ಲಯನ್ಸ್ ಸಂಸ್ಥೆಗೆ ಉತ್ತಮ ಸೇವಾ ಸಂಸ್ಥೆ ಅವಾರ್ಡ್
ಕೊಡಗು

ಲಯನ್ಸ್ ಸಂಸ್ಥೆಗೆ ಉತ್ತಮ ಸೇವಾ ಸಂಸ್ಥೆ ಅವಾರ್ಡ್

October 27, 2018

ಕೊಳ್ಳೇಗಾಲ: ಕೊಳ್ಳೇಗಾಲ ಲಯನ್ಸ್ ಸಂಸ್ಥೆ ಉತ್ತಮ ರೀತಿಯಲ್ಲಿ ಸೇವೆ ನಿರ್ವಹಿಸಿದ್ದಕ್ಕಾಗಿ ಉತ್ತಮ ಸೇವಾ ಸಂಸ್ಥೆ ಎಂದು ಪರಿಗಣಿಸಿ ಲಯನ್ಸ್ 317ಎ ಜಿಲ್ಲೆ ಗುರು ತಿಸಿ ಅವಾರ್ಡ್ ನೀಡಿ ಗೌರವಿಸಿದೆ.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಅವಾರ್ಡ್ ಲಭಿಸಿದೆ ಎಂದು ಕಾರ್ಯದರ್ಶಿ ವೆಂಕಟೇಶ್ ತಿಳಿಸಿದ್ದಾರೆ. ಲಯನ್ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಒಗ್ಗೂಡಿ ಅಕ್ಟೋಬರ್ ತಿಂಗ ಳಲ್ಲಿ ಹಲವು ಸೇವಾ ಕಾರ್ಯಕ್ರಮಗಳನ್ನು ಕೈಗೊಂಡು ಪ್ರಶಂಸೆಗೆ ಭಾಜನರಾಗಿದ್ದರು. ಅ.1ರಂದು ರಕ್ತದಾನ ಶಿಬಿರ ನಡೆಸಿ 53 ಬಾಟಲ್‍ಗೂ ಅಧಿಕ ರಕ್ತ ಸಂಗ್ರಹಿಸಿ ಗಮನ ಸೆಳೆಯಲಾಗಿತ್ತು. ಅ.2ರಂದು ದೇವಾಂಗ ರುದ್ರಭೂಮಿಯಲ್ಲಿ ಗಿಡ ನೆಟ್ಟು ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು. 3ರಂದು ಸರ್ಕಾರಿ ಶಾಲೆಯ 80ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಅಯೋಜಿಸಲಾಗಿತ್ತು.

4ರಂದು ಬುದ್ಧಿಮಾಂದ್ಯ ಕರುಣಾಲಯ ಶಾಲೆಯ ಮಕ್ಕಳಿಗೆ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. 5ರಂದು ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಬಗ್ಗೆ ನೂರಕ್ಕೂ ಅಧಿಕ ಮಂದಿಗೆ ಉಚಿತ ತಪಾಸಣೆ ಕೈಗೊಳ್ಳಲಾ ಗಿತ್ತು. 6 ರಂದು ಕೌದಳ್ಳಿಯ ಕರುಣಾಭವನ ವೃದ್ಧಾಶ್ರಮದಲ್ಲಿ ದಿನೋಪಯೋಗಿ ವಸ್ತು ಹಾಗೂ ಭವನಕ್ಕೆ ಯುಪಿಎಸ್ ನೀಡಲಾಯಿತು. ಅಲ್ಲದೆ ವಿವಿಧೆಡೆ ಇನ್ನೂರಕ್ಕೂ ಅಧಿಕ ಮಕ್ಕಳಿ ಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 317ಎ ಜಿಲ್ಲೆ ನಮ್ಮ ಸೇವಾ ಕಾರ್ಯಗಳನ್ನು ಗಮನಿಸಿ ಅವಾರ್ಡ್ ನೀಡಿರು ವುದು ಸಂತಸ ತಂದಿದೆ ಎಂದು ವೆಂಕಟೇಶ್ ತಿಳಿಸಿದರು.

Translate »