ಅಕ್ರಮ ಗಾಂಜಾ ಮಾರಾಟ ಯತ್ನ: ಓರ್ವನ ಬಂಧನ
ಚಾಮರಾಜನಗರ

ಅಕ್ರಮ ಗಾಂಜಾ ಮಾರಾಟ ಯತ್ನ: ಓರ್ವನ ಬಂಧನ

October 27, 2018

ಹನೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಬಸ್‍ನಿಲ್ದಾಣದಲ್ಲಿ ನಿಂತಿದ್ದ ಆರೋಪಿಯೊಬ್ಬನನ್ನು ಹನೂರು ಪೊಲೀಸರು ಬಂಧಿಸಿದ್ದಾರೆ.ಹನೂರು ಸಮೀಪದ ಬೈಲೂರು ಗ್ರಾಮದ ನಾಗಣ್ಣ ಆಲಿ ಯಾಸ್ ಹೋಟೆಲ್ ನಾಗಣ್ಣ ಬಂಧಿತ ಆರೋಪಿ.

ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಜಡೇಸ್ವಾಮಿ ದೊಡ್ಡಿ ಗ್ರಾಮದ ಬಸ್‍ನಿಲ್ದಾಣದ ಬಳಿ ನಿಂತಿದ್ದಾಗ ಖಚಿತ ಮಾಹಿತಿ ಮೇರೆಗೆ ಹನೂರು ಇನ್ಸ್‍ಪೆಕ್ಟರ್ ಮೋಹಿತ್‍ಸಹದೇವ್ ಹಾಗೂ ಹೆಡ್ ಕಾನ್‍ಸ್ಟೇಬಲ್‍ಗಳಾದ ಸಿದ್ದೇಶ್, ಮಲ್ಲಿಕಾರ್ಜುನ, ಹೂವಯ್ಯ, ಕಾನ್‍ಸ್ಟೇಬಲ್‍ಗಳಾದ ರಾಜು, ಪ್ರದೀಪ್, ಚಂದ್ರಶೇಕರ್, ವೀರಭದ್ರ, ಬಿಳಿಗೌಡ ಇವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರಲ್ಲದೆ, ಆತನ ಬಳಿಯಿದ್ದ ಒಂದು ಕೆಜಿ ಗಾಂಜಾವನ್ನು ವಶಪಡಿಸಿಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಅವರ ಮಾರ್ಗದಶನದಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »