀಡಲು ನಿರಾ ಕರಿಸಿದರು ಎನ್ನಲಾಗಿದೆ. ಇದರಿಂದ ಕುಪಿತ ಗೊಂಡ ಸ್ವಾಮಿ ದೊಣ್ಣೆಯಿಂದ ತನ್ನ ತಂದೆ ಮಹದೇವನಾಯ್ಕ ಅವರ ತಲೆಗೆ ಹೊಡೆದಿದ್ದಾನೆ. ಪರಿಣಾಮ ತೀವ್ರ…
ಕೆಎಸ್‍ಆರ್‍ಟಿಸಿ ನಿರ್ವಾಹಕನ ಮೇಲೆ ಹಲ್ಲೆ
October 28, 2018ಚಾಮರಾಜನಗರ: ಇಳಿಯಬೇಕಾಗಿದ್ದ ಸ್ಥಳದಲ್ಲಿ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಪ್ರಯಾಣಿಕನೊಬ್ಬ ಕೆಎಸ್‍ಆರ್‍ಟಿಸಿ ಬಸ್ ನಿರ್ವಾಹಕನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ದೊಡ್ಡರಾಯಪೇಟೆ ಕ್ರಾಸ್‍ನಲ್ಲಿ ಶುಕ್ರವಾರ ಸಂಜೆ ನಡೆದಿದೆ. ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ನಿವಾಸಿ ಮಹದೇವಸ್ವಾಮಿ ಹಲ್ಲೆ ಮಾಡಿದವರು. ನಿರ್ವಾಹಕ ನಾಗ ಮಲ್ಲೇಶ್ ಹಲ್ಲೆಗೆ ಒಳಗಾಗಿ ಗಾಯಗೊಂಡವರು. ಹಲ್ಲೆ ನಡೆಸಿದ ಮಹದೇವಸ್ವಾಮಿಯನ್ನು ಸಹ ಪ್ರಯಾಣಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರಿ ಗೋಮಾಳ, ಪಟ್ಟಾ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ
October 27, 2018ಚಾಮರಾಜನಗರ: ಜಿಲ್ಲೆಯ ಸರ್ಕಾರಿ ಗೋಮಾಳ ಮತ್ತು ಪಟ್ಟಾ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದು, 2004ರಿಂದ 2007ರವರೆಗೆ ಲೋಕಲ್ ಆಡಿಟ್ ಮೇರೆ ಭಾರತದ ಆಡಿಟ್ ಮತ್ತು ಅಕೌಂಟೆಂಟ್ ಜನರಲ್ ರವರ ಆದೇಶದಂತೆ 1687 ಕೋಟಿ ರೂ. ನಷ್ಟವನ್ನು ಗಣಿಗಾರಿಕೆ ನಡೆಸಿರುವವರಿಂದ ವಸೂಲಿ ಮಾಡುವಂತೆ ಆದೇಶ ಆಗಿದ್ದರೂ ಸಹ ಜಿಲ್ಲಾಡಳಿತ ಹಣ ವಸೂಲಿ ಮಾಡಿಲ್ಲ ಎಂದು ಪರಿಸರವಾದಿ ಡಿ.ಎಸ್.ದೊರೆಸ್ವಾಮಿ ದೂರಿದರು. ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ನಡೆಸಿ, ಪರಿಸರ ನಾಶ ಮಾಡಿರುವವರಿಂದ 1687 ಕೋಟಿ ರೂ.ಗಳನ್ನು ವಸೂಲಿ…
ಅಕ್ರಮ ಗಾಂಜಾ ಮಾರಾಟ ಯತ್ನ: ಓರ್ವನ ಬಂಧನ
October 27, 2018ಹನೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಬಸ್‍ನಿಲ್ದಾಣದಲ್ಲಿ ನಿಂತಿದ್ದ ಆರೋಪಿಯೊಬ್ಬನನ್ನು ಹನೂರು ಪೊಲೀಸರು ಬಂಧಿಸಿದ್ದಾರೆ.ಹನೂರು ಸಮೀಪದ ಬೈಲೂರು ಗ್ರಾಮದ ನಾಗಣ್ಣ ಆಲಿ ಯಾಸ್ ಹೋಟೆಲ್ ನಾಗಣ್ಣ ಬಂಧಿತ ಆರೋಪಿ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಜಡೇಸ್ವಾಮಿ ದೊಡ್ಡಿ ಗ್ರಾಮದ ಬಸ್‍ನಿಲ್ದಾಣದ ಬಳಿ ನಿಂತಿದ್ದಾಗ ಖಚಿತ ಮಾಹಿತಿ ಮೇರೆಗೆ ಹನೂರು ಇನ್ಸ್‍ಪೆಕ್ಟರ್ ಮೋಹಿತ್‍ಸಹದೇವ್ ಹಾಗೂ ಹೆಡ್ ಕಾನ್‍ಸ್ಟೇಬಲ್‍ಗಳಾದ ಸಿದ್ದೇಶ್, ಮಲ್ಲಿಕಾರ್ಜುನ, ಹೂವಯ್ಯ, ಕಾನ್‍ಸ್ಟೇಬಲ್‍ಗಳಾದ ರಾಜು, ಪ್ರದೀಪ್, ಚಂದ್ರಶೇಕರ್, ವೀರಭದ್ರ, ಬಿಳಿಗೌಡ ಇವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರಲ್ಲದೆ, ಆತನ…
ಇಂದು ವಿಚಾರಣಾಧೀನ ಖೈದಿಗಳಿಗೆ ಕಾನೂನು ಸೇವೆ ಅಭಿಯಾನ
October 27, 2018ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಕಾರಾ ಗೃಹ ಸಂಯುಕ್ತ ಆಶ್ರಯದಲ್ಲಿ ಅಕ್ಟೋ ಬರ್ 27ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾ ರಣಾಧೀನ ಖೈದಿಗಳಿಗೆ ಕಾನೂನು ಸೇವೆ ಗಳ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶ ಜಿ. ಬಸವರಾಜ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಶಾಂತಶ್ರೀ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ…
ಭ್ರಷ್ಟಾಚಾರ ಪ್ರಶ್ನಿಸಿದ ವ್ಯಕ್ತಿ ಮೇಲೆ ಗ್ರಾಪಂ ಅಧ್ಯಕ್ಷ ಹಲ್ಲೆ
October 27, 2018ಯಳಂದೂರು: ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆನ್ನಲಾದ ಭ್ರಷ್ಟಚಾರದ ಬಗ್ಗೆ ಪ್ರಶ್ನಿಸಿದ ವ್ಯಕ್ತಿಗೆ ಅಂಬಳೆ ಗ್ರಾಮ ಪಂಚಾ ಯಿತಿ ಅಧ್ಯಕ್ಷರೇ ನಡು ರಸ್ತೆಯಲ್ಲಿ ರೌಡಿ ಯಂತೆ ಹಲ್ಲೆ ನಡೆಸಿರುವ ಘಟನೆ ಅಂಬಳೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ತಾಲೂಕಿನ ಅಂಬಳೆ ಗ್ರಾಪಂ ಅಧ್ಯಕ್ಷ ಸಿ.ಸಿದ್ದನಾಯಕ ಅದೇ ಗ್ರಾಮದ ವೀರ ಶೈವ ಬೀದಿಯ ಮಾಜಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಸಿ.ಚಾಮರಾಜು ಮೇಲೆ ನಡೆಸಿದ್ದಾರೆ. ಗುರುವಾರ ಅಂಬಳೆ ಗ್ರಾಪಂನಲ್ಲಿ ನರೇಗಾ ಯೋಜನೆಯಲ್ಲಿ ಕಾಮಗಾರಿಗಳನ್ನು ನಡೆಸದೆ ಕೆಲವು ಕಾಮಗಾರಿಗಳಿಗೆ ಬಿಲ್ ಪಾವತಿಯಾಗಿರುವ ಬಗ್ಗೆಯೂ…
ಕಾಡು ಹಂದಿ ದಾಳಿ; ರಾಗಿ ಬೆಳೆ ನಾಶ
October 27, 2018ಚಾಮರಾಜನಗರ: ತಾಲೂಕಿನ ಅರಕಲವಾಡಿ ಗ್ರಾಮದಲ್ಲಿ ಕಾಡು ಹಂದಿಗಳು ಜಮೀನಿಗೆ ದಾಳಿ ಮಾಡಿ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ರಾಗಿ ಬೆಳೆ ನಾಶಪಡಿಸಿವೆ. ಗ್ರಾಮದ ದೊಡ್ಡಮ್ಮ ಬಿನ್ ವೆಂಕಟಯ್ಯ ಎಂಬುವರಿಗೆ ಸೇರಿದ 3 ಎಕರೆ ಜಮೀನಿನಲ್ಲಿ ರಾಗಿ ಬೆಳೆಯಲಾಗಿತ್ತು. ರಾತ್ರಿ ವೇಳೆ ಜಮೀನಿಗೆ ಲಗ್ಗೆ ಇಟ್ಟ ಕಾಡು ಹಂದಿಗಳುರಾಗಿ ಬೆಳೆಯನ್ನು ತಿಂದು, ತುಳಿದು ನಾಶ ಪಡಿಸಿವೆ. ಇದರಿಂದ ಸಾವಿರಾರು ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ನಷ್ಟಕ್ಕೆ ಒಳಗಾಗಿರುವ ದೊಡ್ಡಮ್ಮ ಅವರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು…